ಸಿರಿಧಾನ್ಯ: ರೈತರಿಗೆ ಪ್ರೋತ್ಸಾಹ ಧನವಿಲ್ಲ, ಪ್ರಚಾರಕ್ಕೆ ರೂ 31 ಕೋಟಿ!

ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸಿರಿಧಾನ್ಯದ ಅರಿವು ಮೂಡಿಸುವಲ್ಲಿ, ಪ್ರೋತ್ಸಾಹ ಧನ ನೀಡುವಲ್ಲಿ ವಿಫಲವಾದ ಸರ್ಕಾರ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಮೇಳಗಳಿಗೆಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪ್ರತಿಧ್ವನಿ ಪಡೆದ ವಿವರಗಳಂತೆ, ಕಳೆದ 7 ವರ್ಷಗಳಲ್ಲಿ ಸರ್ಕಾರ ಸಾವಯವ ಹಾಗೂ ಸಿರಿಧಾನ್ಯಮೇಳಗಳಿಗೆಂದು (Organic and Millet Trade Fair) ರೂ. 31.93 ಕೋಟಿ ಹಣ ವ್ಯಯ ಮಾಡಿದೆ.

ಮಳೆಯ ಆಶ್ರಯವಿಲ್ಲದ ಹಲವು ರೈತರಿಗೆ ರಾಗಿ, ಮೆಕ್ಕೆಜೋಳ ಬದಲಿಗೆ ಅತಿ ಕಡಿಮೆ ವೆಚ್ಚ ಹಾಗೂ ಅತಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರ ಇದುವರೆಗೂ ಸಮರ್ಪಕ ಕಾರ್ಯ ನಿರ್ವಹಿಸಿಲ್ಲ.

ಸಿದ್ದರಾಮಯ್ಯ ಸರ್ಕಾರದಲ್ಲಿ ಸಾವಯವ ಬೆಳೆಗೆ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ. 5,000 ಪ್ರೋತ್ಸಾಹಧನ ನೀಡುವ ಘೋಷಣೆ ಇತ್ತಾದರೂ, ಇದುವರೆಗೂ ಪ್ರೋತ್ಸಾಹಧನ ಜಮಾ ಆಗದಿರುವುದು ದುರಂತ. ಇನ್ನು 2019-20ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಿರಿಧಾನ್ಯ ಬೆಳೆಯುವ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಮತ್ತು ಸಿರಿಧಾನ್ಯ ಉತ್ತೇಜನಕ್ಕಾಗಿ  ‘ರೈತ ಸಿರಿ’ ಎಂಬ ವಿಶೇಷ ಯೋಜನೆ ರೂಪಿಸಿದ್ದಾರೆ. ಅಲ್ಲದೇ ಪ್ರತಿ ಹೆಕ್ಟೇರ್ ಗೆ ರೂ.10,000 ಪ್ರೋತ್ಸಾಹಧನ ನೀಡುವ ಭರವಸೆಯನ್ನೂ ನೀಡಿದ್ದಾರೆ. ಅದರೆ ‘ರೈತ ಸಿರಿ ಯೋಜನೆಯೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ, ಹಾಗು ಸಾಕಷ್ಟು ಜಿಲ್ಲೆಗಳಲ್ಲಿ ಈ ಯೋಜನೆಯ ಪರಿಚಯವೇ ಇಲ್ಲದಂತಾಗಿದೆ.

Also Read: ‘ರೈತಸಿರಿ’ ಅಂದ್ರೆ , ಪ್ರಚಾರಕ್ಕೆ 31 ಕೋಟಿ, ಪ್ರೋತ್ಸಾಹ ಧನಕ್ಕೆ 10 ಕೋಟಿ.

ಈ ವರ್ಷದಲ್ಲಿ ರಾಜ್ಯದಲ್ಲೆಡೆ ಕಡಿಮೆ ಮಳೆಯಾಗಿರುವುದರಿಂದ, ಕೃಷಿ ಸೊರಗಿದೆ. ಈ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕದ ಹಲವಾರು ರೈತರಿಗೆ ಮಳೆಯನ್ನು ಆಧರಿಸಿ ಯಾವ ಬೆಳೆಯನ್ನು ಯಾವಾಗ ಬೆಳೆಯಬೇಕು ಎಂಬುದು ಗೊತ್ತಿಲ್ಲದೆ, ಗೊಂದಲಕ್ಕೆ ಈಡಾಗಿದ್ದಾರೆ. ರೈತರಲ್ಲಿ ಬೆಳೆಯ ಬಗ್ಗೆ, ಬಿತ್ತನೆ ಬೀಜಗಳ ತಳಿಯ ಬಗ್ಗೆ, ರಸಗೊಬ್ಬರ ಔಷಧಿಗಳ ಬಗ್ಗೆ ಪರಿಚಯಿಸಿ ಜಾಗೃತಿ ಮೂಡಿಸುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ. ಹೀಗಾಗಿ ಪ್ರತಿ ಹಳ್ಳಿಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕನಿಷ್ಠ ಮಳೆಯಿಂದ ಸಿರಿಧಾನ್ಯವನ್ನಾದರೂ ಬೆಳೆಯುವುದಕ್ಕೆ ಜಾಗೃತಿ ಮೂಡಿಸಬೇಕಿತ್ತು. ಇದನ್ನು ಬಿಟ್ಟು ಜಿಲ್ಲಾಮಟ್ಟದಲ್ಲಿ, ರಾಷ್ಷ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಟಿಗಟ್ಟಲೆ ಹಣ ವ್ಯಯ ಮಾಡಿ ಮೇಳಗಳನ್ನು ಮಾಡಿದರೆ ರೈತರ ಆರ್ಥಿಕ ಪರಿಸ್ಥಿತಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯವೆ?.

ಕಳೆದ 7 ವರ್ಷಗಳಿಂದ ಕೃಷಿ ಇಲಾಖೆಯ ಅಧಿಕಾರಿಗಳು ಹಳ್ಳಿ ಹಳ್ಳಿಗಳಿಗೆ ಹೋಗಿ ಕಡಿಮೆ ಮಳೆಯಿಂದ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಯ ಬಗ್ಗೆ ಜಾಗೃತಿ ಮೂಡಿಸಿದ್ದರೆ, ರಾಜ್ಯದಲ್ಲಿ ಅಲ್ಪಮಟ್ಟಿಗಾದರು ರೈತರ ಆತ್ಮಹತ್ಯೆಯನ್ನು ತಡೆಯಬಹುದಿತ್ತು. ‘ರಾಜ್ಯದ ಎಲ್ಲಾ ರೈತರು ನೀರಾವರಿಯನ್ನೇ ನಂಬಿಕೊಂಡು ಜೀವಿಸುತ್ತಿಲ್ಲ’ ಎಂಬ ಅರಿವು ಸರ್ಕಾರಕ್ಕೆ ಇರಬೇಕಲ್ಲವೇ?ಹೇಳಿದ ಸಮಯಕ್ಕೆ ಸಾಲಮನ್ನಾ ಆಗದಿರುವುದು, ವ್ಯವಸಾಯದಲ್ಲಿ ಕಾಲಕ್ಕೆ ಅನುಗುಣವಾಗುವಂತ ಬೆಳೆಯ ಪರಿಚಯ ಇಲ್ಲದಿರುವುದರಿಂದ ರೈತರನ್ನು ಇನ್ನಷ್ಟು ಗೊಂದಲಕ್ಕೆ ಈಡುಮಾಡಿದೆ.

ಸಿರಿಧಾನ್ಯ ಬೆಳೆಯುವುದಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಹವಾಮಾನಕ್ಕೆ ತಕ್ಕಂತೆ ಯಾವ ಬೆಳೆಯನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಯಬೇಕು, ಅದನ್ನು ಹೇಗೆ ಸಂಸ್ಕರಣ ಮಾಡಬೇಕು ಎಂಬುದರ ತರಬೇತಿಯನ್ನು ಸರಿಯಾಗಿ ಕೊಡುತ್ತಿಲ್ಲ. ಬೆಳೆ ಬಂದ ನಂತರ ಅದನ್ನು ಸಂಸ್ಕರಣೆ ಮಾಡುವ ಘಟಕ ರಾಜ್ಯದಲ್ಲಿ ಬೆರಳೆಣಿಕೆಯಷ್ಟಿದೆ. ಭತ್ತವನ್ನು ಸಂಸ್ಕರಣೆ ಮಾಡುವುದಕ್ಕೆ 1 ಕೆ.ಜಿ ಗೆ ರೂ. 2 ರಿಂದ ರೂ. 3 ಇದ್ದರೆ, ಸಿರಿಧಾನ್ಯ ಬೆಳೆಯ ಸಂಸ್ಕರಣೆಗೆ ರೂ. 10 ರಿಂದ ರೂ. 15ರವರೆಗೆ ಇದೆ. ಹೀಗಾಗಿ ರಾಜ್ಯದ ರೈತರು ಹೆಚ್ಚಾಗಿ ಸಿರಿಧಾನ್ಯವನ್ನು ತಮಿಳುನಾಡಿಗೆ ಅಥವಾ ಆಂಧ್ರಪ್ರದೇಶಕ್ಕೆ ಕೊಂಡುಹೋಗಿ ಸಂಸ್ಕರಣ ಮಾಡಿಸಬೇಕಾದ ಸ್ಥಿತಿ ಎದುರಾಗಿದೆ.

ಸಂಸ್ಕರಣಾ ಘಟಕ ಮತ್ತು ಜಾಗೃತಿ ಮೂಡಿಸುವುದರಲ್ಲಿ ವಿಫಲವಾದ ಸರ್ಕಾರ, “ಜಿಲ್ಲಾ ಮಟ್ಟದಲ್ಲಿ ರೈತರ ಉತ್ತೇಜನಕ್ಕಾಗಿ ಸಿರಿಧಾನ್ಯ ಮೇಳ ನಡೆಸುತ್ತಿದ್ದೇವೆ” ಎಂದು ಹೇಳಿಕೊಳ್ಳುತ್ತಿದೆ. ಆದರೆ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ,  ಬೀದರ್, ವಿಜಾಪುರ, ಗದಗ, ಕಲಬುರಗಿ, ಮೈಸೂರು, ರಾಯಚೂರು, ಚಾಮರಾಜನಗರ, ಧಾರವಾಡ,  ಕೊಪ್ಪಳ, ರಾಮನಗರ, ಶಿವಮೊಗ್ಗ ಮಂಡ್ಯ ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಸಿರಿಧಾನ್ಯದ ಇಳುವರಿ ಪ್ರಮಾಣ ಶೇಕಡ 100ರಷ್ಟು ಕಡಿಮೆಯಾಗಿದೆ.

ಮೇಳಗಳಿಗೆ ಖರ್ಚು ಎಷ್ಟು:

2013-14ರಿಂದ 2017-18ರವೆರೆಗೆ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮೇಳ ಕಾರ್ಯಕ್ರಮಕ್ಕೆ ರೂ. 2.49 ಕೋಟಿ ವ್ಯಯಿಸಲಾಗಿದೆ. 2017ರಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದಕ್ಕೆ ರೂ 6.82 ಕೋಟಿ, 2018ರ ಅಂತರಾಷ್ಟ್ರೀಯ ಕಾರ್ಯಕ್ರಮವೊಂದಕ್ಕೆ ರೂ. 12.16 ಕೋಟಿ ಹಾಗೂ 2019ರ ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ರೂ. 10.46 ಕೋಟಿ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಬೆಳೆಯುವ ಬೆಳೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಸಲುವಾಗಿ ಸರ್ಕಾರ ಮೇಳಗಳನ್ನು ಆಯೋಜಿಸುತ್ತದೆ. ಆದರೆ ಮೊದಲು ರೈತರಲ್ಲಿ ಜಾಗೃತಿ ಮೂಡಿಸದೆ, ಸಂಸ್ಕರಣ ಘಟಕಗಳನ್ನು ಅಭಿವೃದ್ಧಿ ಪಡಿಸದೆ, ಮೇಳಗಳನ್ನು ನಡೆಸುವುದರಲ್ಲಿ ಯಾವ ಅರ್ಥವಿದೆ ಎಂಬುದು ದೊಡ್ಡ ಪ್ರಶ್ನೆ. ಹೀಗಾಗಿ ವ್ಯಯ ಮಾಡಿದ ಹಣದಲ್ಲಿ ರೈತರಿಗೆ ಅರ್ಥ ಗರ್ಭಿತವಾಗಿ, ಪ್ರತಿ ವರ್ಷ ಕೃಷಿ ಇಲಾಖೆಯ ಅಧಿಕಾರಿಗಳಿಂದ ಕೃಷಿ ಚಟುವಟಿಕೆಗಳ ಕುರಿತು ರೈತರೊಂದಿಗೆ ಸಂವಾದಗಳನ್ನು ನಡೆಸಿದ್ದರೆ ರಾಜ್ಯದಲ್ಲೇ ಸಿರಿಧಾನ್ಯವು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ಪಡೆದುಕೊಳ್ಳುತ್ತಿತ್ತು. ರೈತರಲ್ಲಿರುವ ಗೊಂದಲಗಳನ್ನು ಬಗೆಹರಿಸಬಹುದಿತ್ತು.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...