ಇಬ್ಬರ ವಿರುದ್ಧವು The State emblem of India (Prohibition of Improper Use) Act ಕಲಂ 7 ಮತ್ತು ಇತರ ಅಪರಾಧ ಕೃತ್ಯಗಳ ಕಾನೂನಿನಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರೂ ಹೊರ ರಾಜ್ಯದವರಾಗಿದ್ದು, ನಮ್ಮ ರಾಜ್ಯದಲ್ಲೂ ಹ್ಯೂಮನ್ ರೈಟ್ಸ್ ಕಮೀಷನ್ ಎಂಬಿತ್ಯಾದಿ ಸರಕಾರದ ಏಜೆನ್ಸಿಗಳನ್ನು ಹೋಲುವ ಬೋರ್ಡುಗಳನ್ನು ಹಾಕಿಕೊಂಡು ಅಮಾಯಕರನ್ನು ವಂಚಿಸುವ ತಂಡಗಳು ಸಾಮಾನ್ಯವಾಗಿದ್ದು, ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ.
ಹೆಚ್ಚು ಓದಿದ ಸ್ಟೋರಿಗಳು
ಕೇರಳ ಮೂಲದ ಸದ್ಯ ಮಣಿಪಾಲದಲ್ಲಿ ವಾಸವಾಗಿರುವ ಆಂಟನಿ (ಮೂಲ ಹೆಸರು) ಯಾನೆ ಸ್ಯಾಮ ಪೀಟರ್ ಯಾನೆ ರಾಹುಲ್ ಪೀಟರ್ ಎಂಬಾತನೊಂದಿಗೆ ಎಂಟು ಮಂದಿಯನ್ನು ಬಂಧಿಸಿರುವ ಮಂಗಳೂರು ಪೊಲೀಸರು ಈತನನ್ನು ಸಿಬಿಐ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಪೀಟರ್ ವಿರುದ್ಧ ಸಿಬಿಐ ಇಂಟರಪೊಲ್ ಮೂಲಕ ರೆಡ್ ಕಾರ್ನಾರ್ ನೊಟೀಸ್ ಜಾರಿ ಮಾಡಿತ್ತು. ಮಹಾರಾಷ್ಟ್ರ,ಉತ್ತರ ಪ್ರದೇಶ, ಕರ್ನಾಟಕ, ಛತ್ತಿಸ್ ಗಡ, ಬಿಹಾರ, ಜಾರ್ಖಾಂಡ್, ಮಧ್ಯ ಪ್ರದೇಶ , ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 14 ವಂಚನೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಕೆಲವನ್ನು ಸಿಬಿಐ ತನಿಖೆ ನಡೆಯುತ್ತಿದೆ.
ಮೋಸ್ಟ್ ವಾಂಟೆಡ್ ಸ್ಯಾಮ ಪೀಟರ್ ಬ್ಯಾಂಕ್ ಹಾಗು ಮತ್ತಿತರ ಹಣಕಾಸು ಸಂಸ್ಥೆಗಳಿಂದ ಹಣ ಪಡೆದು ಮೋಸ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವವನು. ಕೇಂದ್ರ ಸರಕಾರದ ತನಿಖಾ ದಳದ ಅಧಿಕಾರಿಯಂತೆ ಕೆಲವು ಕಡೆ ಪೋಸ್ ಕೊಡುವ ಈತ ಇನ್ನಿತರ ಕಡೆ ತನಗೆ ಪೊಲೀಸ್ ಮತ್ತು ಇತರ ಗಣ್ಯರ ಸ್ನೇಹ ಇದೆ, ತಾನೊಬ್ಬ ಶ್ರೀಮಂತ ಎಂದು ನಂಬಿಸಿ ಹೊಸ ವ್ಯಾಪಾರ ಆರಂಭಿಸುವ ಉದ್ದೇಶದಿಂದ ಸಾಲ ಪಡೆದು ವಂಚಿಸಿ ಅಲ್ಲಿಂದ ಪರಾರಿ ಆಗುತ್ತಿದ್ದ. ಕೊಡಗು ಕುಶಾಲನಗರದಲ್ಲಿ ತಾನು ಮಣಿಪಾಲದ ರಾಹುಲ್ ಪೀಟರ್ ಎಂದು ಹೇಳಿಕೊಂಡು ಸ್ಥಳೀಯರಿಗೆ ಮತ್ತು ಎರಡು ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿ ಪರಾರಿಯಾಗಿದ್ದ.

ಸ್ಯಾಮ್ ಪೀಟರ್ ತನ್ನ ಬಗ್ಗೆ ಯಾರಿಗೂ ಗೊತ್ತಾಗದಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ತನ್ನನ್ನು ಗುರುತಿಸಿಕೊಂಡು ಒಂದು ಕಡೆ ಅಪರಾಧ ನಡೆಸಿ ಮತ್ತೊಂದು ಕಡೆ ಹೋಗಿ ವಾಸ ಮಾಡಿದ ಸಮಯ ತನ್ನ ಹೆಸರನ್ನು ಬದಲಾಯಿಸಿ ಕೊಳ್ಳುತ್ತಿದ್ದ. ಈತನ ಮೂಲ ಹೆಸರು ಆಂಟನಿ ಎಂದಿದ್ದು, ಕೊಡಗಿನಲ್ಲಿದ್ದಾಗ ರಾಹುಲ್ ಪೀಟರ್ ಎಂದೂ, ಮಹಾರಾಷ್ಟ್ರದಲ್ಲಿ ಸ್ಯಾಮ್ ಪೀಟರ್ ಎಂದೂ, ಉತ್ತರದ ಪ್ರದೇಶದಲ್ಲಿ ರಾಜೇಶ್ ರಾಬಿನ್ ಸನ್ ಎಂದೂ, ಇದೇ ರೀತಿ ಬೇರೆ ಬೇರೆ ಕಡೆ ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ ಸನ್, ರಿಚರ್ಡ್ ರಾಬಿನ್ ಸನ್ ಎಂಬ ಹೆಸರುಗಳನ್ನು ಇಟ್ಟುಕೊಂಡು ವಂಚನೆ ಮಾಡುತ್ತಿದ್ದ.
ಈತ ಎರಡು ರಾಜ್ಯಗಳಿಂದ ಬೇರೆ ಬೇರೆ ಹೆಸರಿನಲ್ಲಿ ಪಾಸ್ ಪೋರ್ಟ್ ಹೊಂದಿರುತ್ತಾನೆ. ಕೇರಳ ರಾಜ್ಯದಿಂದ ರಾಜೇಶ್ ರಾಬಿನ್ ಸನ್ @ ರಾಯ ಜೇಕೆಬ್ ಎಂಬ ಹೆಸರಿನಲ್ಲಿ ಮತ್ತು ಒರಿಸ್ಸಾ ರಾಜ್ಯದಿಂದ ಸ್ಯಾಮ್ ಪೀಟರ್ ಎಂಬ ಹೆಸರಿನಲ್ಲಿ ಪಡೆದ ಪಾಸ್ ಪೋರ್ಟ್ ಪಡೆದಿದ್ದ.

ಬೆಂಗಳೂರಿನಲ್ಲಿ NCIB Director ಎಂದು ಜನರಲ್ಲಿ ನಂಬಿಸಿ ಈತನಿಗೆ ಬೆಂಗಳೂರಿನ ಮುಜಾಫರ್ ಎಂಬ ವಕೀಲ ನನ್ನು ಪರಿಚಯ ಮಾಡಿಕೊಂಡು Parallel Policing ತರಹ ಕೆಲಸ ಮಾಡಿಕೊಂಡು ಜನರಿಂದ ದೂರು ಪಡೆದು ತನಿಖೆ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದು ನಂಬಿಸಿ ಮೋಸ ಮಾಡಿರುವುದು ಈತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಯಾರದೋ ಹೆಸರಿನಲ್ಲಿ ಮೊಬೈಲ್ ಪಡೆದು ಏಸಿಪಿ ಪೊಲೀಸ್, ಡಿಸಿಪಿ ಪೊಲೀಸ್ ಮುಂತಾಗಿ ಮೊಬೈಲಿನಲ್ಲಿ ಹೆಸರು ಸೇವ್ ಮಾಡಿ ಅಮಾಯಕರನ್ನು ವಂಚಿಸಲು ಬಳಸುತ್ತಿದ್ದ. ಇದೀಗ ಸುಮಾರು ವರ್ಷಗಳ ವಂಚನೆಯ ಕಾಯಕದ ನಂತರ ಸಿಬಿಐ ವಶವಾಗಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ WORLD HEALTH ORGANIZATION DIRECTOR ಎಂಬ ನಾಮ ಫಲಕ ಅಳವಡಿಸಿ, Government of India ಎಂದು ಸ್ಟಿಕ್ಕರ್ ಅಂಟಿಸಿಕೊಂಡ ಪಂಜಾಬ್ ರಾಜ್ಯದ ಪಿಬಿ 65 ಎಎಸ್ 6786 ನೊಂದಣಿ ಸಂಖ್ಯೆಯ ಕಾರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

ಪಿಯುಸಿ ಶಿಕ್ಷಣ ಪಡೆದ ಮುಂಬಯಿಯ ಡಾ ಬಸೀತ್ ಷಾ ಮತ್ತತನ ಚಾಲಕ ಪಂಜಾಬಿನ ಮೊಹಾಲಿಯ ಬಲ್ಜೀಂದರ್ ಸಿಂಗ್ (48) ವೈದ್ಯರೆಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದರು. ಡಾ. ಬಸೀತ್ ಷಾ ನ ವಶದಲ್ಲಿ WORLD HEALTH ORGANIZATION, Dr. Basit Sha, MBBS/MS/MCH – Gold Medalist, Director Reg. No. MCI/2013/3184ಎಂಬ ಐ ಡಿ ಕಾರ್ಡ್ ಇತ್ತು. ವಾಸ್ತವದಲ್ಲಿ ಆತ ಬಸೀತ್ ಆಗಿರದೆ ಆತ ಕಾಶ್ಮೀರದ ಸೌಖತ್ ಅಹಮ್ಮದ್ ಲೋನ್ ಆಗಿದ್ದ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 2017ರಲ್ಲಿ ಆತನ ವಿರುದ್ಧ ವಂಚನಾ ಪ್ರಕರಣ ದಾಖಲಾದ ನಂತರ ಅಲ್ಲಿಂದ ಪರಾರಿಯಾಗಿದ್ದ.
ಡಾ ಬಸೀತ್ ಷಾ ಎಂಬ ಹೆಸರಿನಲ್ಲಿ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಹೆಸರು ನೊಂದಾಯಿಸಿ ಮದುವೆ ಆಗುವುದಾಗಿ ನಂಬಿಸಿ ಹಲವಾರು ಮಹಿಳೆಯರನ್ನು ಗೋವಾ, ಬೆಳಗಾಂ, ಮುಂಬಯಿ,ಜಾರ್ಖಂಡ್, ಜೈಪುರ, ಕೊಲ್ಕಾತ್ತಾ, ಛತ್ತೀಸ್ ಗಡ್, ಅಮೃತ್ ಸರ್, ಹೈದರಬಾದ್ ಮುಂತಾದ ಕಡೆಗಳಲ್ಲಿ ವಂಚಿಸಿದ್ದ.
ಮ್ಯಾಟ್ರಿಮೋನಿಯಲ್ ಮೂಲಕ ಮಂಗಳೂರಿನಲ್ಲಿ ಹೆಸರು ನೊಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದ ಸಮಯ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ಇವರಿಬ್ಬರೂ ಕೂಡ ದೇಶದಾದ್ಯಂತ ಸುತ್ತಾಡಿ ತಮ್ಮ ವಂಚನಾ ಪರಾಕ್ರಮವನ್ನು ಪ್ರದರ್ಶನ ಮಾಡಿರುವ ವಂಚಕ ಶಿಖಾಮಣಿಗಳಾಗಿದ್ದು, ಇಂತಹ ಸರಕಾರಿ ಸಂಸ್ಥೆಗಳ ನಾಮಫಲಕ ಪ್ರದರ್ಶನ ಮಾಡಿದಾಗ ಯಾವುದೇ ಕಾನು ಪಾಲಕ ಏಜೆನ್ಸಿಗಳ ಕಣ್ಣಿಗೆ ಬೀಳದಿರುವುದು ಆಶ್ಚರ್ಯಕರ.