ಕೋವಿಡ್ ಎರಡನೇ ಅಲೆಯಲ್ಲಿ ದೇಶಾದ್ಯಂತ 270 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (IMA) ಮಂಗಳವಾರ ತಿಳಿಸಿದೆ.
ಮೃತ ವೈದ್ಯರ ಪಟ್ಟಿಯಲ್ಲಿ ಮಾಜಿ ಐಎಂಎ ಅಧ್ಯಕ್ಷ ಡಾ ಕೆ ಕೆ ಅಗರ್ವಾಲ್ ಕೂಡ ಸೇರಿದ್ದಾರೆ, ಅವರು ಸೋಮವಾರ ಸೋಂಕಿಗೆ ಬಲಿಯಾಗಿದ್ದಾರೆಂದು ವಿಷಾಧ ವ್ಯಕ್ತಪಡಿಸಿದೆ.
ಬಿಹಾರದಲ್ಲಿ 78 ವೈದ್ಯರು ಸಾವನ್ನಪ್ಪಿದ್ದಾರೆ, ಉತ್ತರ ಪ್ರದೇಶ (37), ದೆಹಲಿ (29) ಮತ್ತು ಆಂಧ್ರಪ್ರದೇಶ (22) ಸಾವನ್ನಪ್ಪಿದ್ದಾರೆ ಎಂದು ಐಎಂಎ ತಿಳಿಸಿದೆ.
ಕೋವಿಡ್ ಮೊದಲ ಅಲೆಯಲ್ಲಿ ದೇಶಾದ್ಯಂತ ಒಟ್ಟು 748 ವೈದ್ಯರು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಆದರೆ ಈ ಬಾರಿ ಕಡಿಮೆ ಅವಧಿಯಲ್ಲಿ 270 ವೈದ್ಯರನ್ನು ಕಳೆದುಕೊಂಡಿದ್ದೇವೆಂದಿದೆ.
ಕೋವಿಡ್ ಎರಡನೇ ಅಲೆಯು ತೀವ್ರವಾಗಿದ್ದು, ವಿಶೇಷವಾಗಿ ಆರೋಗ್ಯ ಕಾರ್ಯಕರ್ತರಿಗೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಸುದ್ದಿ ಸಂಸ್ಥೆ ಪಿಟಿಐ ಗೆ ತಿಳಿಸಿದ್ದಾರೆ.