ಮಧ್ಯಮ ಕ್ರಮಾಂಕದಲ್ಲಿ ಜಾನಿ ಬೇರ್ ಸ್ಟೋ ಮತ್ತು ಜೋ ರೂಟ್ ಗಳಿಸಿದ ಅಜೇಯ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ ಭಾರತ ತಂಡಕ್ಕೆ ಭರ್ಜರಿ ತಿರುಗೇಟು ನೀಡಿದ್ದು, 5ನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ಕುತೂಹಲ ಘಟ್ಟ ತಲುಪಿದೆ.
ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಪಂದ್ಯದ ಉಪಾಂತ್ಯ ದಿನವಾದ ಭಾರತ ಒಡ್ಡಿದ 378 ರನ್ ಗುರಿ ಬೆಂಬತ್ತಿದ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿದ್ದು, ಉಳಿದ 7 ವಿಕೆಟ್ ಗಳಿಂದ 119 ರನ್ ಗಳಿಸಬೇಕಾಗಿದೆ.
ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ ತಂಡಕ್ಕೆ ಅಲೆಕ್ಸ್ ಲೀಸ್ (56) ಮತ್ತು ಜಾಕ್ ಕ್ರಾವ್ಲೆ (46) ಮೊದಲ ವಿಕೆಟ್ ಗೆ 107 ರನ್ ಜೊತೆಯಾಟದ ಮೂಲಕ ಭರ್ಜರಿ ಆರಂಭ ನೀಡಿದರು. ಜಸ್ ಪ್ರೀತ್ ಬುಮ್ರಾ ಇವರಿಬ್ಬರನ್ನು ಔಟ್ ಮಾಡಿದರು. ಅಲೆಕ್ಸ್ ರನೌಟ್ ಆದರು.

ಈ ಹಂತದಲ್ಲಿ ಜೊತೆಯಾದ ಬೇರ್ ಸ್ಟೊ ಮತ್ತು ಜೋ ರೂಟ್ ಮುರಿಯದ 4ನೇ ವಿಕೆಟ್ ಗೆ 150 ರನ್ ಜೊತೆಯಾಟದ ಮೂಲಕ ಹೋರಾಟ ನಡೆಸಿದ್ದು, ಭಾರತ ತಂಡ ಈ ಪಂದ್ಯ ಗೆಲ್ಲಬೇಕಾದರೆ ಉಳಿದ 7 ವಿಕೆಟ್ ಗಳನ್ನು ಕೀಳಬೇಕಾದ ಒತ್ತಡಕ್ಕೆ ಸಿಲುಕಿದೆ.