ಮಹಾರಾಷ್ಟ್ರದ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರಿಗೆ ಕರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇದರೊಂದಿಗೆ ಸೋಂಕು ತಗುಲಿದ ಸಚಿವರ ಪಟ್ಟಿಗೆ ಸೇರಿದ ಮೂರನೇ ವ್ಯಕ್ತಿ ಇವರಾಗಿದ್ದಾರೆ.
ಈ ವಿಷಯವನ್ನು ದೃಢೀಕರಿಸಿದ ಮಹಾರಾಷ್ಟ್ರ ಆರೋಗ್ಯ ಮಂತ್ರಿ ರಾಜೇಶ್ ತೋಪೆ, ಸೋಂಕು ಇರುವುದನ್ನು ಪತ್ತೆ ಹಚ್ಚಲು ಮಾಡಿದ ಎರಡು ಟೆಸ್ಟ್‌ಗಳಲ್ಲಿ ಒಂದು ನೆಗೆಟಿವ್ ಬಂದಿತ್ತು ಆದರೆ, ಇನ್ನೊಂದು ಮಾದರಿಯನ್ನು ಪರೀಕ್ಷಿಸಿದಾಗ ಪಾಸಿಟಿವ್ ಇರುವುದು ಖಾತ್ರಿಯಾಗಿದೆ. ಅಲ್ಪ ಮಟ್ಟಿನ ಉಸಿರಾಟದ ತೊಂದರೆ ಬಿಟ್ಟರೆ ಬೇರಾವುದು ರೋಗಲಕ್ಷಣಗಳು ಅವರಲ್ಲಿ ಕಾಣಿಸಿಕೊಂಡಿಲ್ಲ, ಎಂದು ಹೇಳಿದ್ದಾರೆ.
Also Read: ಆಡಂಬರದ ಆಟ..! ರಾಜಕಾರಣಿಗಳ ಜೀವಕ್ಕೆ ಎದುರಾಗಿದೆ ಸಂಕಟ!
ಕ್ಯಾಬಿನೆಟ್ ಮೀಟಿಂಗ್‌ಗಳಲ್ಲಿ ಸರಿಯಾದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬಂದ ಕಾರಣಕ್ಕಾಗಿ, ಬೇರೆ ಯಾರಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಬೇರೆ ಯಾರನ್ನೂ ಐಸೋಲೇಷನ್ ಅಥವಾ ಕ್ವಾರೆಂಟೈನ್‌ನಲ್ಲಿ ಇರಿಸುವ ಅಗತ್ಯವಿಲ್ಲ ಎಂದು ತೋಪೆ ಹೇಳಿದ್ದಾರೆ.

“ICMR ನೀಡಿದ ಸೂಚನೆಗಳನ್ನು ನಾವು ಪಾಲಿಸುತ್ತಾ ಬಂದಿದ್ದೇವೆ. ಯಾರಿಗಾದರು ರೋಗದ ಲಕ್ಷಣಗಳಿದ್ದರೆ ಅವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಹಾಗೂ ಕ್ವಾರೆಂಟೈನ್‌ನಲ್ಲಿ ಇರಿಸುತ್ತಿದ್ದೇವೆ,” ಎಂದು ರಾಜೇಶ್ ಹೇಳಿದ್ದಾರೆ.
ಇನ್ನು ಸೋಂಕಿತ ಸಚಿವರ ಆಪ್ತ ಸಹಾಯಕ, ಡ್ರೈವರ್, ಬಾಣಸಿಗ ಸೇರಿದಂತೆ ಇತರ ಐವರಿಗೆ ಕೂಡಾ ಸೋಂಕು ಇರುವುದು ದೃಢವಾಗಿದೆ.






