• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರತಾಪ್ ಸಿಂಹ ಬರೀ ಸುಳ್ಳು ಹೇಳಿಕೊಂಡೆ ಜೀವನ ಮಾಡ್ತಿದ್ದಾರೆ, ಅವರ ಸಾಧನೆ ಶೂನ್ಯ: ಎಂ ಲಕ್ಷ್ಮಣ್

Any Mind by Any Mind
November 19, 2022
in ಕರ್ನಾಟಕ
0
ಪ್ರತಾಪ್ ಸಿಂಹ ಬರೀ ಸುಳ್ಳು ಹೇಳಿಕೊಂಡೆ ಜೀವನ ಮಾಡ್ತಿದ್ದಾರೆ, ಅವರ ಸಾಧನೆ ಶೂನ್ಯ: ಎಂ ಲಕ್ಷ್ಮಣ್
Share on WhatsAppShare on FacebookShare on Telegram

ಮೈಸೂರಿಗೆ ಸಂಸದ ಪ್ರತಾಪ್ ಸಿಂಹ ಸಾಧನೆ ಶೂನ್ಯ. ಬರೀ ಸುಳ್ಳು ಹೇಳಿಕೊಂಡೆ ಪ್ರತಾಪ್ ಸಿಂಹ ಜೀವನ ಮಾಡ್ತಿದ್ದಾರೆ . ಅಭಿವೃದ್ಧಿಯಲ್ಲಿ ಮೈಸೂರು ಹಿಂದೆ ಬೀಳ್ತಿದೆ ಅಂತ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.. ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ಶೆಲ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಮೈಸೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸ್ವಪಕ್ಷದ ಸಂಸದ ಮತ್ತು ಶಾಸಕರು ಮೈಸೂರಿನ ಮರ್ಯಾದೆಯನ್ನ ಹರಾಜು ಹಾಕ್ತಾ ಇದ್ದಾರೆ. ಸಂಸದ ಪ್ರತಾಪ್ ಸಿಂಹ ಕೊಡುಗೆ ಮೈಸೂರಿಗೆ ಏನೂ ಇಲ್ಲ. ಬರಿ ಆಶ್ವಾಸನೆ ಕೊಡುವುದರಲ್ಲಿ ಕಾಲ ಕಳೆದಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ..

ಮೈಸೂರಿಗೆ ಹೊಸ ರೈಲ್ವೆ ಟರ್ಮಿನಲ್ ತರುತ್ತೇನೆ ಎಂದು ೨೦೧೭ ರಲ್ಲೇ ಹೇಳಿದರು, ಏರ್ ಪೋರ್ಟ್ ವಿಸ್ತರಣೆ ಮಾಡುತ್ತೇನೆ ಎಂದಿದ್ದರು ಅದೂ ಆಗಿಲ್ಲ. ಕುಶಾಲನಗರಕ್ಕೆ ರೈಲು ಬಿಡ್ತಿನಿ ಎಂದಿದ್ದರು. ದಸರಾಗೂ ಮುಂಚೆ ಬೆಂಗಳೂರು ಮೈಸೂರು ದಶಪಥ ರಸ್ತೆ ಕಾಮಗಾರಿ ಮುಗಿಯುಸತ್ತೇನೆ ಎಂದಿದ್ದರು. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಅದೂ ಕೂಡ ಮುಗಿದಿಲ್ಲ. ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸುವುದನ್ನ ಬಿಟ್ಟು ಬಸ್ ಶೆಲ್ಟರ್ ವಿಚಾರ ತೆಗೆದುಕೊಂಡು ಸಣ್ಣ ವಿಚಾರವನ್ನ ದೊಡ್ಡದು ಮಾಡಿ ಸಮಾಜದ ಶಾಂತಿ ಕದಡುತ್ತಿದ್ದಾರೆ. ನೀವು ಕೇವಲ ಬಿಜೆಪಿಯವರಿಗೆ ಸಂಸದರಲ್ಲ 35 ಲಕ್ಷ ಜನರಿಗೆ ನೀವು ಪ್ರತಿನಿಧಿ ಎಂದು ಗುಡುಗಿದರು.

ಗುಂಬಜ್ ಮಾದರಿಯ ಕಟ್ಟಡ ಕಟ್ಟಬಾರದು ಅಂಥ ನಿಮ್ಮ ಕೇಂದ್ರದ ನಿರ್ದೇಶನ ಇದೆಯಾ..? ಸಂವಿಧಾನದಲ್ಲಿ ಕಾನೂನು ಇದೆಯಾ..? ಒಡೆದು ಹಾಕುತ್ತೇನೆ ಅಂದಿದ್ರಿ ಒಡೆದು ಹಾಕಿ ನೋಡೋಣ. ನಿಮ್ಮ ಧಮ್ಮ ತಾಕತ್ತು ತೋರಿಸಿ ಈಗ. ನೀವು ಕೊಟ್ಟ ಗಡುವು ಮುಗಿದಿದೆಯಲ್ಲ ಹೋಗಿ ಒಡಿರಿ ನೋಡೋಣ. ಪ್ರಚೋದನಕಾರಿ ಹೇಳಿಕೆ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತೀರಾ. ನಾಳೆ ಜನ ನಿಮಗೆ ಕಲ್ಲು ತಗೋಂಡು ಹೊಡಿತಾರೆ. ಮುಸ್ಲೀಮರನ್ನೇ ಟಾರ್ಗೆಟ್ ಮಾಡೋದ ನಿಲ್ಲಿಸಿ ಇದೇ ರೀತಿ ಮುಂದುವರಿದರೆ ನಿಮ್ಮ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಡೂಮ್ ಮಾದರಿಯ 350 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ‌. ಅದರಲ್ಲಿ 157 ಕಟ್ಟಡಗಳು ಸರ್ಕಾರಿ ಕಟ್ಟಡಗಳು. 59 ಕಟ್ಟಡಗಳಲ್ಲಿ ಮೇಲೆ ಡೂಮ್ ಮಾದರಿ ಇದೆ. ಎಲ್ಲವನ್ನ ಒಡೆದು ಬಿಡ್ತಿರಾ..? ಸಾರ್ವಜನಿಕರಿಗೆ ಮನರಂಜನೆ ಕೊಡುವ ಕೆಲಸ ಮಾಡುತ್ತೀರಾ.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು

Tags: BJPಬಿಜೆಪಿ
Previous Post

ಮತದಾರರ ಮಾಹಿತಿಗೆ ಕನ್ನ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ವಿಚಾರಣೆಯನ್ನು ನಡೆಸಲು ಕಾಂಗ್ರೆಸ್ ಮನವಿ

Next Post

ಮತದಾರರ ಮಾಹಿತಿ ಕಳ್ಳತನ: ʼಚಿಲುಮೆಯಿಂದ ಪಡೆದ ಸೇವೆʼಗಾಗಿ 17.5 ಲಕ್ಷ ಪಾವತಿಸಿರುವ ಬಿಜೆಪಿ ಮಾಜಿ ಶಾಸಕ ನಂದೀಶ್‌ ರೆಡ್ಡಿ.!

Related Posts

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..
Top Story

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

by ಪ್ರತಿಧ್ವನಿ
May 23, 2026
0

ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ...

Read moreDetails
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

May 23, 2026
“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

May 23, 2026
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
Next Post
ಮತದಾರರ ಮಾಹಿತಿ ಕಳ್ಳತನ: ʼಚಿಲುಮೆಯಿಂದ ಪಡೆದ ಸೇವೆʼಗಾಗಿ 17.5 ಲಕ್ಷ ಪಾವತಿಸಿರುವ ಬಿಜೆಪಿ ಮಾಜಿ ಶಾಸಕ ನಂದೀಶ್‌ ರೆಡ್ಡಿ.!

ಮತದಾರರ ಮಾಹಿತಿ ಕಳ್ಳತನ: ʼಚಿಲುಮೆಯಿಂದ ಪಡೆದ ಸೇವೆʼಗಾಗಿ 17.5 ಲಕ್ಷ ಪಾವತಿಸಿರುವ ಬಿಜೆಪಿ ಮಾಜಿ ಶಾಸಕ ನಂದೀಶ್‌ ರೆಡ್ಡಿ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!