Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮೂರು ಗಂಟೆಗೆ ನೂರು ಕೋಟಿ, ಟ್ರಂಪ್‌ಗೆ ಅಹಮದಾಬಾದ್‌ನಲ್ಲಿ ದುಬಾರಿ ಸ್ವಾಗತ

ಮೂರು ಗಂಟೆಗೆ ನೂರು ಕೋಟಿ, ಟ್ರಂಪ್‌ಗೆ ಅಹಮದಾಬಾದ್‌ನಲ್ಲಿ ದುಬಾರಿ ಸ್ವಾಗತ
ಮೂರು ಗಂಟೆಗೆ ನೂರು ಕೋಟಿ

February 20, 2020
Share on FacebookShare on Twitter

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸ ದಿನಕ್ಕೊಂದು ಸುದ್ದಿಯನ್ನ ಗುಜರಾತ್‌ನಿಂದ ಹೊತ್ತು ತರುತ್ತಿದೆ, ಟ್ರಂಪ್‌ ಬರುವ ಹಾದಿಯಲ್ಲಿ ಸ್ಲಂ ಕಾಣದಿರಲಿ ಎಂದು ಗೋಡೆಕಟ್ಟಿ, ಕೊಳಚೆ ಪ್ರದೇಶದ ನಿವಾಸಿಗಳನ್ನ ಒಕ್ಕಲೆಬ್ಬಿಸಿ, ರೋಡ್‌ಶೋ ಹಾದಿಯಲ್ಲೆಲ್ಲಾ ಸ್ವಚ್ಛ ಭಾರತ ಅಭಿಯಾನ ನಡೆಸಿ, ಅಭೂತಪೂರ್ವ ಭದ್ರತೆ ನೀಡಿರುವ ಗುಜರಾತ್‌ ಸರ್ಕಾರ ವ್ಯಯಿಸುತ್ತಿರುವುದು ಬರೊಬ್ಬರಿ ನೂರು ಕೋಟಿ ರುಪಾಯಿ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ಹೇಳಿದೆ, ಈ ಬೃಹತ್‌ ಮೊತ್ತ ಗುಜರಾತ್‌ ಬಜೆಟ್‌ನ ವೆಚ್ಚದ 1.5 ಶೇಕಡಾ ಎಂದು ಅಂದಾಜಿಸಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಅಮೆರಿಕ ಅಧ್ಯಕ್ಷರ ಗುಜರಾತ್‌ ಪ್ರವಾಸಕ್ಕೆ ಏಕಿಷ್ಟು ಮಹತ್ವ?

ರಾಜತಾಂತ್ರಿಕತೆಯ ಆಚೆ ಪ್ರಧಾನಿ ಮೋದಿ ವಿಶ್ವಕ್ಕೆ ಸಂದೇಶ ಸಾರಲು, ದೇಶದೊಳಗಿನ ಬುದ್ಧಿಜೀವಿಗಳಿಗೆ ಉತ್ತರ ನೀಡಲು ಬೇಕಾಬಿಟ್ಟಿ ಹಣ ವ್ಯಯಿಸುತ್ತಿದ್ದಾರೆಯೇ? ಕಳೆದ ಹದಿನೈದು ದಿನಗಳಿಂದ ಟ್ರಂಪ್‌ ಭಾರತ ಭೇಟಿಯದ್ದೇ ಚರ್ಚೆ. ಫೆ.24ರಂದು ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿಯುವ ಟ್ರಂಪ್‌ರನ್ನ ಪ್ರಧಾನಿ ಮೋದಿ ನೂರಾರು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ, ಟ್ರಂಪ್‌ ಪೂರ್ವನಿಗದಿಯಂತೆ ಮೂರೇ ಗಂಟೆಗಳ ಕಾಲ ಅಹಮದಾಬಾದ್‌ನಲ್ಲಿರ್ತಾರೆ, ಆದರೂ ಕೂಡ ಅಲ್ಲಿನ ಕೊಳಕನ್ನ ಮರೆಮಾಚಿ ಟ್ರಂಪ್‌ ಎದುರು ಸುಂದರ ಭಾರತ ತೋರಿಸಲು ಪ್ರಧಾನಿ ಸಿದ್ಧರಾಗಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಚೀನಾ,ಜಪಾನ್‌ ಹಾಗೂ ಇಸ್ರೇಲ್‌ ಪ್ರಧಾನಿಗಳು ಭೇಟಿ ನೀಡಿದ್ದರು ಆದರೆ ಅಮೆರಿಕಾ ಅಧ್ಯಕ್ಷರು ಬಂದಿರಲಿಲ್ಲ, ಈ ಭೇಟಿ ಹಲವು ಆಯಾಮಗಳಲ್ಲಿ ಮಹತ್ವ ಪಡೆದುಕೊಂಡಿದೆ, ಅಧ್ಯಕ್ಷೀಯ ಚುನಾವಣೆ ಹೊಸ್ತಿಲಲ್ಲಿ ಟ್ರಂಪ್‌ಗೂ ಅನಿವಾಸಿ ಭಾರತೀಯರನ್ನ ಓಲೈಸಿಕೊಳ್ಳಬೇಕಿದೆ, ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಗಳಾಗಿದ್ದಾಗ ನಡೆದ ನರಮೇಧದ ಕಾರಣಕಕ್ಕೆ ಅಮೆರಿಕಾ ವೀಸಾ ನಿರಾಕರಣೆ ಮಾಡಿತ್ತು. ದೇಶದ ಬುದ್ಧಿಜೀವಿಗಳೇ ಪ್ರಧಾನಿಯನ್ನ ಆರೋಪಿ ಸ್ಥಾನದಲ್ಲಿಟ್ಟಿದ್ದು ಎಂದು ಸಂಘಪರಿವಾರದ ಸದಸ್ಯರು ಸೂಕ್ತ ಉತ್ತರ ನೀಡಲು ಕಾಯುತ್ತಿದ್ದರು. ಕಳೆದ ಭಾನುವಾರ ಶಿವಮೊಗ್ಗದಲ್ಲಿ ಪಕ್ಷದ ಹಿರಿಯರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಕೂಡ ಟ್ರಂಪ್‌ ಬರುವಿಕೆಯನ್ನ ದಶಕದ ದ್ವೇಷ ಎಂಬಂತೇ ಮಾತನಾಡಿ, ನಮ್ಮಲ್ಲಿರುವ ಬುದ್ಧಿಜೀವಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮರ್ಯಾದೆ ತೆಗೆದಿದ್ದರು, ವೀಸಾ ನಿರಾಕರಣೆ ಮಾಡಿದ ರಾಷ್ಟ್ರದ ಅಧ್ಯಕ್ಷ ಗುಜರಾತ್‌ಗೇ ಬರುತ್ತಿರುವುದು ಸಾಮಾನ್ಯ ಅಲ್ಲ ಎಂದಿದ್ದರು.

ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಬಂದಿಳಿಯುವ ಟ್ರಂಪ್‌ರನ್ನ ಪ್ರಧಾನಿ ಬರಮಾಡಿಕೊಳ್ಳಲಿದ್ದಾರೆ, ಅಲ್ಲಿಂದು ಏರ್‌ಪೋರ್ಟ್‌ ಹಾದಿಯಲ್ಲಿ ನಗರದೊಳಗೆ ಸುಮಾರು 22 ಕಿಲೋಮೀಟರ್‌ ರೋಡ್‌ ಶೋ ನಡೆಯಲಿದೆ ಈ ಕಾರಣಕ್ಕಾಗಿಯೇ ಟ್ರಂಪ್‌ ಬರುವ ಮಾರ್ಗದ ಆಚೀಚೆ ಇರುವ ಕೊಳಚೆ ಪ್ರದೇಶಗಳ ಮರೆಮಾಡಿ ಬೃಹತ್‌ ಗೋಡೆಗಳನ್ನ ನಿರ್ಮಾಣ ಮಾಡಿ ವೆಲ್‌ಕಂ ಬರಹಗಳನ್ನ ಬರೆದಿರುವುದು, ನಂತರ ಸಬರಮತಿಗೆ ಭೇಟಿ ನೀಡಲಿದ್ದಾರೆ, ಸುತ್ತಲೂ ಲಕ್ಷಾಂತರ ಜನ ಉಭಯ ನಾಯಕರಿಗೆ ಸ್ವಾಗತ ಕೋರುತ್ತಾರೆ, ಅಲ್ಲಿಂದ ಮೊಟೆರದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದಾರೆ, ಈ ಎಲ್ಲಾ ಭದ್ರತೆಗೆ ಹನ್ನೆರಡು ಸಾವಿರ ಪೊಲೀಸ್‌ ಹಾಗೂ ಅರೆಸೇನಾ ಪಡೆಯನ್ನ ನಿಯೋಜಿಸಲಾಗಿದೆ. ಕೇವಲ ಮೂರೇ ಗಂಟೆಯಲ್ಲಿ ನಡೆಯುವ ಈ ಕಾರ್ಯಕ್ರಮಗಳಿಗೆ ನೂರು ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಟ್ರಂಪ್‌ ಗುಜರಾತ್‌ಗೇ ಬರುವ ಅನಿವಾರ್ಯವೇನಿಲ್ಲ ಆದರೆ ಪ್ರಧಾನಿಗೆ ಅವಶ್ಯಕತೆ ಇದೆ, ಭಾರತವನ್ನ ರಾಜಕೀಯೇತರ ಕಾರಣಗಳಿಗೆ ಭೇಟಿ ನೀಡುವುದೇ ಆಗಿದ್ದರೆ ಬೆಂಗಳೂರು ಸೇರಿ ದೇಶದ ಹಲವು ಸ್ಥಳಗಳು ಯೋಗ್ಯ ಎನಿಸುತ್ತಿದ್ದವು, ಟ್ರಂಪ್‌ಗೆ ಸುಂದರ ಗುಜರಾತ್‌ ತೋರಿಸಲು ಕೊಳಚೆ ಪ್ರದೇಶಗಳಿಗೆ ಗೋಡೆ ಏರಿಸಿ, ಜನರನ್ನ ತಾತ್ಕಾಲಿಕವಾಗಿ ಒಕ್ಕಲೆಬ್ಬಿಸಿ ನೂರಾರು ಕೋಟಿ ಸುರಿಯುತ್ತಿರುವ ಗುಜರಾತ್‌ ಸರ್ಕಾರ ಟೀಕೆ ಟಿಪ್ಪಣಿಗಳೊಂದಿಗೆ ಇತಿಹಾಸ ನಿರ್ಮಿಸಲಿದೆ. ಭೇಟಿ ಬಳಿಕ ಮಾಧ್ಯಮಗಳು ಹೇಗೆ ವಿಶ್ಲೇಷಣೆ ಮಾಡಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಕರ್ನಾಟಕ ವಿಧಾನಭೆಯಲ್ಲಿ ಪಕ್ಷಗಳ ಸದ್ಯದ ಬಲಾಬಲ ಎಷ್ಟು?
Top Story

ಕರ್ನಾಟಕ ವಿಧಾನಭೆಯಲ್ಲಿ ಪಕ್ಷಗಳ ಸದ್ಯದ ಬಲಾಬಲ ಎಷ್ಟು?

by ಪ್ರತಿಧ್ವನಿ
March 29, 2023
ಹಾಸನದಲ್ಲಿ ಕಗ್ಗಂಟಾದ JDS ಟಿಕೆಟ್ ಹಂಚಿಕೆ ವಿಚಾರ; ಪಕ್ಷದ ವರಿಷ್ಠ HDD ಎಂಟ್ರಿ
ಕರ್ನಾಟಕ

ಹಾಸನದಲ್ಲಿ ಕಗ್ಗಂಟಾದ JDS ಟಿಕೆಟ್ ಹಂಚಿಕೆ ವಿಚಾರ; ಪಕ್ಷದ ವರಿಷ್ಠ HDD ಎಂಟ್ರಿ

by ಮಂಜುನಾಥ ಬಿ
April 1, 2023
ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ಆಯ್ಕೆ ಅಸಿಂಧು ; ಹೈಕೋರ್ಟ್‌
Top Story

ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ಆಯ್ಕೆ ಅಸಿಂಧು ; ಹೈಕೋರ್ಟ್‌

by ಪ್ರತಿಧ್ವನಿ
March 30, 2023
ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ
Top Story

ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ

by ಪ್ರತಿಧ್ವನಿ
March 28, 2023
ʻಗೇಮ್‌ ಚೇಂಜರ್‌ʼ ಆದ ರಾಮ್‌ಚರಣ್‌..!
ಸಿನಿಮಾ

ʻಗೇಮ್‌ ಚೇಂಜರ್‌ʼ ಆದ ರಾಮ್‌ಚರಣ್‌..!

by ಪ್ರತಿಧ್ವನಿ
March 27, 2023
Next Post
ಜಾಮಿಯ ಲಾಠಿ ಚಾರ್ಜ್‌ನಲ್ಲಿ  ಕಣ್ಣು ಕಳೆದುಕೊಂಡ ವಿದ್ಯಾರ್ಥಿ ಸಿದ್ದ ಪಡಿಸಿದ ಪ್ರಬಂಧಕ್ಕೆ ಅವಾರ್ಡ್‌

ಜಾಮಿಯ ಲಾಠಿ ಚಾರ್ಜ್‌ನಲ್ಲಿ  ಕಣ್ಣು ಕಳೆದುಕೊಂಡ ವಿದ್ಯಾರ್ಥಿ ಸಿದ್ದ ಪಡಿಸಿದ ಪ್ರಬಂಧಕ್ಕೆ ಅವಾರ್ಡ್‌

ದಿನೇಶ್ ಗುಂಡೂರಾವ್-ಸೋನಿಯಾ ಗಾಂಧಿ ಭೇಟಿ ಹಿಂದಿನ ಮರ್ಮವೇನು?

ದಿನೇಶ್ ಗುಂಡೂರಾವ್-ಸೋನಿಯಾ ಗಾಂಧಿ ಭೇಟಿ ಹಿಂದಿನ ಮರ್ಮವೇನು?

ಟ್ರಂಪ್ ಮತ್ತು ಸ್ಲಂ ಸುತ್ತಲಿನ ಗೋಡೆ; ಅಸಲಿಗೆ ಮೋದಿ ಪ್ರತಿನಿಧಿಸುತ್ತಿರುವ ಭಾರತ ಯಾವುದು?

ಟ್ರಂಪ್ ಮತ್ತು ಸ್ಲಂ ಸುತ್ತಲಿನ ಗೋಡೆ; ಅಸಲಿಗೆ ಮೋದಿ ಪ್ರತಿನಿಧಿಸುತ್ತಿರುವ ಭಾರತ ಯಾವುದು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist