ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಭಾರತದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ವಾಲ್‌ಸ್ಟ್ರೀಟ್ ಜರ್ನಲ್ ವರದಿ ಉಲ್ಲೇಕಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೇಸ್‌ಬುಕ್ ವಿರುದ್ಧ ಹರಿಹಾಯ್ದಿದ್ದರು. ಆದರೆ ಈಗ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ಅದೇ ಫೇಸ್‌ಬುಕ್ ಪರ ವಾದ ಮಾಡಲು ದೆಹಲಿ ಹೈಕೋರ್ಟ್‌ಗೆ ಹಾಜರಾಗಿದ್ದಾರೆ.
Also Read: ಫೇಸ್ಬುಕ್-ಬಿಜೆಪಿ ಒಳ ಒಪ್ಪಂದ: ತನಿಖೆಯ ಬೇಡಿಕೆಯನ್ನು ಮತ್ತೆ ಮುಂದಿಟ್ಟ ಕಾಂಗ್ರೆಸ್
ಮಾನಹಾನಿ ವರದಿ ಪ್ರಕಟಿಸಿದ ವಿರುದ್ಧ ಟೈಮ್ಸ್ ನೌ ಹಾಗೂ ರಿಪಬ್ಲಿಕ್ ಟಿವಿ ವಿರುದ್ಧ ದಾವೆ ಹೂಡಿದ್ದ ಬಾಲಿವುಡ್ ನಿರ್ಮಾಣ ಸಂಸ್ಥೆಗಳು, ಫೇಸ್‌ಬುಕ್‌ಅನ್ನು ಕೂಡಾ ಪ್ರತಿವಾದಿಯನ್ನಾಗಿಸಿತ್ತು. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಕಪಿಲ್ ಸಿಬಲ್‌ರನ್ನು ತಮ್ಮ ವಕೀಲರನ್ನಾಗಿ ನೇಮಿಸಿತ್ತು. ಈ ಪ್ರಕರಣದಲ್ಲಿ ಫೇಸ್‌ಬುಕ್ ಪಾತ್ರವಿಲ್ಲ, ಫೇಸ್‌ಬುಕನ್ನು ಪ್ರತಿವಾದಿಯನ್ನಾಗಿ ಮಾಡಬಾರದು ಎಂದು ಕಪಿಲ್ ಸಿಬಲ್ ವಾದ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
@KapilSibal appearing for @Facebook : We're abide by this court's orders but we really have no role to play as per Shreya Singhal judgment #ArnabGoswami @navikakumar @republic @TimesNow
— Live Law (@LiveLawIndia) November 9, 2020
ಭಾರತದಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿರುವ ಹೊರತಾಗಿಯೂ ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್ ಫೇಸ್‌ಬುಕ್‌ಗಾಗಿ ವಾದ ಮಾಡುವುದು ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿಈ ಕುರಿತು ಚರ್ಚೆಯಾಗುತ್ತಿದ್ದು, ಕಪಿಲ್ ಸಿಬಲ್ ಬಿಜೆಪಿ ಕೈವಾಡವಿರುವ ಸಂಸ್ಥೆ ಪರ ಯಾಕೆ ವಕಾಲತ್ತು ವಹಿಸುತ್ತಾರೆಂದು ಹಲವರು ಪ್ರಶ್ನಿಸಿದರೆ, ಸಿಬಲ್ ತಮ್ಮ ವೃತ್ತಿಧರ್ಮ ಪಾಲಿಸುತ್ತಿದ್ದಾರೆ ಎಂದು ಇನ್ನು ಕೆಲವರು ಸಿಬಲ್ ಬೆಂಬಲಕ್ಕೆ ನಿಂತಿದ್ದಾರೆ.
Senior Advocates Kapil Sibal, Sajan Poovayya, and Sandeep Sethi are appearing in the matter#ArnabGoswami @navikakumar @republic @TimesNow
— Live Law (@LiveLawIndia) November 9, 2020
Also Read: ಮೋದಿ ಕಟ್ಟಾ ಅಭಿಮಾನಿ ಅಂಖೀ ದಾಸ್ ಫೇಸ್ ಬುಕ್ ನಿಂದ ಔಟ್!
ಫೇಸ್‌ಬುಕ್ ಹಾಗೂ ಬಿಜೆಪಿ ನಡುವಿನ ಸಂಬಂಧವನ್ನು ಬಹಿರಂಗಪಡಿಸುವ ವರದಿಯೊಂದನ್ನು ಕಳೆದ ತಿಂಗಳು ಅಮೇರಿಕಾ ಮೂಲದ ಸುದ್ದಿ ಸಂಸ್ಥೆ ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದ್ದು, ಭಾರತದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಫೇಸ್‌ಬುಕ್ ಭಾರತದ ಮುಖ್ಯಸ್ಥೆ ಅಂಖೀದಾಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅದಾದ ಬಳಿಕ ಕಪಿಲ್ ಸಿಬಲ್ ಫೇಸ್‌ಬುಕ್ ಪರ ವಾದಿಸಲು ಒಪ್ಪಿಕೊಂಡಿದ್ದಾರೆ.