• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, November 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ ಇಂದಿನಿಂದ ಸಂಪೂರ್ಣ ʼಸೀಲ್‌ಡೌನ್ʼ!

by
April 10, 2020
in ಕರ್ನಾಟಕ
0
ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ ಇಂದಿನಿಂದ ಸಂಪೂರ್ಣ ʼಸೀಲ್‌ಡೌನ್ʼ!
Share on WhatsAppShare on FacebookShare on Telegram

ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ತನ್ನ ವ್ಯಾಪ್ತಿಯ ಎರಡು ವಾರ್ಡ್‌ಗಳನ್ನ ಸಂಪೂರ್ಣ ಸೀಲ್‌ಡೌನ್‌ಗೆ ನಿರ್ಧರಿಸಿದೆ. ಇಂದಿನಿಂದ 14 ದಿನಗಳ ಕಾಲ ಬಿಬಿಎಂಪಿ ಯ ಪಾದರಾಯನಪುರ ಹಾಗೂ ಬಾಪೂಜಿ ನಗರ ವಾರ್ಡ್‌ಗಳಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್‌ ಜಾರಿಯಲ್ಲಿರುತ್ತದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಈ ಎರಡು ವಾರ್ಡ್‌ಗಳಲ್ಲಿ 5 ಸೋಂಕು ಪ್ರಕರಣ ಪತ್ತೆಯಾಗಿದ್ದು, ಸೋಂಕು ಹರಡದಂತೆ ತಡೆಗಟ್ಟುವ ಅವಶ್ಯಕತೆ ಇದೆ. ಜನರ ಓಡಾಟ ಅತಿಯಾಗಿದ್ದು, ಸೋಂಕು ತಡೆಗಟ್ಟಲು ಸವಾಲು ಎದುರಾಗಿದೆ. ಆದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ” ಎಂದಿದ್ದಾರೆ. ಇನ್ನು ಸೀಲ್‌ಡೌನ್‌ ಆದೇಶದಿಂದಾಗಿ ಈ ಎರಡೂ ವಾರ್ಡ್‌ಗಳಲ್ಲಿ ಯಾರೊಬ್ಬರೂ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ವಸ್ತುಗಳ ಪೂರೈಕೆಯನ್ನು ಮನೆ ಮನೆಗೆ ತಲುಪಿಸಲಾಗುವುದು ಅಂತಾ ಆಯುಕ್ತರು ತಿಳಿಸಿದ್ದಾರೆ.

BBMP will completely seal Bapuji Nagar Ward 134 & Padarayanapura Ward 135 to prevent the spread of #COVID19 after 5 fresh positive cases were reported. Starting now, #BBMP has planned to supply all essentials to residents & banned vehicular movement.@BlrCityPolice @CPBlr pic.twitter.com/obMOWGhsF1

— B.H.Anil Kumar,IAS (@BBMPCOMM) April 10, 2020


ADVERTISEMENT

ಸೀಲ್‌ಡೌನ್‌ ಪರಿಣಾಮ ಆಂಬುಲೆನ್ಸ್‌ಹಾಗೂ ವೈದ್ಯಕೀಯ ಸಿಬ್ಬಂದಿಗಳ ವಾಹನ ಓಡಾಟಕ್ಕೆ ಅವಕಾಶವಿರುತ್ತದೆ. ಹಿರಿಯ ಅಧಿಕಾರಿಗಳ ಅನುಮತಿ ಹೊರತಾಗಿ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿರುವುದಿಲ್ಲ.

ಈ ಎರಡು ವಾರ್ಡ್‌ಗಳನ್ನ ಸಂಪರ್ಕಿಸುವ ಎಲ್ಲಾ ಪ್ರಮುಖ ಹಾಗೂ ಒಳ ರಸ್ತೆಗಳನ್ನು ಬಂದ್‌ಮಾಡಲಾಗುತ್ತವೆ. ಅಲ್ಲದೇ ಇಲ್ಲಿ ತೆರಳುವ ಹಾಗೂ ಹೊರಬರುವ ಪ್ರತಿಯೊಬ್ಬ ಸಿಬ್ಬಂದಿಗಳನ್ನ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಅಲ್ಲದೇ ಈ ಎರಡೂ ವಾರ್ಡ್ ಗಳಲ್ಲಿ ನೀಡಲಾದ ಎಲ್ಲಾ ಅನುಮತಿ ಪತ್ರ (ಪಾಸ್‌)ಗಳನ್ನು ಅನೂರ್ಜಿತಗೊಳಿಸಲಾಗುತ್ತದೆ.

ಈ ಎರಡೂ ವಾರ್ಡ್‌ಗಳಲ್ಲಿ ವಿಶೇಷ ಪೊಲೀಸ್‌ ಕಣ್ಗಾವಲಿರಲಿದ್ದು, ಕಾನೂನು ಉಲ್ಲಂಘಿಸಿದ್ದಲ್ಲಿ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ.

ಈಗಾಗಲೇ ಸೀಲ್‌ಡೌನ್‌ ಆದೇಶ ಜಾರಿಯಾಗಿದ್ದು, ಇದರಂತೆ ಈ ಎರಡೂ ವಾರ್ಡ್‌ಗಳಲ್ಲಿ ಅಂಗಡಿ, ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಲಿದೆ. ಯಾವುದೇ ದಿನಸಿ, ಅಗತ್ಯ ವಸ್ತುಗಳ ಅಂಗಡಿಗಳಿಗೂ ಅವಕಾಶವಿರುವುದಿಲ್ಲ. ಅಲ್ಲದೇ ಮನೆ ಮನೆಗೆ ಅಗತ್ಯ ದಿನಸಿ ವಸ್ತುಗಳ ಪೂರೈಕೆಗೆ ತಳ್ಳುಗಾಡಿ ವ್ಯಾಪಾರಸ್ಥರ ಜೊತೆ ಅಥವಾ ಇನ್ನಿತರರ ಜೊತೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡು ದಿನಸಿ ವಸ್ತು ಒದಗಿಸುವ ಬಗ್ಗೆ ತಕ್ಷಣವೇ ನಿರ್ಧರಿಸುವುದಾಗಿ ಬಿಬಿಎಂಪಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜಸ್ಥಾನ ರಾಜ್ಯದಲ್ಲಿ ಸೀಲ್‌ಡೌನ್‌ ಮಾದರಿ ಸಾಕಷ್ಟು ಪ್ರಯೋಜನವಾದ ನಿಟ್ಟಿನಲ್ಲಿ ಇನ್ನಿತರ ರಾಜ್ಯಗಳೂ ಅದನ್ನ ಜಾರಿಮಾಡುವ ನಿಟ್ಟಿನಲ್ಲಿ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಬೆಂಗಳೂರು ಮಹಾನಗರದಲ್ಲಿಯೇ ಈ ಪ್ರಾಯೋಗಿಕ ಕ್ರಮ ಜಾರಿಗೆ ಬರಲಿದ್ದು, ಮುಂದೆ ಹೆಚ್ಚಿನ ಕರೋನಾ ಸೋಂಕು ಪೀಡಿತ ಹಾಟ್ ಸ್ಪಾಟ್‌ಗಳಿಗೆ ಈ ನಿಯಮ ಜಾರಿಗೊಳಿಸುವ ಸಾಧ್ಯತೆಯಿದೆ.

ಮಂಗಳೂರಿನಲ್ಲಿಯೂ ಸೀಲ್‌ಡೌನ್‌ ಜಾರಿಯಾಗುತ್ತೆ ಅನ್ನೋ ಸುದ್ದಿ ಹರಿದಾಡಿದ್ದು, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಕ್ರಮತೆಗೆದುಕೊಂಡಿಲ್ಲ. ಸದ್ಯ ಇರುವ ಲಾಕ್‌ಡೌನ್‌ ನನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದಿದೆ.

ಈ ಮಧ್ಯೆ ದೆಹಲಿಯ ನಿಜಾಮುದ್ದೀನ್‌ ಮರ್ಕಝ್‌ಗೆ ತೆರಳಿದ್ದ ಹಲವು ಮಂದಿಯನ್ನು ಹಜ್‌ ಭವನದಲ್ಲಿ ಇಡಲಾಗಿದ್ದು, ಅದರಲ್ಲಿ ಮೂವರಿಗೆ ಕರೋನಾ ಸೋಂಕು ಲಕ್ಷಣ ಕಾಣಿಸಿಕೊಂಡಿದೆ.

Tags: bapoojinagarBBMPCovid 19Mangalurupadarayanapurasealdownಕೋವಿಡ್-19ಪಾದರಾಯನಪುರಬಾಪೂಜಿನಗರಬಿಬಿಎಂಪಿಮಂಗಳೂರುಸೀಲ್‌ಡೌನ್‌
Previous Post

ರಾಜ್ಯದಲ್ಲಿ 10 ಹೊಸ ಕೋವಿಡ್‌-19 ಪ್ರಕರಣಗಳು ಪತ್ತೆ 

Next Post

ಕರೋನಾ ಹೋರಾಟ: ತುರ್ತು ಸೇವಾ ಸಿಬ್ಬಂದಿಗಳ ಸಂಬಳವೂ ಕಡಿತ!?

Related Posts

ಬೆಂಗಳೂರಿನಲ್ಲಿ ನಾಲ್ಕು ದಿನ ವಿದ್ಯುತ್ ವ್ಯತ್ಯಯ; ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!
ಕರ್ನಾಟಕ

ಬೆಂಗಳೂರಿನಲ್ಲಿ ನಾಲ್ಕು ದಿನ ವಿದ್ಯುತ್ ವ್ಯತ್ಯಯ; ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

by Shivakumar
November 6, 2026
0

ಬೆಂಗಳೂರಿನಲ್ಲಿ ಒಂದು ದಿನ ವಿದ್ಯುತ್ ವ್ಯತ್ಯಯವಾದರೂ ಜನರು ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸತತ ನಾಲ್ಕು ದಿನಗಳ ಕಾಲ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ...

Read moreDetails
Awareness for Eco-friendly Diwali Celebrations in State Schools and Colleges: Education Department Order

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಾಗೃತಿ : ಶಿಕ್ಷಣ ಇಲಾಖೆ ಆದೇಶ

November 6, 2026
Scouts and Guides Foundation Day: Flag sticker released by Higher Education Minister Basavaraj Rayareddy

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಂದ ಧ್ವಜ ಚೀಟಿ ಬಿಡುಗಡೆ

November 6, 2026
Recruitment for Kalyana Karnataka to be conducted via KEA instead of KPSC: Minister Priyank Kharge issues firm directive

ಕೆಪಿಎಸ್‌ಸಿ ಬದಲು ಕೆಇಎ ಮೂಲಕ ಕಲ್ಯಾಣ ಕರ್ನಾಟಕದ ನೇಮಕಾತಿ : ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ

November 6, 2026
Blending of up to 31.2% ethanol in petrol: Karnataka government seeks clarification from the Centre

ಪೆಟ್ರೋಲ್‌ನಲ್ಲಿ ಶೇ. 31.2 ರವರೆಗೆ ಎಥೆನಾಲ್ ಮಿಶ್ರಣ : ಕೇಂದ್ರದಿಂದ ವಿವರಣೆ ಕೇಳಿದ ಕರ್ನಾಟಕ ಸರ್ಕಾರ

November 6, 2026
Next Post
ಕರೋನಾ ಹೋರಾಟ: ತುರ್ತು ಸೇವಾ ಸಿಬ್ಬಂದಿಗಳ ಸಂಬಳವೂ ಕಡಿತ!?

ಕರೋನಾ ಹೋರಾಟ: ತುರ್ತು ಸೇವಾ ಸಿಬ್ಬಂದಿಗಳ ಸಂಬಳವೂ ಕಡಿತ!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada