ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವನ್ನು ಗಮನಿಸಿ. ಬಿಜೆಪಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರೀ ತಯಾರಿ ನಡೆಸುತ್ತಿದೆ. ಇನ್ನೊಂದೆಡೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ. ಇಂತಹ ತಯಾರಿಗಳಿಂದ ಎಂತಹ ಫಲಿತಾಂಶ ಬರಬಹುದು ಎಂಬುದನ್ನು ಯಾರಾದರೂ ಸುಲಭದಲ್ಲಿ ಊಹೆ ಮಾಡಬಹುದು.
ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸಲೀಸಾಗಿ ಗೆಲ್ಲಲಿಲ್ಲ. ಸರಳ ಬಹಮತ ಪಡೆಯುವುದಕ್ಕೂ ಬಹಳ ತ್ರಾಸ ಪಡಬೇಕಾಯಿತು. ಅಂತೂ ಇಂತೂ ಗೆದ್ದು, ಗೆದ್ದ ಮರುದಿನವೇ ಮುಂದಿನ ಗುರಿಯನ್ನು ನಿಗಧಿ ಮಾಡಿಕೊಂಡಿತು. ಅಂದರೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನತ್ತ ಲಕ್ಷ್ಯ ಹರಿಸಿತು. ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಪಶ್ಚಿಮ ಬಂಗಾಳ ಭೇಟಿಯ ಸುಳಿವು ನೀಡಿದರು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈಗಾಗಲೇ ಒಮ್ಮೆ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟು ಬಂದಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಾಲಿನ ಚುನಾವಣಾ ಚಾಣಾಕ್ಷ ಅಮಿತ್ ಶಾ ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದಲ್ಲಿ?.. ಬಿಜೆಪಿ ಗೆದ್ದಿದೆ, ಗೆದ್ದ ಕಾರಣಕ್ಕೆ ಹೊಸ ಹುಮ್ಮಸ್ಸಿನಲ್ಲಿ ಕೆಲಸ ಮಾಡುತ್ತಿದೆ. ಸೋತ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಉತ್ಸಾಹ ನಿರೀಕ್ಷಿಸುವುದು ದುಬಾರಿಯಾದೀತು. ಆದರೆ ಕಡೆ ಪಕ್ಷ ಕಾಂಗ್ರೆಸ್ ’ನಾವು ಸೋತಿದ್ದೇಕೆ? ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?” ಎಂಬ ಬಗ್ಗೆ ಆತ್ಮಾವಲೋಕನವನ್ನಾದರೂ ಮಾಡಿಕೊಂಡಿದೆಯಾ? ಅದೂ ಇಲ್ಲ. ಕಾಂಗ್ರೆಸ್ ನಾಯಕರು ಮೊದಲು ಪಕ್ಷಕ್ಕೆ ತಮ್ಮ ಕೊಡುಗೆ ಏನು? ತಮ್ಮ ಸಾಮರ್ಥ್ಯ ಏನು? ಹಾಗೂ ಪಕ್ಷ ಮತ್ತು ಪಕ್ಷ ಪ್ರತಿಪಾದಿಸುವ ಸಿದ್ಧಾಂತ ಕುರಿತು ತಮ್ಮ ಬದ್ದತೆ ಎಷ್ಟರಮಟ್ಟಿಗನದು ಎಂದು ಅಂತರಂಗವನ್ನು ಕೇಳಿಕೊಳ್ಳುವ ಬದಲು ಬಹಿರಂಗವಾಗಿ ಕಿತ್ತಾಡಿಕೊಳ್ಳತೊಡಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗ್ರೂಪ್ 23, ಅಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮಂದಿ ಹಿರಿಯ ನಾಯಕರಿಗೆ ಈಗ ರಾಹುಲ್ ಗಾಂಧಿ ಮತ್ತವರ ತಂಡದ ವಿರುದ್ಧ ಅಸ್ತ್ರ ಸಿಕ್ಕಂತಾಗಿದೆ. ಕೆಳಗೆ ಬಿದ್ದವರ ಮೇಲೆ ಶಸ್ತ್ರಪ್ರಯೋಗ ಮಾಡಲಾಗುತ್ತಿದೆ. ಒಬ್ಬೊಬ್ಬರಾಗಿ ಅಖಾಡಕ್ಕಿಳಿಯುತ್ತಿದ್ದಾರೆ. ಇದು ಅವರ ತಂಡದ ತಂತ್ರಗಾರಿಕೆ ಇರಬಹುದು. ಮೊದಲಿಗೆ ಕಪಿಲ್ ಸಿಬಲ್ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗೆ ಸಂದರ್ಶನ ನೀಡಿ ಕಾರಿಕೊಂಡರು. ಈಗ ಗುಲಾಂ ನಭಿ ಆಜಾದ್ ಅವರ ಸರದಿ. ಈ ವಿಷಯದಲ್ಲಿ ‘ಆರೋಪ ಮಾಡುತ್ತಿರುವವರ ಮತ್ತು ಆರೋಪಕ್ಕೆ ಒಳಗಾಗುತ್ತಿರುವವರ’ ಇಬ್ಬರಲ್ಲೂ ದೋಷಗಳು ಕಂಡುಬರುತ್ತಿವೆ.
ಕಪಿಲ್ ಸಿಬಲ್ ಮತ್ತು ಗುಲಾಂ ನಭಿ ಆಜಾದ್ ಪಕ್ಷದ ವೇದಿಕೆಯಲ್ಲಿ ವಿಷಯದ ಚರ್ಚೆ ಮಾಡಬೇಕಿತ್ತು. ಇನ್ನೊಂದೆಡೆ ಪಕ್ಷದ ವೇದಿಕೆಗಳಲ್ಲಿ ಎಂಥದೇ ವಿಚಾರಗಳನ್ನು ಸಮಾಲೋಚನೆ ನಡೆಸುವಷ್ಟು ಆಂತರಿಕ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಸೃಷ್ಟಿಸಬೇಕಿತ್ತು. ಹಾಗಾಗಿ ‘ಹೊರಗೆ’ ಮಾತನಾಡಿರುವ ಕಪಿಲ್ ಸಿಬಲ್, ಗುಲಾಂ ನಭಿ ಆಜಾದ್ ಅವರದೇ ಸಂಪೂರ್ಣ ತಪ್ಪು ಎನ್ನಲಾಗದು. ಕಾಂಗ್ರೆಸ್ ಪಕ್ಷದ ಸೋಲಿನ ಕಾರಣದಿಂದ ಮಹಾಘಟಬಂಧನ್ ಬಿಹಾರದಲ್ಲಿ ಸರ್ಕಾರ ರಚಿಸುವ ಮಜಬೂತಾದ ಅವಕಾಶವನ್ನು ಕಳೆದುಕೊಂಡಿತು. ಆಗ ಮೊದಲು ‘ಕಾಂಗ್ರೆಸ್ ಪಕ್ಷ ಆತ್ಮಮಾವಲೋಕನ ಮಾಡಿಕೊಳ್ಳಬೇಕು’ ಎಂದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್. ಬಿಹಾರ ಫಲಿತಾಂಶದ ಹಿನ್ನೆಲೆಯಲ್ಲಿ ತಾರೀಖ್ ಅನ್ವರ್ ಅವರಾಡಿದ ಮಾತುಗಳು ಸಮಯೋಚಿತವಾಗಿದ್ದವು. ಆದರೆ ಕಪಿಲ್ ಸಿಬಲ್ ಮತ್ತು ಗುಲಾಂ ನಭಿ ಆಜಾದ್ ಉದ್ದೇಶ ಸದ್ಯ ಪ್ರಶ್ನಾರ್ಹವಾಗಿವೆ.
Also Read: ಕಾಂಗ್ರೆಸ್ ಆಂತರಿಕ ಕಚ್ಚಾಟಕ್ಕೆ ವಿಷಾದ ವ್ಯಕ್ತಪಡಿಸಿದ ಮಲ್ಲಿಕಾರ್ಜುನ್ ಖರ್ಗೆ
ಕಪಿಲ್ ಸಿಬಲ್ ‘ಆಂತರಿಕ ಪ್ರಜಾಪ್ರಭುತ್ವದ’ ಬಗ್ಗೆ ಮಾತನಾಡಿದರೆ, ಗುಲಾಂ ನಭಿ ಆಜಾದ್ ‘ಪಕ್ಷದಲ್ಲಿರುವ ಫೈವ್ ಸ್ಟಾರ್ ಕಲ್ಚರ್’ ಬಗ್ಗೆ ಮಾತನಾಡಿದ್ದಾರೆ. ವಾಸ್ತವವಾಗಿ ಕಾಂಗ್ರೆಸಿಗೆ 2014ರಿಂದಲೇ ಸೋಲು ಆವರಿಸಿಕೊಂಡಿದೆ. ಇದಕ್ಕೂ ಮೊದಲು ಇದೇ ಕಪಿಲ್ ಸಿಬಲ್ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭಾಗವಾಗಿದ್ದವರು. 2014ರಲ್ಲಿ ಚುನಾವಣೆ ಸೋತಾಗಲೇ ‘ಪರಮಾರ್ಶೆ ಆಗಲಿ’ ಎಂದು ಏಕೆ ಹೇಳಲಿಲ್ಲ? ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿರುವ ಗುಲಾಂ ನಭಿ ಆಜಾದ್ ಮುಂಚೂಣಿಯಲ್ಲಿದ್ದವರು. ಅವರಿಗೆ ಈಗ ಪಕ್ಷದಲ್ಲಿರುವ ಫೈವ್ ಸ್ಟಾರ್ ಕಲ್ಚರ್ ಕಾಣಿಸುತ್ತಿದೆಯೇ?
ಇಂಥ ಸಮಯಸಾಧಕ ನಾಯಕರಿಂದಲೇ ಕಾಂಗ್ರೆಸ್ ಇಂದು ಈ ದುಸ್ಥಿತಿಯನ್ನು ಎದುರಿಸುತ್ತಿರುವುದು. ಈ ನಡುವೆ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ‘ಪಕ್ಷದಲ್ಲಿ ನಾಯಕತ್ವದ ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದ್ದಾರೆ. ಇದು ಮತ್ತೊಂದು ರೀತಿಯ ಅಸಹ್ಯದ ಪರಮಾವಧಿ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ರಾಹುಲ್ ಗಾಂಧಿ ಅವರು ಒಪ್ಪುತ್ತಿಲ್ಲ. ಬೇರೆಯವರು ಅವರನ್ನೇ ಒತ್ತಾಯಿಸುತ್ತಿದ್ದಾರೆ. ವರ್ಷದಿಂದ ಇದೇ ನಡೆದುಕೊಂಡುಬಂದಿದೆ. ಆದರೂ ಸಲ್ಮಾನ್ ಖುರ್ಷಿದ್ ಅವರ ಕಣ್ಣಿಗೆ ನಾಯಕತ್ವದ ಸಮಸ್ಯೆ ಕಾಣುತ್ತಿಲ್ಲ. ಸಮಯಕ್ಕೆ ತಕ್ಕಂತೆ ಮತ್ತು ಸ್ವಾರ್ಥಕ್ಕೆ ಅನುಗುಣವಾಗಿರುವ ನಾಯಕರಿಗೆ ಮಣೆ ಹಾಕಿದ್ದು ಹೈಕಮಾಂಡ್ ಅಪರಾಧವೂ ಹೌದು. ಹೀಗೆ ಕಾಂಗ್ರೆಸ್ ಪಕ್ಷದಲ್ಲಿ ಆತ್ಮಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಗಳು ದಂಡಿ ದಂಡಿ ಇವೆ. ವಿಧಾನಸಭಾ ಚುನಾವಣೆಗೆ ಅಣಿಯಾಗದಿದ್ದರೂ ಕಡೆಪಕ್ಷ ಅದು ತನ್ನೊಳಮನೆಯನ್ನಾದರು ತೊಳೆದುಕೊಳ್ಳಬೇಕಾಗಿದೆ.
Also Read: ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸ್ಪಷ್ಟವಾಗಿ ಗೋಚರಿಸುತ್ತಿದೆ ಕಾಂಗ್ರೆಸ್ನಲ್ಲಿನ ಆಂತರಿಕ ಬಿರುಕು..!
ಕಾಂಗ್ರೆಸ್ ಪಕ್ಷದಲ್ಲಿ? ಬಿಜೆಪಿ ಗೆದ್ದಿದೆ, ಗೆದ್ದ ಕಾರಣಕ್ಕೆ ಹೊಸ ಹುಮ್ಮಸ್ಸಿನಲ್ಲಿ ಕೆಲಸ ಮಾಡುತ್ತಿದೆ. ಸೋತ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಉತ್ಸಾಹ ನಿರೀಕ್ಷಿಸುವುದು ದುಬಾರಿಯಾದೀತು. ಆದರೆ ಕಡೆ ಪಕ್ಷ ಕಾಂಗ್ರೆಸ್ ’ನಾವು ಸೋತಿದ್ದೇಕೆ? ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?” ಎಂಬ ಬಗ್ಗೆ ಆತ್ಮಾವಲೋಕನವನ್ನಾದರೂ ಮಾಡಿಕೊಂಡಿದೆಯಾ? ಅದೂ ಇಲ್ಲ. ಕಾಂಗ್ರೆಸ್ ನಾಯಕರು ಮೊದಲು ಪಕ್ಷಕ್ಕೆ ತಮ್ಮ ಕೊಡುಗೆ ಏನು? ತಮ್ಮ ಸಾಮರ್ಥ್ಯ ಏನು? ಹಾಗೂ ಪಕ್ಷ ಮತ್ತು ಪಕ್ಷ ಪ್ರತಿಪಾದಿಸುವ ಸಿದ್ಧಾಂತ ಕುರಿತು ತಮ್ಮ ಬದ್ದತೆ ಎಷ್ಟರಮಟ್ಟಿಗನದು ಎಂದು ಅಂತರಂಗವನ್ನು ಕೇಳಿಕೊಳ್ಳುವ ಬದಲು ಬಹಿರಂಗವಾಗಿ ಕಿತ್ತಾಡಿಕೊಳ್ಳತೊಡಗಿದ್ದಾರೆ.