ಪಿಎಸಿಎಲ್ ಕಂಪನಿಗೆ ಸೇರಿದ್ದ 15 ಕೋಟಿ ಮೌಲ್ಯದ ಜಮೀನು ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ 12 ಂದಿ ಆರೋಪಿಗಳ ವಿರುದ್ದ ಬೆಂಗಳೂರು ಗ್ರಾಮಾಂತರ ಪೊಲೀಸರು ಚಾರ್ಜ್‌ಶೀಟ್ ಸಲ್ಲಸಿಸದ್ದಾರೆ.
ಈ ಹಿಂದೆ ಪಿಎಸಿಎಲ್ ಕಂಪನಿ ವಿರುದ್ದ ಅಕ್ರಮ ಹಣ ವರ್ಗಾವಣೆ ಸಾರ್ವಜನಿರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಈ ಕುರಿತು ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಾದ-ಪ್ರತಿವಾದವನ್ನ ಆಲಿಸಿದ ಸುಪ್ರೀಂ ಕೋರ್ಟ್ ಲೋಧ ಕಮಿಟಿಯನ್ನು ರಚಿಸಿ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಸಮಿತಿಯೂ ಪಿಎಸಿಎಲ್ ಕಂಪನಿ 5 ಕೋಟಿ ಜನರಿಗೆ 49100 ಕೋಟಿ ಹಣ ವಂಚನೆ ಮಾಡಿರುವ ಬಗ್ಗೆ ಬೆಳಕಿಗೆ ಬಂದಿತ್ತು.
ಈ ಹಿಂದೆ ಪಿಎಸಿಎಲ್ ಕಂಪನಿಗೆ ಸೇರಿದ ಆಸ್ತಿ ಪರಭಾರೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು ಅದರಂತೆ ಆರೋಪಿಗಳು ಸುಪ್ರೀಂ ಆದೇಶವಿದ್ದರು ಪಿಎಸಿಎಲ್ ಗೆ ಸೇರಿದ ಸ್ವತ್ತನ್ನು ಪರಭಾರೆ ಮಾಡಿದ್ದರು.
ಆರೋಪಿಗಳಾದ ಮಂಜುನಾಥ್, ಆಯುಷ್ ತಾಪ, ಚಂದ್ರಮೋಹನ್ ಶ್ರೀನಿವಾಸ್, ನಿರ್ಮಲ್ ದೌಲತ್ ತೋರಣೆ , ಅನಿಲ್ ಕುಮಾರ್ ಶ್ರೀನಿವಾಸ್ , ಪ್ರವೀಣ್ ಕುಮಾರ್ ಮೇಲೆ ಚಾರ್ಚ್ ಶೀಟ್ ದಾಖಲು.. ಆರೋಪಿಗಳ ಜೊತೆ ಎಂ/ಎಸ್ ವುಡ್ಸ್ ವಿಲ್ಲಾ ಪ್ರಾಜೆಕ್ಟ್ ಪ್ರೈ.ಲಿ ಮತ್ತು ಎಂ/ಎಸ್ ಮೆಘಾಸ್ಟ್ರಚ್ಚರ್ಸ್ ಇನ್ಪ್ರಾಕಾನ್ ಪ್ರೈ. ಲಿ ಮೇಲೂ ಚಾರ್ಚ್ ಶೀಟ್ಅನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಸಲ್ಲಿಸಿದ್ದಾರೆ.






