ಇತ್ತೀಚೆಗೆ ದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಅನೇಕ ಮಾನವ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರನ್ನು ಚಿಕ್ಕ ಪುಟ್ಟ ಕಾರಣ ನೀಡಿ ಬಂಧಿಸುವುದು ನಿತ್ಯದ ಕಾರ್ಯವೇ ಆಗಿದೆ. ದೇಶಾಧ್ಯಂತ ಇಂತಹ ನೂರಾರು ಕಾರ್ಯಕರ್ತರು ಇನ್ನೂ ಜೈಲುಗಳಲ್ಲಿ ಕೊಳೆಯುತ್ತ ನ್ಯಾಯಾಲಯಗಳ ಆಮೆ ವೇಗದ ವಿಚಾರಣೆ ಎದುರಿಸುತಿದ್ದಾರೆ. ಈ ರೀತಿಯ ಬಂಧನಗಳಿಂದ ಹೋರಾಟಗಾರರ ಶ್ರಮ ಮತ್ತು ಅಮೂಲ್ಯ ಸಮಯ ಅನಾವಶ್ಯಕವಾಗಿ ವ್ಯರ್ಥವಾಗುತ್ತಿದೆ. ಆದರೆ ಇದರಿಂದ ಆಳುವವರಿಗೆ ತುಂಬಾ ನೆಮ್ಮದಿ ಸಿಕ್ಕಿದೆ. ಈ ಹೋರಾಟಗಾರರು ಮಾಡಿದ ತಪ್ಪು ಸರ್ಕಾರದ ವಿರುದ್ದ ಪ್ರತಿಭಟಿಸಿದ್ದು ಆಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಹುತೇಕ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೆ ನಮ್ಮ ದೇಶದಲ್ಲಿ ಇದಕ್ಕೆ ಯಾವುದೇ ಬೆಲೆ ಇಲ್ಲ. ಇದರಿಂದಾಗಿ ಹೋರಾಟಗಾರರ ಕುಟುಂಬಗಳು ಭಾರೀ ತೊಂದರೆಯನ್ನು ಅನುಭವಿಸುತ್ತಿವೆ. ಆಳುವವರ ಕೆಂಗಣ್ಣಿಗೆ ಗುರಿಯಾಗದೆ, ಪರವಾಗಿರುವವರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ಸರ್ಕಾರವನ್ನು ಟೀಕಿಸಿದ ಕೂಡಲೇ ಪೋಲೀಸರು ಇಲ್ಲದ ಕಾನೂನನ್ನು ಸೇರಿಸಿ ಬಂಧಿಸುತ್ತಾರೆ. ಇದು ಬರೇ ಮಾದ್ಯಮದವರಿಗೆ ಮಾತ್ರವಲ್ಲ ಯೂಟ್ಯೂಬ್ , ಸೋಷಿಯಲ್ ಮೀಡಿಯಾದ ಬರಹಗಾರರಿಗೂ ಇದು ಅನ್ವಯ ಆಗುತ್ತಿರುವುದು ದುರಂತ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳನ್ನೇ ಗಾಳಿಗೆ ತೂರುವ ಇಂತಹ ಪ್ರಕರಣಗಳು ಕೊನೆಯಾಗಬೇಕಾದರೆ ಜನರು ದೊಡ್ಡ ಮಟ್ಟದಲ್ಲೆ ಪ್ರತಿಭಟನೆಗೆ ಇಳಿಯಬೇಕು.
Also Read: ಹಥ್ರಾಸ್: ಪತ್ರಕರ್ತ ಸೇರಿ ನಾಲ್ವರ ಮೇಲೆ UAPA, ದೇಶದ್ರೋಹ ಪ್ರಕರಣ ದಾಖಲು
ಇತ್ತೀಚೆಗೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ಹಾತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, ಮಲಯಾಳಂ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬಂಧನವನ್ನು ಸಮರ್ಥಿಸುವ ಸಲುವಾಗಿ ಹಲವಾರು ಕಾರಣಗಳನ್ನು ನೀಡಿದೆ ಆದರೆ ಅವರ ಯಾವುದೇ ತಪ್ಪು ಅಥವಾ ಕಾನೂನುಬಾಹಿರ ಕೃತ್ಯದ ಬಗ್ಗೆ ಯಾವುದೇ ಪುರಾವೆಗಳನ್ನು ನೀಡಲು ವಿಫಲವಾಗಿದೆ, ಅವರ ಮೇಲೆ ಆರೋಪ ಹೊರಿಸಲಾಗಿರುವ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯನ್ನು ಅನ್ವಯಿಸುವ ಯಾವುದೇ ಅಪರಾಧವನ್ನು ಅವರು ಮಾಡಿಲ್ಲ.ಕಳೆದ ಅಕ್ಟೋಬರ್ 5 ರಂದು ಇತರ ಮೂವರೊಂದಿಗೆ ಬಂಧನಕ್ಕೊಳಗಾದಾಗ ಹತ್ರಾಸ್ ಗೆ ಪತ್ರಕರ್ತನಾಗಿ ಪ್ರಯಾಣಿಸುತ್ತಿದ್ದರೆಂದು ಅಫಿಡವಿಟ್ನಲ್ಲಿ ಆರೋಪಿಸಲಾಗಿದೆ ಮತ್ತು ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ದ ಪಧಾಧಿಕಾರಿ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಆಧರೆ ಪಿಎಫ್ಐ ಯನ್ನು ಯುಎಪಿಎ ಅಡಿಯಲ್ಲಿ ಸರ್ಕಾರವು ನಿಷೇಧೀಸಿಲ್ಲ. ಅಫಿಡವಿಟ್ ನಲ್ಲಿ ರಾಜ್ಯ ಸರ್ಕಾರವು ಆರೋಪಿಗಳಿಗೆ ನಿಷೇಧಿತ ಸಂಸ್ಥೆಗಳೊಂದಿಗೆ ಸಂಪರ್ಕವಿದೆ ಎಂಬ ಪುರಾವೆಗಳು ಇವೆ ಎಂದು ಹೇಳುತ್ತದೆ ಆದರೆ ಯಾವ ಸಂಸ್ಥೆಗಳ ಜೊತೆ ಅಥವಾ ಸಿದ್ದೀಕ್ ಅವರು ಹೊಂದಿರುವ ನಂಟಿನ ಸ್ವರೂಪವನ್ನು ಹೇಳುವುದಿಲ್ಲ.
Also Read: ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಎಫ್ಐಆರ್ನಲ್ಲಿ ಮಾಡಿದ ಆರೋಪದಲ್ಲಿ ಅವರು ಪ್ರಯಾಣಿಸುತಿದ್ದ ಕಾರಿನಲ್ಲಿ ‘ಆಮ್ ಐ ನಾಟ್ ಇಂಡಿಯಾಸ್ ಡಾಟರ್’ ಎಂಬ ಘೋಷ ವಾಕ್ಯವಿದ್ದ ಕರಪತ್ರವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಲಾಗಿದೆ. ಆದರೆ ಇದು ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತರಿಗೆ ನ್ಯಾಯವನ್ನು ಕೋರಿ ಬೆಂಬಲಿಸುವ ಪ್ರತಿಭಟನೆಯಾಗಿದ್ದು ಅಕ್ಟೋಬರ್ 5 ರಂದು ಭಾರತದಾದ್ಯಂತ ಈ ಪ್ರತಿಭಟನೆ ನಡೆಯಿತು. ಆದರೆ ಪ್ರತಿಭಟನೆ ಅಥವಾ ಕರಪತ್ರದಲ್ಲಿ ಕಾನೂನುಬಾಹಿರ ಅಂಶ ಏನೂ ಇರಲಿಲ್ಲ. ಅವರ ಮೇಲಿನ ಇನ್ನೊಂದು ಆರೋಪ ಎಂದರೆ ʼಜಸ್ಟೀಸ್ ಫಾರ್ ಹಾತ್ರಾಸ್ ವಿಕ್ಟಿಮ್ʼ ಎಂಬ ವೆಬ್ ಪೇಜನ್ನು ನಿರ್ಮಿಸಿರುವುದು ಆಗಿದೆ. ಆದರೆ ಶೀಘ್ರದಲ್ಲಿ ಈ ವೆಬ್ ಪೇಜನ್ನು ಬಂದ್ ಮಾಡಲಾಗಿದೆ. ಈ ವೆಬ್ ಪೇಜ್ ನಲ್ಲಿ ಹಿಂಸಾಚಾರ ಅಥವಾ ಯಾವುದೇ ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡುವ ಅಂಶವೇ ಇರಲಿಲ್ಲ. ಕಪ್ಪನ್ ಮತ್ತು ಇತರ ಮೂವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ ಗಳ ಜತೆಗೆ ದೇಶದ್ರೋಹದ ಆರೋಪವನ್ನೂ ಹೊರಿಸಲಾಗಿದೆ. ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (KUWJ) ದೆಹಲಿ ಘಟಕದ ಕಾರ್ಯದರ್ಶಿಯೂ ಆಗಿರುವ ಕಪ್ಪನ್ ಅವರ ಪರವಾಗಿ KUWJ ಸುಪ್ರೀಂ ಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ ಕಪ್ಪನ್ ಅವರಿಗೆ ಕಾನೂನು ನೆರವು ಮತ್ತು ಕುಟುಂಬದವರಿಗೆ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದೆ.
Also Read: ಸಿದ್ದೀಕ್ ಕಪ್ಪನ್ ಬಂಧನ: ಸುಪ್ರೀಂ ಕೊರ್ಟ್ನಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸ್
ಅಫಿಡವಿಟ್ ಗೆ ಸಂಬಂದ ಪಟ್ಟಂತೆ ಮಥುರಾ ಜೈಲು ಸೂಪರಿಂಟೆಂಡೆಂಟ್ ಕಪ್ಪನ್ ಸೇರಿದಂತೆ ನಾಲ್ವರ ವಿರುದ್ದ ಮಾಡಲಾಗಿರುವ ಆರೋಪವನ್ನು ಪೋಲೀಸರು ಸಲ್ಲಿಸಿದ ಮೊದಲ ಮಾಹಿತಿ ವರದಿಯಲ್ಲಿ ಯೇ ದಾಖಲಿಸಲಾಗಿದೆ. ದೇಶದಲ್ಲಿ ಹಲವಾರು ಬಿಜೆಪಿ ರಾಜ್ಯ ಸರ್ಕಾರಗಳು ಪಿಎಫ್ಐ ಮೇಲೆ ನಿಷೇಧವನ್ನು ಹೇರಬೇಕೆಂದು ಒತ್ತಾಯಿಸಿವೆ. ಆದರೆ ಕೇಂದ್ರವು ಸಾಮಾಜಿಕ-ರಾಜಕೀಯ ಚಳುವಳಿ ಎಂದು ಬಣ್ಣಿಸುವ ಈ ಸಂಘಟನೆಯನ್ನು ನಿಷೇಧಿಸಿಲ್ಲ. ಮಾಧ್ಯಮದೊಂದಿಗೆ ಮಾತನಾಡಿದ , ಕಪ್ಪನ್ನ ಪತ್ನಿ ರೈಹನಾಥ್ ಕಪ್ಪನ್, ತನ್ನ ಪತಿಗೆ ಪಿಎಫ್ಐ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಪಿಎಫ್ಐ ಅಥವಾ ಅಂತಹ ಯಾವುದೇ ಸಂಘಟನೆಯೊಂದಿಗೆ ಅವರಿಗೆ ಯಾವುದೇ ಸಂಪರ್ಕವಿಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅವರು ಕೇವಲ ಪತ್ರಕರ್ತರಾಗಿದ್ದು, ಅವರ ಕುಟುಂಬವನ್ನು ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ, ಎಂದು ಅವರು ಹೇಳಿದರು. ತನ್ನ ಗಂಡನನ್ನು ಪಿಎಫ್ಐ ಜತೆ ನಂಟು ಕಲ್ಪಸುವುದನ್ನು ಅವರು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸುವ ಮತ್ತು ಪಿಎಫ್ಐ ಸದಸ್ಯನೆಂದು ಆರೋಪಿಸುವ ತಾರ್ಕಿಕತೆಯ ಬಗ್ಗೆ. ಮಾತನಾಡಿದ ಅವರು ಕಪ್ಪನ್ ಅವರು ಒಂದು ವೇಳೆ ಪಿಎಫ್ಐ ಕಾರ್ಯಕರ್ತ ಎಂದೇ ಇಟ್ಟುಕೊಳ್ಳೋಣ . ಆದರೆ ಇದು ನಿಷೇಧಿತ ಸಂಘಟನೆಯಲ್ಲ. ಎರಡನೆಯದಾಗಿ, ಅವರು ಹೋಗಿ ಆರ್ಎಸ್ಎಸ್ ಅಥವಾ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ಪತ್ರಕರ್ತರನ್ನು ಬಂಧಿಸುತ್ತಾರೆಯೇ? ನನ್ನ ಪತಿಗೆ ಅನ್ವಯವಾಗುವ ಅಂಶವು ಆರ್ಎಸ್ಎಸ್, ಬಿಜೆಪಿ ಮತ್ತು ಇತರ ಸಂಸ್ಥೆಗಳ ಭಾಗವಾಗಿರುವ ಪತ್ರಕರ್ತರಿಗೆ ಅನ್ವಯಿಸುವುದಿಲ್ಲ ಎಂದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.
Also Read: ಇನ್ನೂ ಜೈಲಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೋರಾಟಗಾರರು: ಅರ್ನಬ್ಗಿರುವ ಅನುಕೂಲ ಇವರಿಗಿಲ್ಲ
ಉತ್ತರ ಪ್ರದೇಶದ ಸರ್ಕಾರ ಸಲ್ಲಿಸಿದ ಅಫಿಡವಿಟ್ನಲ್ಲಿ “ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಕಚೇರಿ ಕಾರ್ಯದರ್ಶಿಯಾಗಿರುವ ಕಪ್ಪನ್ ಅವರು ಪತ್ರಕರ್ತರ ಸೋಗಿನಲ್ಲಿ ಮತ್ತು ಕೇರಳ ಮೂಲದ ಪತ್ರಿಕೆ ತೇಜಸ್ನ ಗುರುತಿನ ಚೀಟಿಯನ್ನು ಬಳಸುತ್ತಿದ್ದಾರೆ ಎಂದು ಹೇಳಿದೆ. ಅಲ್ಲದೆ 2018 ರಲ್ಲಿ ತೇಜಸ್ ಪತ್ರಿಕೆಯನ್ನು ಮುಚ್ಚಲಾಗಿದೆ ಎಂದೂ ಅಫಿಡವಿಟ್ ತಿಳಿಸಿದೆ. ಅವರು ಇತರ ಪಿಎಫ್ಐ ಕಾರ್ಯಕರ್ತರು ಮತ್ತು ಅದರ ವಿದ್ಯಾರ್ಥಿ ವಿಭಾಗ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ನಾಯಕರೊಂದಿಗೆ ಪತ್ರಿಕೋದ್ಯಮದ ಸೋಗಿನಲ್ಲಿ ಹತ್ರಾಸ್ ಗೆ ಹೋಗುತ್ತಿದ್ದಾರೆ ಎಂದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ. ಜಾತಿ ವಿಭಜನೆಯನ್ನು ಸೃಷ್ಟಿಸಲು ಮತ್ತು ಕಾನೂನು ಮತ್ತು ಸುವ್ಯವಸ್ತೆ ಗೆ ಧಕ್ಕೆ ತರಲು ಅವರು ಪ್ರಚೋದನಾತ್ಮಕ ವಸ್ತುಗಳನ್ನು ಹೊಂದಿದ್ದರು ಎಂದು ಅಫಿಡವಿಟ್ ತಿಳಿಸಿದೆ.
ಸಿದ್ದೀಕ್ ಅವರು ಪತ್ರಕರ್ತನಾಗಿ ಕೆಲಸ ಮಾಡುತ್ತಿರುವ ಅಝಿಮುಖಂ ಡಾಟ್ ಕಾಂ ವೆಬ್ ಸೈಟ್ ನ ಸಂಪಾದಕರು ಕಪ್ಪನ್ ಅವರು ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಕುರಿತು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.