ಸರ್ಕಾರಿ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಭಾರತದಲ್ಲಿ 2009 ರಲ್ಲಿ ಆಧಾರ್ ಅನ್ನು ಪರಿಚಯಿಸಲಾಯಿತು. ಈ ಕಾರ್ಡ್ಗಳು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುತ್ತವೆ, ಮತ್ತು ಫೋಟೋ, ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ಗಳನ್ನು ಸಹ ಒಳಗೊಂಡಿರುತ್ತವೆ. ಈಗ ತೆರಿಗೆ ಕಟ್ಟುವುದರಿಂದ ಹಿಡಿದು ಸರ್ಕಾರವು ಜನತೆಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪಡೆಯುವವರೆಗೆ ಎಲ್ಲಕ್ಕೂ ಆಧಾರ್ ಕಡ್ಡಾಯವಾಗಿದೆ. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ 1.2 ಬಿಲಿಯನ್ಗಿಂತಲೂ ಹೆಚ್ಚು ಜನರಿಗೆ ಆಧಾರ್ ಐಡಿಗಳನ್ನು ನೀಡಲಾಗಿದೆ. ಆದರೆ ಇನ್ನೂ ಲಕ್ಷಾಂತರ ಭಾರತೀಯರು ಆಧಾರ್ ಹೊಂದಿರುವುದಿಲ್ಲ. ಅವರಲ್ಲಿ ದೊಡ್ಡ ಸಂಖ್ಯೆಯ ನಿರಾಶ್ರಿತರು, ಟ್ರಾನ್ಸ್ಜೆಂಡರ್ಗಳು ಮತ್ತು ಸ್ಥಳೀಯ ಆದಿವಾಸಿ ಜನರಿದ್ದಾರೆ, ಅವರು ನೋಂದಣಿಗಾಗಿ ಅಗತ್ಯವಿರುವ ಶಾಶ್ವತ ವಿಳಾಸ ಅಥವಾ ಇತರ ದಾಖಲೆಗಳನ್ನು ಹೊಂದಿರುವುದಿಲ್ಲ.
ಈಗ ಇದೇ ಆಧಾರ್ ದೇಶದ ಮಕ್ಕಳ ಶಿಕ್ಷಣವನ್ನೂ ಕಸಿದುಕೊಳ್ಳುತ್ತಿದೆ ಎಂಬ ಕೂಗು ಎದ್ದಿದೆ. ಲಕ್ಷಾಂತರ ಬಡ ಮಕ್ಕಳಿಗೆ ಆಧಾರ್ ಇಲ್ಲದೇ ಇರುವುದರಿಂದ ಶಾಲೆಗಳಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ಉತ್ತರಪ್ರದೇಶದ ಲಕ್ನೋದಲ್ಲಿ ಶಾಲೆಯಿಂದ ಹೊರಗುಳಿದ ಒಂಭತ್ತು ವರ್ಷದ ರಾಖಿ ಮತ್ತವಳ ಇಬ್ಬರು ಸಹೋದರ ಸಹೋದರಿಯರು.
ಶಾಲೆಯಲ್ಲಿರಬೇಕಾದ ಈ ಮಕ್ಕಳು ಮನೆಯಲ್ಲಿದ್ದಾರೆ. ಅವರು ಕಳೆದ ವರ್ಷ ಅವರು ಲಕ್ನೋದಿಂದ 110 ಕಿ.ಮೀ ದೂರದಲ್ಲಿರುವ ಹಾರ್ದೋಯಿಯಿಂದ ಲಕ್ನೋ ಗೆ ಬಂದಿದ್ದರು. ಈಗ ಲಕ್ನೋದ ಶಾಲೆಗಳಲ್ಲಿ ಆಧಾರ್ ಇಲ್ಲದೇ ಇರುವ ಕಾರಣಕ್ಕಾಗಿ ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿದೆ.
“ನಾವು ಹಾರ್ದೋಯಿಯಲ್ಲಿರುವಾಗ ಮಕ್ಕಳು ಅಲ್ಲಿನ ಖಾಸಗಿ ಶಾಲೆಗೆ ಹೋಗುತ್ತಿದ್ದರು. ಅಲ್ಲಿ ಅವರು ಆಧಾರ್ ಕೇಳಿರಲಿಲ್ಲ” ಎನ್ನುತ್ತಾರೆ ಅವರ ತಾಯಿ ಸುನಿತಾ ಸಕ್ಸೇನಾ. ಸುನೀತಾ ಮತ್ತವರ ಪತಿ ಜೀವನೋಪಾಯಕ್ಕಾಗಿ ಹೆದ್ದಾರಿ ಬದಿಗಳಲ್ಲಿ ಕುರುಕುಲು ತಿಂಡಿಗಳನ್ನು ಮಾರಾಟ ಮಾಡುವ ವೃತ್ತಿಯನ್ನು ಅವಲಂಬಿಸಿದ್ದಾರೆ.
ಕಳೆದ ವರ್ಷ ನಾವು ಮಕ್ಕಳಿಗಾಗಿ ಆಧಾರ್ ಕಾರ್ಡ್ಗಳನ್ನು ಪಡೆಯಲು ಕಛೇರಿಯೊಂದ ಕಛೇರಿಗೆ ಅಲೆದಿದ್ದೇವೆ. ಆದರೆ ನಮಗೆ ಆಧಾರ್ ಪಡೆಯಲು ಸಾಧ್ಯವಾಗಲಿಲ್ಲ. ನಾವು ಮಕ್ಕಳು ಶಾಲೆಗೆ ಹೋಗಬೇಕೆಂದರೆ ಅವರನ್ನು ಮತ್ತೆ ಹಾರ್ದೋಯಿಗೆ ಕಳಿಸಬೇಕಷ್ಟೇ. ಇಲ್ಲಿ ಅವರ ಜೀವನದ ಬಹುಮುಖ್ಯ ಅವಧಿ ವ್ಯರ್ಥವಾಗುತ್ತದೆ ಎನ್ನುತ್ತಾರೆ ಸುನೀತಾ.
ಈ ಬಗ್ಗೆ ಮಾತಾಡಿರುವ ಉತ್ತರ ಪ್ರದೇಶ ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿ ವಿಜಯ್ ಕಿರಣ್ ಆನಂದ್ “ಆಧಾರ್ ಇಲ್ಲದೇ ಇರುವುದಕ್ಕಾಗಿ ಯಾವುದೇ ವಿದ್ಯಾರ್ಥಿಗೆ ರಾಜ್ಯ ಶಿಕ್ಷಣ ಸೌಲಭ್ಯಗಳನ್ನು ನಿರಾಕರಿಸಲಾಗಿಲ್ಲ” ಎಂದು ಹೇಳಿದ್ದಾರೆ.
“ಆಧಾರ್ ಹೊಂದಿರದೇ ಇರುವವರು ಬಹುತೇಕ ಬಡವರು ಮತ್ತು ಹಿಂದುಳಿದ ಸಮುದಾಯಕ್ಕೆ ಸೇರಿರುವವರು. ಅವರು ಆಧಾರ್ಗೆ ಬೇಡಿಕೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋಗುವಷ್ಟು ಪ್ರಬಲರಲ್ಲ” ಎನ್ನುತ್ತಾರೆ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ದೀಪಾ ಸಿನ್ಹಾ.
ಪಡಿತರ ವಿತರಣೆಯಲ್ಲಿನ ಸಮಸ್ಯೆಗಳು
2014ರಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಧಾರ್ ಕಡ್ಡಾಯವಾಗಬಾರದು ಎಂದು ಹೇಳಿತ್ತು. ಮತ್ತು 2018 ರಲ್ಲಿ ಮೊಬೈಲ್ ಸಿಮ್ ಕಾರ್ಡ್ಗಳನ್ನು ನೋಂದಾಯಿಸಿಕೊಳ್ಳುವುದರಿಂದ ಹಿಡಿದು ಪಿಂಚಣಿ ಸ್ವೀಕಾರದವರೆಗೆ ಎಲ್ಲದಕ್ಕೂ ಆಧಾರ್ ಕೇಳಬಾರದು ಎಂದು ಸರ್ಕಾರಕ್ಕೆ ತಾಕೀತು ಮಾಡಿತ್ತು. “ಆಧಾರ್ ಇಲ್ಲದೇ ಇರುವ ಕಾರಣಕ್ಕೆ ಸರ್ಕಾರೀ ಸೌಲಭ್ಯಗಳನ್ನು ಯಾರಿಗೂ ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಈ ಪ್ರವೃತ್ತಿ ನಿರಂತರವಾಗಿ ಮುಂದುವರಿಯುತ್ತಿದೆ” ಎನ್ನುತ್ತಾರೆ ಸಿನ್ಹಾ. ಏಪ್ರಿಲ್ನಲ್ಲಿ, ಭಾರತದ ಆಡಿಟರ್ ಜನರಲ್ ಅವರು ಆಧಾರ್ ವಿತರಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (ಯುಐಡಿಐಐ) ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ನೀಡುವ ವ್ಯವಸ್ಥೆಯನ್ನು ಪುನರ್ಪರಿಶೀಲಿಸಬೇಕು ಎಂದು ಕೇಳಿಕೊಂಡಿತ್ತು.
ಗರ್ಭಿಣಿ ಮಹಿಳೆಯರಿಗೆ ಉಚಿತ ಆಹಾರವನ್ನು ಒದಗಿಸುವ ಸರ್ಕಾರಿ ಕಾರ್ಯಕ್ರಮ ಮತ್ತು ಆರು ವರ್ಷ ವಯಸ್ಸಿನ ಬಡ ಮಕ್ಕಳಿಗೆ ಆಹಾರ ಒದಗಿಸುವ ಯೋಜನೆಯಲ್ಕೂ ಆಧಾರ್ ಕೇಳಲಾಗುತ್ತಿದೆ ಎಂದು ಇತ್ತೀಚೆಗೆ ಪ್ರಕಟವಾದ ತನಿಖಾ ವರದಿಯೊಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಗುವಿಗೆ ಆಧಾರ್ ‘ಕಡ್ಡಾಯವಲ್ಲ’ ಆದರೆ ಅದರ ಪೋಷಕರಿಗೆ ಬೇಕು ಎಂದು ಟ್ವೀಟ್ನಲ್ಲಿ ಸಮಜಾಯಿಷಿ ನೀಡಿತ್ತು.
ಸುಮಾರು 80 ದಶಲಕ್ಷ ಮಕ್ಕಳು ಆಹಾರ ಒದಗಿಸುವ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೇವಲ ಕಾಲು ಭಾಗಕ್ಕಿಂತಲೂ ಕಡಿಮೆ ಮಕ್ಕಳು ಆಧಾರ್ ಹೊಂದಿದ್ದಾರೆ. ಆಹಾರ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡುವುದು ಲಕ್ಷಾಂತರ ಬಡ ಮಕ್ಕಳನ್ನು ಮತ್ತು ಇನ್ನೂ ಕೋವಿಡ್ ಪ್ರಭಾವದಿಂದ ಬಳಲುತ್ತಿರುವ ಅವರ ಕುಟುಂಬಗಳನ್ನು ವಂಚಿಸಿದಂತೆ ಎನ್ನುತ್ತಾರೆ ಸಿನ್ಹಾ.
ಮಾಹಿತಿ ಸೋರುವಿಕೆಯ ಆತಂಕಗಳು
ವಿಶ್ವ ಬ್ಯಾಂಕ್ ಪ್ರಕಾರ, ಜಾಗತಿಕವಾಗಿ ಒಂದು ಶತಕೋಟಿಗಿಂತಲೂ ಹೆಚ್ಚು ಜನರು ತಮ್ಮ ಗುರುತನ್ನು ಸಾಬೀತುಪಡಿಸುವ ಯಾವುದೇ ಮಾರ್ಗವನ್ನು ಹೊಂದಿಲ್ಲ. ಪ್ರಪಂಚದಾದ್ಯಂತದ ಸರ್ಕಾರಗಳು ಉತ್ತಮ ಆಡಳಿತಕ್ಕಾಗಿ ಡಿಜಿಟಲ್ ID ವ್ಯವಸ್ಥೆಯನ್ನು ಅಂಚಿನಲ್ಲಿರುವ, ಹಿಂದುಳಿದ ಸಮುದಾಯಗಳು ಸಾಮಾಜಿಕ ರಕ್ಷಣೆಯ ಯೋಜನೆಗಳ ಸೌಲಭ್ಯಗಳು ಪಡೆದುಕೊಳ್ಳುವುದರಿಂದ ವಂಚಿತರಾಗಬಾರದು ಎನ್ನುತ್ತಾರೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಶೇಷ ವರದಿಗಾರರು. ಭಾರತದಲ್ಲಿ ಸಹ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ತಂತ್ರಜ್ಞಾನ ತಜ್ಞರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಯೋಮೆಟ್ರಿಕ್ಸ್ ವೈಫಲ್ಯದ ಸಾಧ್ಯತೆಗಳು ಮತ್ತು ಡಾಟಾದ ದುರುಪಯೋಗದ ಬಗ್ಗೆ ಕಾಲಕಾಲಕ್ಕೆ ಧ್ವನಿ ಎತ್ತುತ್ತಾ ಬಂದಿದ್ದಾರೆ.
ಆದರೆ UIDAIಯು ತಾನು ‘ದೃಢವಾದ ಭದ್ರತಾ ವ್ಯವಸ್ಥೆಯನ್ನು’ ಹೊಂದಿದ್ದು ಅದನ್ನು ‘ಡಾಟಾದ ಭದ್ರತೆ ಮತ್ತು ಗೌಪ್ಯತೆ ಖಚಿತಪಡಿಸಿಕೊಳ್ಳುವಂತೆ’ ವಿನ್ಯಾಸಗೊಳಿಸಲಾಗಿದೆ ಎಂದಿದೆ.