ಇತ್ತೀಚಿಗೆ ಬೆಂಗಳೂರುನಲ್ಲಿ ಸೈಬರ್ ಕ್ರೈಮ್ ಗಳು ಹೆಚ್ಚಾಗುತ್ತಿದ್ದು, ಈ ವರ್ಷದ ಮೊದಲ ಆರು ತಿಂಗಳಲ್ಲೇ ಸೈಬರ್ ಅಪರಾಧಗಳಿಂದಾಗಿ ಬೆಂಗಳೂರಿಗರು ಬರೊಬ್ಬರಿ 845 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬೃಹತ್ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದಂತೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದೆ.
ಜನವರಿಯಿಂದ ಜೂನ್ ತಿಂಗಳ ವೇಳೆಗೆ ಒಟ್ಟು 9,260 ಪ್ರಕರಣಗಳಲ್ಲಿ ದಾಖಲಾಗಿದ್ದು, ಈ ಪೈಕಿ 1,485 ಪ್ರಕರಣಗಳು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳಾಗಿವೆ.ಎಲ್ಲಾ ವಂಚನೆಗಳು ಕರೆಗಳನ್ನು ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಸೇವೆಗಳನ್ನು ಬಳಸಿಕೊಂಡು ಮಾಡಲಾಗಿದೆ. ಈ ಹಗರಣದಲ್ಲಿ ಸಂತ್ರಸ್ತರಿಗೆ 41.53 ಕೋಟಿ ರೂ. ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಸೈಬರ್ ಕ್ರೈಂಗಳಿಂದಾಗಿ ಒಟ್ಟು 240 ಕೋಟಿ ರೂ ವಂಚನೆಯಾಗಿದೆ. ಆದರೆ ಮುಂದಿನ ನಾಲ್ಕು ತಿಂಗಳಲ್ಲಿ ಈ ಪ್ರಮಾಣ 845 ಕೋಟಿ ರೂ.ಗೆ ಏರಿಕೆಯಾಗಿವೆ ಎಂದು ವರದಿಯಾಗಿದೆ. ಸಾರ್ವಜನಿಕ ವೈ-ಫೈ ನೆಟ್ವರ್ಕ್ಗಳು ಸಾಮಾನ್ಯವಾಗಿ ಎನ್ಕ್ರಿಪ್ಟ್ ಆಗಿರುವುದಿಲ್ಲ, ಇದರಿಂದಾಗಿ ಸೈಬರ್ ಅಪರಾಧಿಗಳು ಸುಲಭವಾಗಿ ಮೊಬೈಲ್ ಹಾಗೂ ಇನ್ನಿತರ ಡೇಟಾಗಳನ್ನು ಸುಲಭವಾಗಿ ವಶಪಡಿಸಿಕೊಳ್ಳುತ್ತಾರೆ.