ವಿಜಯ್ ಮಲ್ಯ ಹಸ್ತಾಂತರ: ವರದಿ ನೀಡಲು ಕೇಂದ್ರಕ್ಕೆ ಆರು ವಾರಗಳ ಕಾಲಾವಕಾಶ ನೀಡಿದ ಸುಪ್ರಿಂ

ವಿಜಯ್‌ ಮಲ್ಯ ಹಸ್ತಾಂತರಕ್ಕೆ ಸಂಬಂದಪಟ್ಟಂತೆ ಕೇಂದ್ರ ಸರ್ಕಾರಕ್ಕೆ ಸುಪ್ರಿಂ ಕೋರ್ಟ್‌ ವರದಿ ನೀಡಲು ಸೂಚಿಸಿದೆ. ವರದಿಯನ್ನು ಸಲ್ಲಿಸಲು ಆರು ವಾರಗಳ ಕಾಲಾವಕಾಶವನ್ನು ನೀಡಿದೆ.

ಭಾರತದ ಬ್ಯಾಂಕುಗಳಿಗೆ ವಂಚಿಸಿ ಲಂಡನ್‌ನಲ್ಲಿ ವಾಸವಾಗಿರುವ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತಾಗಿ ಯುಕೆಯ ನ್ಯಾಯಾಲಯದಲ್ಲಿ ಗೌಪ್ಯ ವಿಚಾರಣೆ ನಡೆಯುತ್ತಿದೆ ಕೇಂದ್ರ ಸರ್ಕಾರ ಕಳೆದ ತಿಂಗಳು ಸುಪ್ರಿಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಅದರ ನಂತರ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರವು ನೀಡಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಬಾರಿ ಸುಪ್ರಿಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದ ಕೇಂದ್ರ ಗೃಹ ಇಲಾಖೆಯು, ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವದರ ಪ್ರಕ್ರಿಯೆಯನ್ನು ಫೆಬ್ರವರಿ 9, 2017ರಂದು ಯುಕೆ ನ್ಯಾಯಾಲಯದಲ್ಲಿ ಆರಂಭಿಸಲಾಗಿತ್ತು. ಡಿಸೆಂಬರ್‌ 2018ರಲ್ಲಿ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಯುಕೆ ವೆಸ್ಟ್‌ಮಿನ್ಸ್ಟರ್‌ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ನಿರ್ದೇಶನ ನೀಡಿದ್ದರು. ಈ ಆದೇಶವನ್ನು ಲಂಡನ್‌ ಹೈಕೋರ್ಟ್‌ನಲ್ಲಿ ವಿಜಯ್‌ ಮಲ್ಯ ಪ್ರಶ್ನಿಸಿದ್ದರು. ಈ ಅರ್ಜಿಯನ್ನು ಏಪ್ರಿಲ್‌ 20, 2020ರಂದು ಹೈಕೋರ್ಟ್‌ ತಳ್ಳಿಹಾಕಿತ್ತು.

Also Read: ರಹಸ್ಯ ವಿಚಾರಣಾ ಪ್ರಕ್ರಿಯೆಯಿಂದ ಮಲ್ಯ ಹಸ್ತಾಂತರ ವಿಳಂಬ -ವಿದೇಶಾಂಗ ಸಚಿವಾಲಯ

ನಂತರ ಯುಕೆಯ ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿಯನ್ನು ಕೋರಿ ಮತ್ತೆ ಲಂಡನ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಕೂಡಾ ಮೇ 14, 2020ರಂದು ಲಂಡನ್‌ ಹೈಕೋರ್ಟ್‌ ತಳ್ಳಿ ಹಾಕಿತ್ತು.

ಇದರ ನಂತರ ಯಾವುದೇ ವರದಿಯನ್ನು ಕೇಂದ್ರ ಸರ್ಕಾರವು ನೀಡಿರಲಿಲ್ಲ. ಹೀಗಾಗಿ, ಬ್ರಿಟನ್‌ನಲ್ಲಿ ನಡೆಯುತ್ತಿರುವ ವಿಚಾರಣೆ ನಡೆಯಲು ಎಷ್ಟು ಸಮಯ ಬೇಕಾಗಬಹುದು ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರನ್ನು ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ಪೀಠವು ಕೇಳಿತ್ತು.

Also Read: ದಯವಿಟ್ಟು ಹಣ ಸ್ವೀಕರಿಸಿ ಎನ್ನುವ ಮಲ್ಯ, ಜೈಲಿಗೆ ಕಳಿಸಿಯೇ ಸಿದ್ದ ಎನ್ನುತ್ತಿರುವ ಸರ್ಕಾರ!

ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಆರು ವಾರಗಳ ಕಾಲಾವಕಾಶವನ್ನು ನೀಡಿ ಎಂದು ತುಷಾರ್‌ ಮೆಹ್ತಾ ಅವರು ಕೇಳಿಕೊಂಡಿದ್ದರು. ಇವರ ಮನವಿಯನ್ನು ಈಗ ಸುಪ್ರಿಂಕೋರ್ಟ್‌ ಪುರಸ್ಕರಿಸಿ, ಆರು ವಾರಗಳ ಕಾಲಾವಕಾಶ ನೀಡಿದೆ.

Please follow and like us:

Related articles

Share article

Stay connected

Latest articles

Please follow and like us: