Day: November 25, 2021

ನಟ ಚೇತನ್‌ ಈ ದೇಶದ ಪ್ರಜೆಯೇ ಅಲ್ಲ, ಮಾಂಸಹಾರಿ & ಸಸ್ಯಹಾರಿಗಳ ನಡುವೆ ತಂದಿಟ್ಟು ಧರ್ಮ ಒಡೆಯುತ್ತಿದ್ದಾರೆ – ಹಿಂದೂಪರ ಸಂಘಟನೆ

ನಟ ಚೇತನ್‌ ಈ ದೇಶದ ಪ್ರಜೆಯೇ ಅಲ್ಲ, ಮಾಂಸಹಾರಿ & ಸಸ್ಯಹಾರಿಗಳ ನಡುವೆ ತಂದಿಟ್ಟು ಧರ್ಮ ಒಡೆಯುತ್ತಿದ್ದಾರೆ – ಹಿಂದೂಪರ ಸಂಘಟನೆ

ಕಳೆದ ಹತ್ತು ದಿನಗಳ ಹಿಂದೆ ನಾದ ಬ್ರಹ್ಮ ಹಂಸಲೇಖ ಅವರು ದಲಿತ ಕೇರಿಗಳಿಗೆ ಪೇಜಾವರ ಶ್ರೀಗಳ ಭೇಟಿ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಇದು ಹಿಂದೂ ಧರ್ಮಕ್ಕೆ ಮತ್ತು ...

ವಾಯು ಮಾಲಿನ್ಯವೇಕೆ ರಾಜಕೀಯ ಸರಕಾಗಿಲ್ಲ?

ವಾಯು ಮಾಲಿನ್ಯವೇಕೆ ರಾಜಕೀಯ ಸರಕಾಗಿಲ್ಲ?

ದೆಹಲಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ದೀಪಾವಳಿ ಬಳಿಕ ವಾಯು ಮಾಲಿನ್ಯದ ಸೂಚ್ಯಂಕ ಇನ್ನೂ ಏರಿಕೆಯಾಗಿದ್ದು, ಸರ್ಕಾರವು ಭೌತಿಕ ತರಗತಿಗಳಿಗೆ ರಜೆ ನೀಡುವ ಅನಿವಾರ್ಯತೆ ಎದುರಿಸುತ್ತಿದೆ. ವರ್ಕ್ ಫ್ರಂ ಹೋಮ್ ಮುಂದುವರಿಕೆಗೆ ಸೂಚನೆ ನೀಡಿದೆ. ಉಸಿರಾಡುವ ಗಾಳಿಯ ಗುಣಮಟ್ಟ ಇಷ್ಟು ಕಳಪೆ ಮಟ್ಟಕ್ಕೆ ಇಳಿದಿದ್ದರೂ, ಈ ಸಮಸ್ಯೆ ಎಂದೂ ರಾಜಕೀಯ ರೂಪ ತಾಳಿಲ್ಲ. ಇಂದು ದೆಹಲಿಗೆ ಒದಗಿರುವ ಪರಿಸ್ಥಿತಿ ನಾಳೆ ಬೆಂಗಳೂರು ಅಥವಾ ಕರ್ನಾಟಕದ ಇತರ ನಗರಗಳದ್ದೂ ಆಗಿರಬುದು. ಹಾಗಾಗಿ ಈ ಕುರಿತು ಜೈ ಕಿಸಾನ್ ಆಂದೋಲನ್ ಹಾಗೂ ಸ್ವರಾಜ್ ಇಂಡಿಯಾ ಸ್ಥಾಪಕ ಯೋಗೇಂದ್ರ ಯಾದವ್ ಬರೆದಿರುವ ಲೇಖನದ ಸಂಕ್ಷಿಪ್ತ ರೂಪ ಇಲ್ಲಿದೆ.  ವಾಯು ಮಾಲಿನ್ಯ ರಾಜಕೀಯ ಸಮಸ್ಯೆಯಲ್ಲ ಏಕೆ? ಕಳೆದೊಂದು ವಾರದಿಂದ ನಿಮ್ಮ ಮನಸ್ಸಿನಲ್ಲಿ ಈ ಪ್ರಶ್ನೆ ಮೂಡಿದ್ದರೆ, ನೀವೊಬ್ಬರೇ ಅಲ್ಲ. ನೀವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಒಂದೋ ನೀವು ನಿಮ್ಮ ಆರೈಕೆ ಮಾಡಬೇಕು, ಇಲ್ಲವಾದರೆ ನಿಮ್ಮ ನೆರೆಹೊರೆಯವರ ಕೆಮ್ಮು, ಉಸಿರಾಟದ ಸಮಸ್ಯೆ ಹಾಗೂ ಕಣ್ಣಿನ ಸಮಸ್ಯೆಗಳ ಕುರಿತು ಕೇಳಬೇಕು. ಇವೆರಡೂ ಸಾಧ್ಯವಾಗದಿದ್ದರೆ ಸುಮ್ಮನೆ ಕಿಟಕಿಯ ಹೊರಗೆ ನೋಡಬೇಕು. ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಾಗಿ ಧನ್ಯವಾದ. ಇಲ್ಲಿನ ಜನರು ಭಯಬೀತರಾಗಿದ್ದಾರೆ, ದೆಹಲಿಯ ವಾಯುವಿನ ಗುಣಮಟ್ಟ ಸೂಚ್ಯಂಕ ನೋಡಿ ಆಗಬೇಕು ಕೂಡಾ. ಇಷ್ಟಾದರೂ, ಪ್ರಜಾಪ್ರಭುತ್ವದಡಿಯಲ್ಲಿ ರೂಪಿತಗೊಂಡ ಚುನಾಯಿತ ಸರ್ಕಾರಗಳು ಏಕೆ ಈ ಕುರಿತು ಮೌನವಹಿಸಿವೆ? ಇದೊಂದು ಆಲಸ್ಯದ, ನಿಷ್ಕಪಟ ಅಥವಾ ನೈತಿಕತೆಯನ್ನು ಎತ್ತಿಹಿಡಿಯುವ ಪ್ರಶ್ನೆಯಲ್ಲ. ಇದೊಂದು ನಿಜವಾದ ಒಗಟು. ಭೃಷ್ಟಾಚಾರ ಅತವಾ ದೂರದೃಷ್ಟಿತ್ವ ಇಲ್ಲದ ರಾಜಕಾರಣ ಅಥವಾ ರಾಜಕಾರಣಿಯ ಕುರಿತು ದೋಷಾರೋಪಣೆ ಮಾಡುವ ವಿಚಾರ ಇದಲ್ಲ. ಪ್ರತಿದಿನ ನಡೆಯುವ ರಾಜಕೀಯ ಮಾರುಕಟ್ಟೆ ಇದ್ದ ಹಾಗೆ. ಒಬ್ಬ ಉದ್ಯಮಿ ಹೇಗೆ ಲಾಭಕ್ಕಾಗಿ ಕೆಲಸ ಮಾಡುತ್ತಾನೋ, ರಾಜಕಾರಣಿಗಳು ಅಧಿಕಾರಕ್ಕಾಗಿ ಕೆಲಸ ಮಾಡುತ್ತಾರೆ. ಒಬ್ಬ ಅಂಗಡಿ ಮಾಲಿಕ ಲಾಭವಿಲ್ಲದೆ ತನ್ನ ಅಂಗಡಿಯನ್ನು ನಡೆಸುವುದಿಲ್ಲವೋ, ಅದೇ ರೀತಿ ರಾಜಕಾರಣಿಗಳು ಚುನಾವಣೆಯ ಸೋಲನ್ನು ಲೆಕ್ಕಿಸದೆ ಜನರ ಸೇವೆ ಮಾಡಲು ಮುಂದಾಗುವುದಿಲ್ಲ. ರಾಜಕೀಯ ಪಕ್ಷಗಳು ತಮಗೆ ಲಾಭವಾಗುವ ವಿಚಾರಗಳನ್ನು ಎಂದೂ ಬಿಡುವುದಿಲ್ಲ, ನಷ್ಟ ಅನುಭವಿಸಬೇಕಾದ ವಿಚಾರಗಳನ್ನು ಎಂದೂ ಹಿಡಿಯುವುದಿಲ್ಲ. ಅವರೆಂದೂ, ಪ್ರಾಮಾಣಿಕರಾಗಿ, ವಿವೇಕದಿಂದ ವರ್ತಿಸುವುದಿಲ್ಲ. ಏಕೆಂದರೆ, ಅದು ಚುನಾವಣೆಯ ವೇಳೆ ಉಪಯೋಗಕ್ಕೆ ಬರುವುದಿಲ್ಲ.  ವಾಯು ಮಾಲಿನ್ಯ ವಿಭಿನ್ನವಾದ ವಿಚಾರ. ಅಥವಾ ಅದನ್ನು ‘ವಿಭಿನ್ನ’ ಎಂದು ಪರಿಗಣಿಸಬೇಕೇ? ಇದೊಂದು ಅತ್ಯಂತ ಸಣ್ಣದಾದ ಅಥವಾ ಕಣ್ತಪ್ಪಿನಿಂದ ನಿರ್ಲಕ್ಷಿಸಬಹುದಾದ ವಿಚಾರವಲ್ಲ. ಇದನ್ನು ನೋಡಲು ನಿಮಗೆ ಮಾಧ್ಯಮಗಳ ಅಗತ್ಯವಿಲ್ಲ. ನಿಮ್ಮ ಆರೋಗ್ಯದ ಮೇಲೆ ಧೂಮಾವಿಷ್ಟ ಹಿಮ (Smog- ಹಿಮ ಮತ್ತು ಹೊಗೆಯ ಮಿಶ್ರಣ) ಉಂಟುಮಾಡಬಹುದಾದ ದುಷ್ಪರಿಣಾಮಗಳ ಕುರಿತು ಅರಿಯಲು ನಿಮಗೆ ವೈದ್ಯಕೀಯ ಜ್ಞಾನದ ಅಗತ್ಯವಿಲ್ಲ. ಗಾಳಿಯ ಗುಣಮಟ್ಟ ನಿಮ್ಮ ಆರೋಗ್ಯದ ಮೇಲೆ ಮಾತ್ರ ಅಲ್ಪ ಕಾಲದ ದುಷ್ಪರಿಣಾಮ ಬೀರುವುದಿಲ್ಲ, ಬದಲಾಗಿ ಇದು ನಿಮ್ಮ ಜೀವಿತಾವಧಿಯನ್ನು ಮೊಟಕುಗೊಳಿಸುತ್ತದೆ. ಹೀಗಾಗಿ, ‘ರಾಜಕೀಯ ಉದ್ಯಮಿಗಳು’ ಈ ವಿಚಾರದ ಕುರಿತು ಹೋರಾಡಲು ಧಾವಿಸಬೇಕು, ಇದರ ಪ್ರಯೋಜನವನ್ನು ಚುನಾವಣೆಯಲ್ಲಿ ಪಡೆದುಕೊಳ್ಳಬೇಕು. ಕನಿಷ್ಟಪಕ್ಷ ರಾಜಕೀಯ ಮಾರುಕಟ್ಟೆಯ ತರ್ಕ ಇದನ್ನೇ ಹೇಳುತ್ತದೆಯಾದ್ದರಿಂದ ಉದ್ಯಮಿಗಳು ಧಾವಿಸಲೇಬೇಕಾಗಿದೆ.  ಅಂದಹಾಗೆ, ರಾಜಕಾರಣಕ್ಕೆ ತರ್ಕಕ್ಕೆ ಜಾಗವಿಲ್ಲ. ಕಳೆದೆರಡು ವಾರಗಳಲ್ಲಿ ಸುಪ್ರಿಂ ಕೋರ್ಟಿನಲ್ಲಿ ನಡೆದ ಬೆಳವಣಿಗೆಗಳು ವಾರ್ಷಿಕ ಆಚರಣೆಯಂತಾಗಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ. ಇದು ಅಪಾಯಕಾರಿ ಮಟ್ಟವನ್ನು ದಾಟಿದ ನಂತರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಯಾರಾದರೂ ಕೋರ್ಟ್ ಮೊರೆ ಹೋಗುತ್ತಾರೆ, ಕೋರ್ಟ್ ಸರ್ಕಾರಗಳಿಗೆ ನಿರ್ದೇಶನ ನೀಡುತ್ತದೆ. ನಾವು ಮುಂದಿನ ವರ್ಷ ಇದೇ ಬೆಳವಣಿಗೆಗಳನ್ನು ನೋಡಲು ಕಾಯುತ್ತೇವೆ.  ಆಪ್, ಬಿಜೆಪಿ, ಎಂಸಿಡಿನಿಷ್ಕ್ರೀಯತೆ:  ಆಮ್ ಆದ್ಮಿ ಪಕ್ಷ ನೇತೃತ್ವದ ದೆಹಲಿ ಸರ್ಕಾರ ಇತರ ಕ್ಷೇತ್ರಗಳಲ್ಲಿ ಮಾಡಿರಬಹುದಾದ ಸಾಧನೆಗಳ ಕುರಿತು ಒಂದು ವಿಸ್ತಾರವಾದ ಚರ್ಚೆಯನ್ನೇ ನಡೆಸಬಹುದು. ಆದರೆ, ವಾಯು ಮಾಲಿನ್ಯ ಸಮಸ್ಯೆಗೆ ಸಂಬಂಧಿಸಿದಂತೆ ಅವರು ಯಾವುದೇ ಕ್ರಮಗಳನ್ನು ಕೈಗೊಂಡಿದ್ದಾರೆಂದು ಅವರ ಸ್ನೇಹಿತರೂ ಹೇಳಲಿಕ್ಕಿಲ್ಲ. ಕಳೆದ ಆರು ವರ್ಷಗಳಲ್ಲಿ ಸರ್ಕಾರಿ ಬಸ್ಸುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಮೆಟ್ರೋ ದರ ಏರಿಕೆಯಾಗಿದೆ. ಸಾರ್ವಜನಿಕ ಸಾರಿಗೆ ಕೇಂದ್ರಗಳಿಂದ ಜನರ ಮನೆಗಳಿಗೆ ತೆರಳಲು ಇರುವ ವ್ಯವಸ್ಥೆ (Last mile connectivity) ಇಲ್ಲವೇ ಇಲ್ಲ ಎಂಬಂತಾಗಿದೆ. ಸ್ಮಾಗ್ ಟವರ್’ನಂತಹ ರಾಝಕೀಯ್ ಗಿಮಿಕ್’ಗಳ ಹೊರತಾಗಿ ದೆಹಲಿ ಸರ್ಕಾರ ಏನನ್ನೂ ಮಾಡಿಲ್ಲ.  ದೆಹಲಿ ಸರ್ಕಾರದೊಂದಿಗೆ ಹೋಲಿಸಿದರೆ, ಮುನಿಸಿಪಾಲ್ ಕಾರ್ಪೊರೇಷನ್ ಆಫ್ ಡೆಲ್ಲಿ (ಎಂಸಿಡಿ) ಮತ್ತು ನರೇಂದ್ರ ಮೋದಿ ಸರ್ಕಾರ ಹೇಳಿಕೊಳ್ಳುವಂತಹ ಸಾಧನೆಯೇನೂ ಮಾಡಿಲ್ಲ. ಕೇಜ್ರಿವಾಲರಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಯತ್ನಿಸುವ ಮೋದಿ ಸರ್ಕಾರ ಸುಪ್ರಿಂ ಕೋರ್ಟಿನಲ್ಲಿ ಅಫಿಡವಿಟ್ ದಾಖಲಿಸುವ ಧಾವಂತದಲ್ಲಿದೆಯೇ ಹೊರತಾಗಿ, ಯಾವುದೇ ಸಕ್ರಿಯ ಯೋಜನೆ ಅಥವಾ ನೀತಿ ರೂಪಿಸಿಲ್ಲ.  ಈಗ ನಿಮಗೊಂದು ಪ್ರಶ್ನೆ: ಪ್ರತಿಯೊಬ್ಬ ಮತದಾರನಿಗೂ ಬಾಧಿಸುವಂತಹ ಪ್ರತಿದಿನದ ಸಮಸ್ಯೆಯ ಕುರಿತು ಸರ್ಕಾರಗಳು ಏಕೆ ನಿರ್ಲಕ್ಷ್ಯ ತೋರಿವೆ? ಅತ್ಯಂತ ದೊಡ್ಡ ಮತಬ್ಯಾಂಕಿಗೆ ಇಷ್ಟು ದೊಡ್ಡ ಮಟ್ಟದ ಸಮಸ್ಯೆ ಎದುರಾದರೂ ರಾಜಕೀಯ ಪಕ್ಷಗಳು ಜಾಣ ಕುರುಡು ತೋರಿಸಲು ಹೇಗೆ ಸಾಧ್ಯ? ಇದು ನಿಮಗೆ ಹಾಗೂ ನನಗೆ ತೋಚಿದ ಒಗಟಲ್ಲ, ಬದಲಾಗಿ ಸಂಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಗಟಾಗಿರುವ ವಿಚಾರ.  ಶಿಕ್ಷಣ, ಸಂಘಟನೆಮತ್ತುಆಂದೋಲನ: ಅಂಬೇಡ್ಕರ್ ಅವರು ತಮ್ಮ ಮಾತುಗಳಲ್ಲಿ ಹೇಳುತ್ತಾರೆ, ಇಂತಹ ಸಮಸ್ಯೆ ಎದುರಾದಾಗ ‘ಶಿಕ್ಷಣ, ಸಂಘಟನೆ ಮತ್ತು ಆಂದೋಲನ’ ಎಂಬ ಮಂತ್ರವನ್ನು ನೆನಪಿಟ್ಟುಕೊಳ್ಳಿ. ಸಮಾಜದಿಂದ ಹೊರದಬ್ಬಲ್ಪಟ್ಟವರಿಗಾಗಿ ಪ್ರಜಾಪ್ರಭುತ್ವದಲ್ಲಿ ಸ್ಥಾನ ಕೊಡಲು ಈ ಮಂತ್ರ ಅವಶ್ಯಕ. ಪಸ್ತುತ ವಾಯು ಮಾಲಿನ್ಯದ ವಿಚಾರದಲ್ಲಿಯೂ ಇದೇ ಮಂತ್ರವನ್ನು ಮತ್ತೆ ಜಪಿಸಬೇಕಿದೆ.  ರಾಜಕಾರಣ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತದೆಯೇ ಹೊರತು ಅಗತ್ಯತೆಗಳಿಗಲ್ಲ. ಹಾಗಾಗಿ ಜನರು ಮೊದಲು ವಾಯು ಮಾಲಿನ್ಯದ ಕುರಿತು ದನಿ ಎತ್ತಬೇಕಾಗಿದೆ. ಈ ಸಮಸ್ಯೆಯ ನಿವಾರಣೆಯನ್ನು ಅಗತ್ಯತೆಯಿಂದ ಬೇಡಿಕೆಯಾಗಿ ಪರಿವರ್ತಿಸಬೇಕಾಗಿದೆ. ಇದಕ್ಕಾಗಿ ಶಿಕ್ಷಣ ಮತ್ತು ಜಾಗೃತಿಯ ಅಗತ್ಯವಿದೆ. ಈ ಸಮಸ್ಯೆಯ ಪರಿಣಾಮದ ಕುರಿತು ಮತದಾರರು ರಾಜಕಾರಣಿಗಳಿಗೆ ಮನದಟ್ಟು ಮಾಡಬೇಕು. ಇದು ಮೊದಲ ಹೆಜ್ಜೆ.  ಎರಡನೇಯದು ಸಂಘಟನೆ. ರಾಜಕಾರಣದಲ್ಲಿ ಕೇವಲ ಬೇಡಿಕೆ ಇದ್ದರೆ ಅದಕ್ಕೆ ಸ್ಪಂದಿಸಬೇಕಾದ ಅಗತ್ಯವಿಲ್ಲ. ಕೆಲವೇ ಕೆಲವು ಜನ ಅಥವಾ ಒಂದು ತಕ್ಕ ಮಟ್ಟಿನ ಬೀದಿಗಿಳಿದು ಕಿರುಚಿದರೆ ರಾಜಕಾರಣಿಗಳು ಕೇಳುವುದಿಲ್ಲ. ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಸಮೂಹದ ಅಗತ್ಯವಿದೆ. ಒಂದೇ ಸಮಸ್ಯೆಯ ಕುರಿತು ಮಾತನಾಡುವ ಎಲ್ಲಾ ದನಿಗಳು ಒಗ್ಗೂಡಬೇಕಿದೆ. ಕೆಲವೊಬ್ಬ ಬುದ್ದಿವಂತ ರಾಜಕಾರಣಿಗಳ ಹೊರತಾಗಿ, ಬಹುತೇಕ ರಾಜಕಾರಣಿಗಳು ಸಂಘಟಿತ ಹೋರಾಟವಿಲ್ಲದಿದ್ದರೆ ಕಣ್ಣು ತೆರೆದು ನೋಡುವುದೂ ಇಲ್ಲ. ಗಲ್ಲಿಯಿಂದ ಹಳ್ಳಿಯವರೆಗೆ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಸಂಘಟಿತರಾಗಿ ಈ ಪರಿಸ್ಥಿತಿಗೆ ಕಾರಣರಾದ ನಾಯಕರ/ಅಧಿಕಾರಿಗಳ ಹೆಸರು ತೆಗದು ಅವರ ವಿರುದ್ದ...

2022ರಲ್ಲೂ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ; ಟೈಮ್ಸ್ ನೌ ಸಮೀಕ್ಷೆ ಹೇಳ್ತಿರೋದೇನು?

2022ರಲ್ಲೂ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ; ಟೈಮ್ಸ್ ನೌ ಸಮೀಕ್ಷೆ ಹೇಳ್ತಿರೋದೇನು?

2022ರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಚುನಾವಣೆಗೂ ಮುನ್ನ ಜನರ ನಾಡಿಮಿಡಿತ ಪರೀಕ್ಷೆಯಲ್ಲಿ ಬಿಜೆಪಿ 239-245 ...

ಚಳಿಗಾಲದ ಅಧಿವೇಶನದಲ್ಲಿ ಎರಡು ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ಮಸೂದೆ ಮಂಡನೆ

ಚಳಿಗಾಲದ ಅಧಿವೇಶನದಲ್ಲಿ ಎರಡು ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ಮಸೂದೆ ಮಂಡನೆ

ವಿಲೀನಗೊಳಿಸುವ ಮೂಲಕ ದೇಶದಲ್ಲಿನ ರಾಷ್ಟ್ರೀಯಕೃತ ಬ್ಯಾಂಕುಗಳ ಸಂಖ್ಯೆಯನ್ನು ತಗ್ಗಿಸುತ್ತಿರುವ ಪ್ರಧಾನಿ ಮೋದಿ ಸರ್ಕಾರ ಈಗ, ಬ್ಯಾಂಕುಗಳ ಖಾಸಗೀಕರಣಕ್ಕೂ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನು ...

ಎನ್ಇಪಿ ಜಾರಿಗೊಳಿಸುವಾಗ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ:  ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಮಳೆ ಅವಾಂತರ ತಡೆಯಲು ಸಿಎಂ ಬೊಮ್ಮಾಯಿ ಬಿಬಿಎಂಪಿಯಲ್ಲಿ ಸಭೆ : ನಗರದ ನೀರುಗಾವಲು ಪುನರ್ ನಿರ್ಮಾಣಕ್ಕೆ ಸಿಎಂ ಸೂಚನೆ !

ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಸಾಲು ಸಾಲು ಅನಾಹುತ ಸಂಭವಿಸಿದೆ. ಇದೀಗ ಅವಾಂತರಗಳ ಬಳಿಕ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಇಂಜಿನಿಯರ್​​ಗಳ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ...

ಭಾರತದ ಕೃಷಿ ವಲಯಕ್ಕೆ ಕನಿಷ್ಟ ಬೆಂಬಲ ಬೆಲೆ ಬೇಕೆ? ಬೇಡವೇ?

ಭಾರತದ ಕೃಷಿ ವಲಯಕ್ಕೆ ಕನಿಷ್ಟ ಬೆಂಬಲ ಬೆಲೆ ಬೇಕೆ? ಬೇಡವೇ?

ದೇಶದ ರೈತ ಸಮುದಾಯದ ತೀವ್ರ ವಿರೋಧಕ್ಕೆ ತುತ್ತಾಗಿದ್ದ ಮೂರು ಕೃಷಿ ಕಾಯ್ದೆಗಳ ವಿಷಯದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಯೂ ಟರ್ನ್ ಸದ್ಯದ ಮಟ್ಟಿಗೆ ...

Page 2 of 2 1 2

Welcome Back!

Login to your account below

Retrieve your password

Please enter your username or email address to reset your password.

Add New Playlist