• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಲಾಕ್‌ಡೌನ್‌ ಬಗ್ಗೆ ಸರ್ಕಾರಕ್ಕೆ ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ

by
April 9, 2020
in ಕರ್ನಾಟಕ
0
ಲಾಕ್‌ಡೌನ್‌ ಬಗ್ಗೆ ಸರ್ಕಾರಕ್ಕೆ ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ
Share on WhatsAppShare on FacebookShare on Telegram

ಕರೋನಾ ಸೋಂಕಿತರನ್ನು ನಿಯಂತ್ರಣ ಮಾಡಲು ಲಾಕ್‌ಡೌನ್‌ ಬೇಕೇ? ಬೇಡವೇ? ಎನ್ನುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿತ್ತು. ಇದೀಗ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸರ್ಕಾರಕ್ಕೆ ಶಿಫಾರಸು ಕೊಟ್ಟ ಬಳಿಕ ಕೋವಿಡ್ – 19 ಟಾಸ್ಕ್ ಫೋರ್ಸ್ ವೈದ್ಯರ ಶಿಫಾರಸ್ಸಿನ ಬಗ್ಗೆ ಮುಖ್ಯಮಂತ್ರಿ ಸಭೆ ನಡೆಸಿದ್ದು, ತಜ್ಞರ ವರದಿ ಮೇಲೆ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.

ADVERTISEMENT

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾರಾಯಣ ಹೃದ್ರೋಗ ಸಂಸ್ಥೆಯ ಡಾ. ದೇವಿ ಶೆಟ್ಟಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಭಾಗಿ‌ಯಾಗಿದ್ದರು. ಸಮಿತಿ ಕೊಟ್ಟಿರುವ ಶಿಫಾರಸ್ಸಿನ ಬಗ್ಗೆ ಚರ್ಚೆ ನಡೆಸಿದ್ದು, ಏಪ್ರಿಲ್ ಅಂತ್ಯದ ವರೆಗೆ ಲಾಕ್ ಡೌನ್ ಮುಂದುವರಿಕೆಗೆ ಶಿಫಾರಸು ಮಾಡಲಾಗಿದೆ. ಇದನ್ನು ಹೇಗೆ ಜಾರಿ ಮಾಡುವುದು ಎನ್ನುವ ಬಗ್ಗೆ ಮಹತ್ವದ ಮಾತುಕತೆ ನಡೆಸಲಾಯ್ತು.

ಲಾಕ್‌ಡೌನ್‌ ಮಾಡಿದರೂ ಇಡೀ ರಾಜ್ಯವನ್ನೇ ಲಾಕ್‌ಡೌನ್‌ ಮಾಡುವ ಬದಲು ಕೋವಿಡ್ – 19 ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಕೆಗೆ ಶಿಫಾರಸು ಮಾಡಲಾಗಿದೆ. ಆದರ ಜೊತೆಗೆ ಸದ್ಯ ಉಳಿದಿರುವ ದಿನಗಳನ್ನು ರಾಜ್ಯದಲ್ಲಿ ಕಟ್ಟು ನಿಟ್ಟಾಗಿ ಲಾಕ್‌ಡೌನ್‌ ಜಾರಿಗೆ ತರಬೇಕು. ಮತ್ತಷ್ಟು ಕಠಿಣವಾಗಿ ಲಾಕ್ ಡೌನ್ ಜಾರಿ ಆದರೆ ಕೋವಿಡ್ – 19 ಸೋಂಕಿತರ ಪ್ರಮಾಣ ತಗ್ಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿ, ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಸಮಿತಿ ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ

  • ಕರೋನಾ ಹಾಟ್ ಸ್ಟಾಟ್ ಜಿಲ್ಲೆಗಳಲ್ಲಿ ಏಪ್ರಿಲ್ 30 ವರೆಗೆ ಲಾಕ್ ಡೌನ್
  • ಸೋಂಕಿತರಿಲ್ಲದ ಜಿಲ್ಲೆಗಳಲ್ಲಿ ಸ್ವಲ್ಪ ರಿಯಾಯಿತಿ ಕೊಡಬಹುದು
  • ಆದ್ರೆ ಪಕ್ಕದ ಜಿಲ್ಲೆಗೆ ಯಾರೂ ಸಂಚಾರ ಮಾಡದಂತೆ ಎಚ್ಚರ ಅಗತ್ಯ
  • ಬಸ್, ಟ್ರೈನ್, ವಿಮಾನ ಸಂಚಾರ ಸ್ಥಗಿತ ಮುಂದುವರಿಯಬೇಕು
  • ಮೆಟ್ರೋ ಸಂಚಾರ ಸ್ಥಗಿತ ಹೀಗೆಯೇ ಮುಂದುವರಿಯಲಿ
  • ಸದ್ಯಕ್ಕೆ ಸಾರ್ವಜನಿಕ ಶೌಚಾಲಯಗಳ ಬಳಕೆ ಬೇಡ
  • ಗುಟ್ಕ, ಚ್ಯೂಯಿಂಗ್ ಗಮ್ ಸದ್ಯಕ್ಕೆ ಬ್ಯಾನ್ ಮಾಡಬೇಕು
  • ಅಂತರ್ ಜಿಲ್ಲಾ ಬಸ್, ಕಾರ್ ಸೇರಿ ವಾಹನ ಸಂಚಾರ ಸ್ಥಗಿತ ಆಗ್ಬೇಕು
  • ಗೂಡ್ಸ್,‌ ಮೆಡಿಕಲ್ ವಾಹನಗಳ ಸಂಚಾರಕ್ಕೆ ವಿನಾಯಿತಿ ಇರಬೇಕು
  • ಕೋವಿಡ್ -19 ಪರೀಕ್ಷೆ ಮಾಡೋ ಪ್ರಮಾಣ ಹೆಚ್ಚಳ ಮಾಡಬೇಕು
  • 3 – 4 ವಾರದಲ್ಲಿ 50 ಸಾವಿರಕ್ಕೂ ಹೆಚ್ಚು ತಪಾಸಣೆ ಆಗಬೇಕು
  • ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರ ಬಳಸಿ
  • ಎಸಿ ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಿ
  • ಮುಂದಿನ 6 ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಇರಬೇಕು
  • ಜನರ ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು

ಇನ್ನು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಭೆ ಕರೆದಿದ್ದು, ಆ ಸಭೆಯಲ್ಲಿ ಏನೆಲ್ಲಾ ಸಲಹೆ ಸೂಚನೆಗಳನ್ನು ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನೊಂದು ವಾರ ಕಾಲ ರಾಜ್ಯದಲ್ಲಿ ಯಾವ ರೀತಿ ಕೋವಿಡ್ – 19 ನಿಯಂತ್ರಣಕ್ಕೆ ಬರುತ್ತೆ ಎನ್ನುವ ಲೆಕ್ಕಾಚಾರದ ಮೇಲೆ ಲಾಕ್‌ಡೌನ್‌ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚೆ ನಡೀತು. ಕೊನೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅಂತಿಮವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿ ಇರೋಣ ಎನ್ನುವ ಒಂದು ಸಾಲಿನ ನಿರ್ಣಯಕ್ಕೆ ಬರಲಾಗಿದೆ ಎನ್ನಲಾಗ್ತಿದೆ.

Tags: Covid 19Experts TeamLockdownಕೋವಿಡ್-19ತಜ್ಞರ ಸಮಿತಿಲಾಕ್‌ಡೌನ್‌
Previous Post

ಕಾಸಿಲ್ಲದೆ ಕಂಗೆಟ್ಟ ಕೇಂದ್ರ ಸರ್ಕಾರಕ್ಕೆ ಕೇರಳ ಬಿಸಿ ಟಾನಿಕ್..!?

Next Post

ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ನಂಬಿದವರ ಬದುಕು ಅತಂತ್ರ!

Related Posts

ದೇವೇಗೌಡರ ರಾಜ್ಯಸಭೆ ಟಿಕೆಟ್ ವಿವಾದಕ್ಕೆ ನಾಳೆ ತೆರೆ? ಜೆಪಿ ಭವನದಲ್ಲಿ ಮಾಜಿ ಪ್ರಧಾನಿಯ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ

ದೇವೇಗೌಡರ ರಾಜ್ಯಸಭೆ ಟಿಕೆಟ್ ವಿವಾದಕ್ಕೆ ನಾಳೆ ತೆರೆ? ಜೆಪಿ ಭವನದಲ್ಲಿ ಮಾಜಿ ಪ್ರಧಾನಿಯ ಮಹತ್ವದ ಸುದ್ದಿಗೋಷ್ಠಿ

by ಪ್ರತಿಧ್ವನಿ
June 9, 2026
0

ಬೆಂಗಳೂರು: ರಾಜ್ಯಸಭಾ ಚುನಾವಣೆಯ ರಾಜಕೀಯ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಹೆಸರು ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ....

Read moreDetails
ಶಕ್ತಿ ಯೋಜನೆಯ ಹೊಡೆತಕ್ಕೆ ಸಿಲುಕಿ ದುರಂತ ಅಂತ್ಯಕಂಡಿತಾ ವ್ಯಾಪಾರಿ ಕುಟುಂಬ..?

ಶಕ್ತಿ ಯೋಜನೆಯ ಹೊಡೆತಕ್ಕೆ ಸಿಲುಕಿ ದುರಂತ ಅಂತ್ಯಕಂಡಿತಾ ವ್ಯಾಪಾರಿ ಕುಟುಂಬ..?

June 9, 2026
ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

June 9, 2026
ಮಹಿಳೆಯರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ : ಖರ್ಗೆ ವಾಗ್ದಾಳಿ

ಮಹಿಳೆಯರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ : ಖರ್ಗೆ ವಾಗ್ದಾಳಿ

June 9, 2026
ಡಿಸಿಎಂ ಪರಮೇಶ್ವರ್‌ಗೆ ಮತ್ತೊಂದು ಹೆಚ್ಚುವರಿ ಖಾತೆ..? ಮುಜರಾಯಿ ಇಲಾಖೆ ಹೊಣೆಗಾರಿಕೆ ಕುರಿತು ಹೊಸ ಚರ್ಚೆ..?

ಡಿಸಿಎಂ ಪರಮೇಶ್ವರ್‌ಗೆ ಮತ್ತೊಂದು ಹೆಚ್ಚುವರಿ ಖಾತೆ..? ಮುಜರಾಯಿ ಇಲಾಖೆ ಹೊಣೆಗಾರಿಕೆ ಕುರಿತು ಹೊಸ ಚರ್ಚೆ..?

June 9, 2026
Next Post
ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ನಂಬಿದವರ ಬದುಕು ಅತಂತ್ರ!

ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ನಂಬಿದವರ ಬದುಕು ಅತಂತ್ರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada