• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಇಂದು ವರನಟ ರಾಜ್‌ಕುಮಾರ್‌ ಜನ್ಮದಿನ: ಇಲ್ಲಿದೆ ಅಣ್ಣಾವ್ರ ಬದುಕಿನ ಕುತೂಹಲಕಾರಿ 10 ಸಂಗತಿಗಳು..

Any Mind by Any Mind
April 24, 2022
in ಸಿನಿಮಾ
0
ಇಂದು ವರನಟ ರಾಜ್‌ಕುಮಾರ್‌ ಜನ್ಮದಿನ: ಇಲ್ಲಿದೆ ಅಣ್ಣಾವ್ರ ಬದುಕಿನ ಕುತೂಹಲಕಾರಿ 10 ಸಂಗತಿಗಳು..
Share on WhatsAppShare on FacebookShare on Telegram

ವರನಟ ಡಾ ರಾಜ್‌ಕುಮಾರ್ ಅವರು ಬದುಕಿದಿದ್ದರೆ ಇಂದಿಗೆ ಅವರಿಗೆ 93 ವರ್ಷ ವಯಸ್ಸಾಗುತ್ತಿತ್ತು. 1929ರ ಏಪ್ರಿಲ್ 24ರಂದು ಜನಿಸಿದ ರಾಜಕುಮಾರ್, ಅವರ ಮೂಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು. ರಂಗಭೂಮಿಯಿಂದ ಸಿನೆಮಾ ಕ್ಷೇತ್ರಕ್ಕೆ ಬಂದ ಅವರು ಮುಂದೆ ರಾಜ್‌ಕುಮಾರ್‌ ಎಂದೇ ಜನಪ್ರಿಯರಾದರು. ಅಭಿಮಾನಿಗಳ ಪಾಲಿನ ರಾಜಣ್ಣಾ ಕನ್ನಡ ಚಿತ್ರರಂಗದಲ್ಲಿ ತಲುಪಿರುವ ಸ್ಥಾನವನ್ನು ಬೇರೆ ಯಾವ ನಟರೂ ತಲುಪಿಲ್ಲ.  ಕನ್ನಡ ಕಲೆ ಮತ್ತು ಸಾಹಿತ್ಯ, ಸಂಸ್ಕೃತಿಗೂ ರಾಜ್‌ ಒಂದು ಐಕಾನ್.‌

ADVERTISEMENT

ರಾಜ್‌ ಕುಮಾರ್‌ ಎಂದರೆ ಬರಿಯ ಒಬ್ಬ ನಟರಲ್ಲ ಅದಕ್ಕೂ ಮಿಗಿಲಾಗಿ ಕನ್ನಡದ ಅಸ್ಮಿತೆಯಾಗಿ ರೂಪುಗೊಂಡವರು, ತಮ್ಮ ನಟನಾ ಕೌಶಲ್ಯಗಿಂತಲೂ ತಮ್ಮ ವಿನಮ್ರತೆಯಿಂದ ಹೆಚ್ಚು ಪ್ರಸಿದ್ಧರಾಗಿದ್ದರು. ತಾವೊಬ್ಬ ಸೂಪರ್‌ ಸ್ಟಾರ್‌ ಎಂದು ತನಗೇ ಗೊತ್ತಿಲ್ಲ ಎಂಬಂತೆ ಅವರ ವರ್ತೆನೆಯಿತ್ತು. ಅವರ ಕನ್ನಡ ಭಾಷಾ ಬಳಕೆಗೆಂತೂ ಮಾರು ಹೋಗದವರಿಲ್ಲ

ರಾಜ್‌ಕುಮಾರ್ ಕೇವಲ ಸಾಂಸ್ಕೃತಿಕ ಐಕಾನ್ ಮಾತ್ರವಲ್ಲ. ಕನ್ನಡ ವಾತಾವರಣದಲ್ಲಿ ಆರಾಧ್ಯ ದೈವ ಎಂಬುದನ್ನೂ ಮೀರಿದ ಸ್ಥಾನಮಾನವನ್ನು ಅವರು ಹೊಂದಿದ್ದಾರೆ. ರಾಜ್‌ಕುಮಾರ್‌ ತಮ್ಮ ಎಂಟನೇ ವಯಸ್ಸಿನಲ್ಲಿ ಗುಬ್ಬಿ ವೀರಣ್ಣನವರ ಗುಬ್ಬಿ ಡ್ರಾಮಾ ಕಂಪನಿಯಲ್ಲಿ ನಾಟಕಕಾರರಾಗಿ ಕೆಲಸ ಮಾಡಿದರು. ನಂತರ ಚಿತ್ರರಂಗಕ್ಕೆ ಸೇರಿದರು, ಅಲ್ಲಿಂದ ನಟ ಸಾರ್ವಭೌಮ , ಬಂಗಾರದ ಮನುಷ್ಯ, ವರ ನಟ, ರಾಜಣ್ಣ ಎಂದೆಲ್ಲಾ ಹೆಸರಿನಿಂದ ಜನಪ್ರಿಯಗೊಂಡರು. ಇಂತಹ ವರನಟನಿಗೆ ಸಂಬಂಧಿಸಿದ 10 ಕುತೂಹಲಕಾರಿ ಸಂಗತಿಗಳು ಇಲ್ಲಿವೆ.  

1. ರಾಜಕುಮಾರ್ ಅವರು ಗಾಜನೂರಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಎನ್ನುವುದು ಅವರ ಮೂಲ ಹೆಸರು.

2. ಕೇವಲ ಮೂರನೇ ತರಗತಿವರೆಗೆ ಓದಿದ ಅವರು ನಂತರ ಶಾಲೆಯನ್ನು ತೊರೆದು ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ವಿವಿಧ ಹಳ್ಳಿಗಳಿಗೆ ಹೋಗಿ ನಾಟಕ ಪ್ರದರ್ಶನ ನೀಡುವ ನಟರಾದರು.

3. ಅವರ ಮೊದಲ ಚಿತ್ರವಾದ ʼಬೇಡರ ಕಣ್ಣಪ್ಪʼದಲ್ಲಿ ನಾಯಕನಾಗಿ ನಟಿಸುವ ಮೊದಲು, ಅವರು 1952 ರಲ್ಲಿ ʼಶ್ರೀ ಶ್ರೀನಿವಾಸ ಕಲ್ಯಾಣʼದಲ್ಲಿ ಏಳು ಸಪ್ತಋಷಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. ಅದೊಂದು ಸಣ್ಣ ಪಾತ್ರ, ಆ ದೃಶ್ಯದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಮುನ್ನವೇ ಆ ದೃಶ್ಯ ಮುಗಿದು ಹೋಗಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.

4. ಅವರು ಆಗಾಗ್ಗೆ ಕುತಂತ್ರದ ಖಳನಾಯಕರನ್ನು ಸೋಲಿಸುವ ಒರಟಾದ ನಾಯಕರಾಗಿ ನಟಿಸಿದ್ದರು, ಆದರೆ ಅವರು ಎಂದಿಗೂ ತೆರೆಯ ಮೇಲೆ ಸಿಗರೇಟ್ ಸೇದಿರಲಿಲ್ಲ, ಅಪರೂಪವಾಗಿ ಕುಡುಕನ ಪಾತ್ರವನ್ನು ನಿರ್ವಹಿಸಿದ್ದರು. ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ, ಎಂದಿಗೂ ಖಳನಾಯಕನಾಗಿ ನಟಿಸಲಿಲ್ಲ.

5. ಅಭಿಮಾನಿಗಳು ಅವರನ್ನು ‘ಅಣ್ಣಾವ್ರು’ ಎಂದು ಕರೆಯುತ್ತಿದ್ದರು. ಅಭಿಮಾನಿಗಳನ್ನು ಅವರು ದೇವರು ಎಂದು ಕರೆಯುತ್ತಿದ್ದರು.

6. ಜುಲೈ 30, 2000 ರಂದು, ದಕ್ಷಿಣ ಭಾರತದ ಕಾಡುಗಳಲ್ಲಿ ಅವಿತಿದ್ದ ವೀರಪ್ಪನ್ ಎಂಬ ಕುಖ್ಯಾತ ಡಕಾಯಿತನಿಂದ ಅಪಹರಣಕ್ಕೊಳಗಾದರು. 109 ದಿನಗಳ ಕಾಲ ಕಾಡಿನಲ್ಲಿ ಒತ್ತೆಯಾಳಾಗಿದ್ದ ರಾಜ್‌ ಕುಮಾರ್‌ ರನ್ನು ನಂತರ ಬಿಡುಗಡೆ ಮಾಡಲಾಯಿತು.

7. ತಮ್ಮ ರಂಗಭೂಮಿ ದಿನಗಳಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ನಿಪುಣ ಗಾಯಕರಾದರು.  1974 ರಿಂದ ಹೆಚ್ಚಾಗಿ ತಮ್ಮ ಚಿತ್ರಗಳಿಗೆ ತಾವೇ ಹಾಡಿದರು.

8. ದೊರೈರಾಜ್ ಭಗವಾನ್ ಅವರ 1978 ರ ಕನ್ನಡ ಚಲನಚಿತ್ರ ಆಪರೇಷನ್ ಡೈಮಂಡ್ ರಾಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ಅವರು ಕನ್ನಡ ಚಲನಚಿತ್ರಗಳ ಇತಿಹಾಸದಲ್ಲಿ ಏಕೈಕ ಇಂಗ್ಲಿಷ್ ಹಾಡನ್ನು ಹಾಡಿದ್ದಾರೆ.

9. 1968ರಲ್ಲಿ ರಾಜ್‌ಕುಮಾರ್ ನಾಯಕನಾಗಿ ಒಂದೇ ವರ್ಷದಲ್ಲಿ 16 ಸಿನಿಮಾಗಳು ತೆರೆಕಂಡಿದ್ದವು.

10. ಅವರ ಚಲನಚಿತ್ರ ವೃತ್ತಿಜೀವನದಲ್ಲಿ, ರಾಜ್‌ಕುಮಾರ್ ಹನ್ನೊಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳು, ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅವರು 2002 ರಲ್ಲಿ NTR ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದರು ಮತ್ತು ಭಾರತೀಯ ಚಿತ್ರರಂಗಕ್ಕೆ ಜೀವಮಾನದ ಕೊಡುಗೆಗಾಗಿ 1983 ರಲ್ಲಿ ಪದ್ಮಭೂಷಣ ಮತ್ತು 1995 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Previous Post

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿಎಸ್ ಯಡಿಯೂರಪ್ಪ ಪತ್ರ

Next Post

ರಾಜ್ಯದಲ್ಲಿ ಶುರುವಾಗಿದೆ ಔಷಧಿಗಳ ಕೊರತೆ : ಟೆಂಡರ್ ನಡೆಯದ ಕಾರಣ ಕೆಲ‌ ಔಷಧಗಳು ಅಲಭ್ಯ !

Related Posts

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು
ಸಿನಿಮಾ

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

by ಪ್ರತಿಧ್ವನಿ
May 21, 2026
0

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
Next Post
ರಾಜ್ಯದಲ್ಲಿ ಶುರುವಾಗಿದೆ ಔಷಧಿಗಳ ಕೊರತೆ : ಟೆಂಡರ್ ನಡೆಯದ ಕಾರಣ ಕೆಲ‌ ಔಷಧಗಳು ಅಲಭ್ಯ !

ರಾಜ್ಯದಲ್ಲಿ ಶುರುವಾಗಿದೆ ಔಷಧಿಗಳ ಕೊರತೆ : ಟೆಂಡರ್ ನಡೆಯದ ಕಾರಣ ಕೆಲ‌ ಔಷಧಗಳು ಅಲಭ್ಯ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada