ರಾಜ್ಯದಲ್ಲಿ ನಿಯೋಜಿತ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣ ವಚನ ಸ್ವೀಕರಕ್ಕೆ ಎಲ್ಲಾ ರೀತಿಯಾದ ತಯಾರಿಯನ್ನ ನಡೆಸಲಾಗಿದೆ.

ಆದ್ರೆ ಈ ಇಬ್ಬರು ನಾಯಕರ ಜೊತೆ ಯಾರ್ಯಾರು ಇವತ್ತು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಪ್ರಶ್ನೆಗಳು ಮೂಡಿದ್ದವು, ಆದ್ರೆ ಅದಕ್ಕೆ ನಿಖರವಾದ ಉತ್ತರ ಸಿಕ್ಕಿರಲಿಲ್ಲ, ಆದ್ರೆ ಈಗ ಎಐಸಿಸಿ ಸಿದ್ದು ಹಾಗೂ ಡಿಕೆಶಿ ಜೊತೆ 8 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ಚಿಕರಿಸುವ ಬಗ್ಗೆ ಅಧಿಕೃತವಾಗಿ ಹೆಸರುಗಳನ್ನ ಪ್ರಕಟಿಸಿದೆ.

ಅವುಗಳಲ್ಲಿ ಪ್ರಮುಖವಾಗಿ ಡಾ.ಜಿ. ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೋಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗ ರೆಡ್ಡಿ, ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರನ್ನ ಆಯ್ಕೆ ಮಾಡಲಾಗಿದೆ.

ಇನ್ನು ಮೊನ್ನೆ ನಡೆದಂತಹ ಸಿಎಲ್‌ಪಿ ನಾಯಕರ ಸಭೆಯಲ್ಲಿ ಸುಧೀರ್ಘ ಚರ್ಚೆಯ ಬಳಿಕ ನಿಯೋಜಿತ ಸಿದ್ದರಾಮಯ್ಯ ಅವರು ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಸಾಂಭವ್ಯ ಅಭ್ಯರ್ಥಿಗಳ ಪಟ್ಟಿಯನ್ನ ತೆಗೆದುಕೊಂಡು ದೆಹಲಿ ತಲುಪಿದ್ದರು, ಇಂದು ಆ ಪಟ್ಟಿಯಲ್ಲಿ 8 ಜನರನ್ನ ಪ್ರಮಾಣ ವಚನ ಸ್ವೀಕಾರಕ್ಕೆ ಹೈ ಕಮಾಂಡ್ ಬುಲಾವ್ ನೀಡಿದೆ…






