“ಅಂಗೈಯ್ಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲಾ ಹುಡುಕಾಡಿದರು” ಎಂಬಂತೆ ರಾಜಧಾನಿ ಬೆಂಗಳೂರಿಗೆ ಬೇಕಾದ ನೀರನ್ನು ಪ್ರಸ್ತುತ ಕಾವೇರಿ ಸೇರಿದಂತೆ ವಿವಿಧ ಮೂಲಗಳಿಂದಬರುತ್ತಿರುವ ನೀರು ಮತ್ತು ಸ್ಥಳೀಯವಾಗಿಯೇ ಸಂಗ್ರಹಿಸಲು ಅವಕಾಶವಿದ್ದರೂ ಅದನ್ನು ಬಿಟ್ಟು ದೂರದ ಊರಿನ ಜಲಮೂಲಗಳಿಗೆ ಕಣ್ಣು ಹಾಕಿ ಬೆಂಗಳೂರು ಮಾತ್ರವಲ್ಲದೆ, ಇತರೆ ಭಾಗಗಳಪರಿಸರವನ್ನೂ ಹಾಳು ಮಾಡಲು ರಾಜ್ಯವನ್ನು ಆಳುವವರು ಹೊರಟಿದ್ದಾರೆ. ಇದೀಗ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೇ ಕುತ್ತು ತರಲು ಮುಂದಾಗಿದ್ದಾರೆ.
ಬಯಲು ಸೀಮೆಯ ಜಿಲ್ಲೆಗಳಿಗೆ ನೇತ್ರಾವತಿ ನದಿ ಮೂಲಗಳಿಂದ ನೀರು ತರುವ ಎತ್ತಿನಹೊಳೆ ಯೋಜನೆ ಬಳಿಕ ಇದೀಗ ದೂರದ ಶರಾವತಿಯಿಂದ ಬೆಂಗಳೂರಿಗೆ ನೀರು ತರಿಸುವ ಬಗ್ಗೆಯೋಚಿಸುತ್ತಿರುವ ಸರ್ಕಾರ ಮತ್ತೊಂದೆಡೆ ಕಾವೇರಿ ನದಿಗೆ ಮೇಕೆದಾಟು ಬಳಿ ಜಲಾಶಯ ನಿರ್ಮಿಸಿ ಅಲ್ಲಿಂದ ಬೆಂಗಳೂರು ಮಹಾನಗರಿಗೆ ನೀರು ತರಲು ಹೊರಟಿದೆ. ಮೇಕೆದಾಟು ಅಣೆಕಟ್ಟೆನಿರ್ಮಾಣ ಕುರಿತಂತೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಕೇಂದ್ರ ಜಲ ಆಯೋಗ ಕೂಡ ಒಪ್ಪಿದೆ. ಆದರೆ, ಯೋಜನೆ ಜಾರಿಗೊಳಿಸದಂತೆ ತಮಿಳುನಾಡು ಭಾರೀ ವಿರೋಧವ್ಯಕ್ತಪಡಿಸುತ್ತಿದೆ.
ಹಾಗೆಂದು ಮೇಕೆದಾಟು ಯೋಜನೆಯೇ ಸರಿಯಲ್ಲ ಎಂದು ಹೇಳಲಾಗದು. ಏಕೆಂದರೆ, ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆವಿವಾದವಿದ್ದು, ಪ್ರತಿ ವರ್ಷ ಜಗಳ ನಡೆಯುತ್ತದೆ. ಕೆಆರ್ ಎಸ್ ಬಳಿಕ ಕಾವೇರಿ ನದಿ ನೀರನ್ನು ಹಿಡಿದಿಡಲು ರಾಜ್ಯದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಕರ್ನಾಟಕ ಮತ್ತುತಮಿಳುನಾಡಿನ ಜಲಾಶಯಗಳು ಭರ್ತಿಯಾಗಿ ಸಾಕಷ್ಟು ಪ್ರಮಾಣದ ನೀರು (ಸುಮಾರು 70 ಟಿಎಂಸಿ) ನದಿಯಲ್ಲಿ ಹರಿದು ಸಮುದ್ರ ಸೇರುತ್ತದೆ.
ಹೀಗಾಗಿ ಮೇಕೆದಾಟು ಬಳಿ ಕಾವೇರಿ ನದಿಗೆ ಜಲಾಶಯ ನಿರ್ಮಿಸಿ 45ರಿಂದ 50 ಟಿಎಂಸಿ ನೀರು ಸಂಗ್ರಹಿಸುವುದು ಸರ್ಕಾರದ ಉದ್ದೇಶ. ಜತೆಗೆ ಈ ಯೋಜನೆ ಮೂಲಕ 400 ಮೆಗಾವ್ಯಾಟ್ ವಿದ್ಯುತ್ಉತ್ಪಾದನೆಯ ಉದ್ದೇಶವೂ ಇದೆ. ಅಲ್ಲದೆ, ಬೆಂಗಳೂರಿಗೆ 4.7 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಪೂರೈಸಲು ಯೋಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಮತ್ತು ಸುಮಾರು 9000 ಕೋಟಿ ರೂ. ವೆಚ್ಚದ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರ ಸಿದ್ಧಪಡಿಸಿದೆ.

ಅಭಯಾರಣ್ಯಕ್ಕೆ ಸಂಚಕಾರ
ಮೇಕೆದಾಟು ಯೋಜನೆಯಿಂದ ನೀರಾವರಿ ಮತ್ತು ಕುಡಿಯುವ ನೀರಿಗೆ ಎಷ್ಟು ಅನುಕೂಲವಾಗುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಪರಿಸರಕ್ಕೆ ಹಾನಿಯಾಗುತ್ತದೆ. ಸರ್ಕಾರ ಕಳೆದ ಜೂನ್ತಿಂಗಳಲ್ಲಿ ಸಿದ್ಧಪಡಿಸಿರುವ ಪೂರ್ವ ಕಾರ್ಯಸಾಧ್ಯತಾ ವರದಿಯ ಅಂಶಗಳು ಇದನ್ನು ಸ್ಪಷ್ಟಪಡಿಸುತ್ತದೆ. ಅದರ ಪ್ರಕಾರ ಮೇಕೆದಾಟು ಯೋಜನೆಗೆ ಬಳಸುವ ಬಹುತೇಕ ಭೂಮಿಅರಣ್ಯ, ಅದರಲ್ಲೂ ಕಾವೇರಿ ವನ್ಯಜೀವಿ ಅಭಯಾರಣ್ಯ.
ಈ ವರದಿ ಪ್ರಕಾರ ಯೋಜನೆಗೆ ಒಟ್ಟು 52.52 ಚದರ ಕಿಲೋ ಮೀಟರ್ ಭೂಮಿ ಬೇಕಾಗಿದ್ದು, ಈ ಪೈಕಿ 31.81 ಚದರ ಕಿಲೋಮೀಟರ್ ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. 18.69 ಚದರ ಕಿ.ಮೀ. ಇತರೆ ಅರಣ್ಯ ಭೂಮಿ. 2.01 ಚದರ ಕಿ.ಮೀ. ಮಾತ್ರ ಕಂದಾಯ ಭೂಮಿ ಅಥವಾ ಖಾಸಗಿ ಜಮೀನು. ಇದರಿಂದ ಐದು ಹಳ್ಳಿಗಳು ಮುಳುಗಡೆಯಾಗುತ್ತದೆ. ಹೀಗಾಗಿ 31.81 ಚದರ ಕಿಲೋಮೀಟರ್ ಕಾವೇರಿ ವನ್ಯಜೀವಿ ಅಭಯಾರಣ್ಯ ನೀರಿನಲ್ಲಿ ಮುಳುಗಲಿದ್ದು,ಇದರೊಂದಿಗೆ ಆ ಭಾಗದ ಆನೆ ಕಾರಿಡಾರ್ ಗೆ ಹಾನಿಯಾಗುತ್ತದೆ. ಈಗಾಗಲೇ ಆ ಭಾಗದಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ಅದು ವಿಪರೀತಕ್ಕೆ ಹೋಗಬಹುದು.
ಬೆಂಗಳೂರೇ ಆದ್ಯತೆ
ಮೇಕೆದಾಟು ಯೋಜನೆಯಿಂದ ವಿದ್ಯುತ್ ಉತ್ಪಾದನೆ, ಮಳೆಗಾಲದಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ತಮಿಳುನಾಡಿಗೆ ಬಿಡುವುದು ಮುಂತಾದ ಅನುಕೂಲಗಳಿಗಿಂತರಾಜ್ಯಾಧಿಕಾರದಲ್ಲಿರುವವರಿಗೆ ಆದ್ಯತೆಯಾಗಿರುವುದು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು. ಈ ಕಾರಣಕ್ಕಾಗಿಯೇ ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ಹೆಚ್ಚು ಆಸಕ್ತಿಹೊಂದಿದೆ.
ಬೆಳೆಯುತ್ತಿರುವ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು ಎಂಬುದು ಸತ್ಯ ಮತ್ತು ಅನಿವಾರ್ಯ. ಹಾಗೆಂದು ಬೆಂಗಳೂರಿನಲ್ಲಿರುವ ನೀರಿನ ಮೂಲಗಳನ್ನು ಹಾಳು ಮಾಡಿ, ರಿಯಲ್ಎಸ್ಟೇಟ್ ಮೂಲಕ ಅಲ್ಲಿ ಕಾಂಕ್ರಿಟ್ ಕಾಡು ನಿರ್ಮಿಸುವುದರ ಜತೆಗೆ ಹಣ ಮಾಡಿಕೊಳ್ಳುತ್ತಿರುವವರಿಗೆ ಇದೀಗ ರಾಜ್ಯದ ಇತರೆ ಭಾಗದ ಪರಿಸರವನ್ನೂ ಹಾಳು ಮಾಡಿ ಬೆಂಗಳೂರಿಗೆ ನೀರುತರುವ ಹಪಹಪಿ. ಇದರಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ಇನ್ನಷ್ಟು ಬೆಳೆದು ಹಣದ ರಾಶಿಯೇ ಬರುತ್ತದೆ. ಜತೆಗೆ ಬೇರೆ ಕಡೆಯಿಂದ ನೀರು ತರಿಸುವ ಯೋಜನೆಗಳ ಮೂಲಕವೂಜೇಬು ಭರ್ತಿಯಾಗುತ್ತದೆ.
ಸುಮಾರು 1500 ಕೆರೆಗಳಿದ್ದ ಬೆಂಗಳೂರಿನಲ್ಲಿ ಉಳಿದಿರುವ ಕೆರೆಗಳ ಪ್ರಮಾಣ 300ಕ್ಕೂ ಕಮ್ಮಿ. ಅದರಲ್ಲೂ ಬಹುತೇಕ ಕೆರೆಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಬೆಂಗಳೂರು ಬೆಳೆಸುತ್ತಾ ನೀರಿನಮೂಲಗಳನ್ನು ಹಾಳು ಮಾಡುತ್ತಿದ್ದಾರೆ. ಆ ಮೂಲಕ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಬೇರೆ ಊರುಗಳ ನೀರಿಗೆ ಕಣ್ಣು ಹಾಕಿದ್ದಾರೆ. ಈ ರೀತಿಯ ಯೋಜನೆಗಳ ಮೂಲಕ ರಾಜ್ಯದಪರಿಸರ ನಾಶ ಮಾಡಿ ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಬೆಂಗಳೂರಿನ ನೀರಿನ ಮೂಲಗಳನ್ನೇ ಅಭಿವೃದ್ಧಿಪಡಿಸಿ ರಾಜಧಾನಿ ನಗರಿಯ ಜನರಿಗೆ ನೀರುಣಿಸಿದರೆಮುಂದಿನ ದಿನಗಳಲ್ಲಿ ಬಂದೆರಗಬಹುದಾದ ಸಾಕಷ್ಟು ಅನಾಹುತಗಳನ್ನು ತಡೆಗಟ್ಟಬಹುದು.