Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜೆಡಿಎಸ್ ಶಾಸಕರು ಬಿಜೆಪಿ ಸರ್ಕಾರದ ಬಗ್ಗೆ ಒಲವು ತೋರುತ್ತಿರುವುದೇಕೆ?

ಜೆಡಿಎಸ್ ಶಾಸಕರು ಬಿಜೆಪಿ ಸರ್ಕಾರದ ಬಗ್ಗೆ ಒಲವು ತೋರುತ್ತಿರುವುದೇಕೆ?
ಜೆಡಿಎಸ್ ಶಾಸಕರು ಬಿಜೆಪಿ ಸರ್ಕಾರದ ಬಗ್ಗೆ ಒಲವು ತೋರುತ್ತಿರುವುದೇಕೆ?
Pratidhvani Dhvani

Pratidhvani Dhvani

July 27, 2019
Share on FacebookShare on Twitter

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಈ ಪಕ್ಷಗಳ ಮೈತ್ರಿಗೂ ತೆರೆ ಬೀಳುವ ಸಾಧ್ಯತೆಗಳು ಕಾಣಿಸಿಕೊಳ್ಳಲಾರಂಭಿಸಿದೆ. ಜೆಡಿಎಸ್ ನಾಯಕರ ಮಟ್ಟದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಸುವ ಮನಸ್ಸು ಇರಬಹುದಾದರೂ ಶಾಸಕರು ಮಾತ್ರ ಅಂತಹ ಮನಸ್ಥಿತಿಯಲ್ಲಿರುವಂತೆ ಕಂಡುಬರುತ್ತಿಲ್ಲ. ಮಿತ್ರನಾಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಗಿಂತ ಸರ್ಕಾರ ಉರುಳಿಸಿದ ರಾಜಕೀಯ ಶತ್ರು ಬಿಜೆಪಿಯೇ ಪರವಾಗಿಲ್ಲ ಎಂಬ ಅಭಿಪ್ರಾಯಕ್ಕೆ ಜೆಡಿಎಸ್ ನ ಹಲವು ಶಾಸಕರು ಬಂದಂತಿದೆ. ಸರ್ಕಾರ ರಚಿಸಿರುವ ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕೋ, ಬೋಡವೋ? ಜೆಡಿಎಸ್ ಶಾಸಕರು ಮಾತ್ರ ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ನಾಯಕರ ತೀರ್ಮಾನ ವಿರೋಧಿಸುವ ಶಕ್ತಿ ಇಲ್ಲದೆ ನಿರ್ಧಾರವನ್ನು ಅವರಿಗೇ ಬಿಟ್ಟಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ವಿವಾದಾತ್ಮಕ ಹೇಳಿಕೆ; ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ದ FIR ದಾಖಲು

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸದ್ಯಕ್ಕಂತೂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಅಪಾಯವಿಲ್ಲದೆ ಅಧಿಕಾರದಲ್ಲಿ ಮುಂದುವರಿಯುತ್ತದೆ. ಸರ್ಕಾರ ಬದಲಾಗಬೇಕಾದರೆ ಚುನಾವಣೆ ಬರಬೇಕೇ ಹೊರತು ವಾಮ ಮಾರ್ಗಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿಕೊಳ್ಳಬಹುದು. ಆ ಮೂಲಕ ಮುಂದಿನ ಚುನಾವಣೆ ವೇಳೆ ಕ್ಷೇತ್ರವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಬಹುದು. ಕ್ಷೇತ್ರದಲ್ಲಿ ಕೆಲಸ-ಕಾರ್ಯಗಳು ಸಮರ್ಪಕವಾಗಿ ನಡೆದರೆ ಮುಂದೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬರಬಹುದು ಎಂಬ ಯೋಚನೆ ಜೆಡಿಎಸ್ ಶಾಸಕರದ್ದು.

ಈ ಹಿಂದೆ (2006-07) ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ನಡೆದುಕೊಂಡಿದ್ದ ರೀತಿಯೂ ಶಾಸಕರಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಬಗ್ಗೆ ಒಲವು ಹೆಚ್ಚಾಗಲು ಕಾರಣವಿರಬಹುದು. 2004ರಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ರಚಿಸಿದ್ದವು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಲ್ಲಿ ಒಡಕುಂಟಾಗಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ಗುಂಪು ಕಾಂಗ್ರೆಸ್ ಕಡೆ ಒಲವು ತೋರಲಾರಂಭಿಸಿತ್ತು. ಹೀಗಾಗಿ ಎಚ್. ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆ ಎಚ್. ಡಿ. ದೇವೇವೇಗೌಡರ ಇಚ್ಛೆಗೆ ವಿರುದ್ಧವಾಗಿ ಬಿಜೆಪಿ ಜತೆ ಕೈಜೋಡಿಸಿದ್ದರು.

ಆಗಲೇ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದ ಜೆಡಿಎಸ್ ಶಾಸಕರು ದೇವೇಗೌಡರ ಮಾತು ಮೀರಿ ಕುಮಾರಸ್ವಾಮಿ ಜತೆ ನಿಂತಿದ್ದರು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಈ ಅವಧಿಯಲ್ಲಿ ಬಿಜೆಪಿ ನಡೆದುಕೊಂಡ ರೀತಿ, ಸರ್ಕಾರಕ್ಕೆ ನೀಡಿದ ಸಹಕಾರ ಈಗಲೂ ಜೆಡಿಎಸ್ ಶಾಸಕರಿಗೆ ನೆನಪಿದೆ. ಒಪ್ಪಂದದಂತೆ ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಸರ್ಕಾರ ಪತನವಾಯಿತೇ ಹೊರತು ಬಿಜೆಪಿ ಕಡೆಯಿಂದ ಮೈತ್ರಿಗೆ ಭಂಗವಾಗುವ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಇದರ ಪರಿಣಾಮ 2008ರ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋತು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಸೋಲಿಗೆ ಜೆಡಿಎಸ್ ನ ವಚನ ಭ್ರಷ್ಠತೆಯೇ ಕಾರಣವಾಗಿತ್ತು.

2018ರ ವಿಧಾನಸಭೆ ಚುನಾವಣೆಯಲ್ಲೂ ಅತಂತ್ರ ಪರಿಸ್ಥಿತಿ ಎದುರಾದಾಗ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಅನೇಕ ಶಾಸಕರಿಗೆ ಬಿಜೆಪಿ ಜತೆ ಹೋಗುವುದು ಸೂಕ್ತ ಎಂಬ ಭಾವನೆ ಇತ್ತು. ಆದರೆ, ದೇವೇಗೌಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತು ಕಾಂಗ್ರೆಸ್ ನವರು ತಮಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರಿಂದಾಗಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜತೆಗಿನ ಮೈತ್ರಿಯನ್ನೇ ಆಯ್ಕೆ ಮಾಡಿಕೊಂಡರು. ಈ ಮೈತ್ರಿಯಿಂದ ಪಕ್ಷ ಸಂಘಟಿಸಬಹುದು ಎಂದು ಮಹಾಘಟಬಂಧನ್ ಮಾಡಹೊರಟರು. ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿದರು. ಆದರೆ, ಅದರಿಂದ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಯಿತೇ ವಿನಃ ಲಾಭ ಸಿಗಲೇ ಇಲ್ಲ. ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲೂ ಮೈತ್ರಿಯಿಂದ ಬೇಸತ್ತ ಪಕ್ಷದ ಕಾರ್ಯಕರ್ತರು ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತರು. ಹೀಗಾಗಿ ಫಲಿತಾಂಶ ಬಂದಾಗಲೇ ಕಾಂಗ್ರೆಸ್ ಜತೆಗಿನ ಮೈತ್ರಿ ತಮಗೆ ಇನ್ನಷ್ಟು ಅಪಾಯ ತಂದೊಡ್ಡಬಹುದು ಎಂಬ ಆತಂಕ ಶಾಸಕರನ್ನು ಕಾಡಲಾರಂಭಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮೈತ್ರಿಯ ಗೊಂದಲ ಸರ್ಕಾರವನ್ನೇ ಉರುಳಿಸಿತ್ತು.

ಹೀಗಾಗಿ ಜೆಡಿಎಸ್ ಶಾಸಕರಿಗೆ ಬಿಜೆಪಿ ಬಗ್ಗೆ ಇದ್ದ ಒಲವು ಕೊಂಚ ಹೆಚ್ಚಾಗಿದೆ. ಇದಕ್ಕೆ ಯಡಿಯೂರಪ್ಪ ಅವರು ಹಿಂದೆ ನಡೆದುಕೊಂಡ ರೀತಿಯೂ ಕಾರಣ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಹಳೆಯ ಜಿದ್ದು ಸಾಧಿಸದೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದರು ಅಷ್ಟೇ ಅಲ್ಲ, ವರ್ಗಾವಣೆ ಮತ್ತಿತರ ವಿಚಾರದಲ್ಲಿ ಅವರ ಮಾತಿಗೂ ಮನ್ನಣೆ ನೀಡುತ್ತಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು, ತಾವು ಸೇಡಿನ ರಾಜಕಾರಣ ಮಾಡುವುದಿಲ್ಲ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ನಾವು ಸಹಕರಿಸಿದರೆ, ನಮ್ಮ ಕ್ಷೇತ್ರದ ಕೆಲಸಗಳಿಗೆ ಸರ್ಕಾರ ಸಹಕರಿಸುತ್ತದೆ ಎಂಬ ಅಭಿಪ್ರಾಯ ಜೆಡಿಎಸ್ ನ ಬಹುತೇಕ ಶಾಸಕರಿಂದ ವ್ಯಕ್ತವಾಗಿದೆ. ಈ ಕಾರಣಕ್ಕಾಗಿಯೇ ಶುಕ್ರವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

ಕಾರ್ಯಕರ್ತರಿಗೂ ಬೇಡ ಕಾಂಗ್ರೆಸ್ ಜತೆಗಿನ ಮೈತ್ರಿ

ಇನ್ನು ಜೆಡಿಎಸ್ ಕಾರ್ಯಕರ್ತರಿಗೂ ಕಾಂಗ್ರೆಸ್ ಜತೆಗಿನ ಮೈತ್ರಿ ಬೇಡ. ಮೊದಲಿನಿಂದಲೂ ತಳಮಟ್ಟದಲ್ಲಿ ವಿರೋಧ, ಹೊಡೆದಾಟ ಮಾಡಿಕೊಂಡೇ ಬಂದಿರುವ ಎರಡೂ ಪಕ್ಷದ ಕಾರ್ಯಕರ್ತರಿಗೂ ಒಬ್ಬರನ್ನು ಕಂಡರೆ ಒಬ್ಬರಿಗಾಗುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ನಾಯಕರಂತೆ ತಾವೂ ಕೂಡ ಆಣೆ-ಪ್ರಮಾಣಗಳನ್ನು ಮಾಡುತ್ತಾ ಚುನಾವಣಾ ಕಣದಲ್ಲಿ ಹೋರಾಡಿದ್ದರು. ವಿಧಾನಸಬೆಯಲ್ಲಿ ಅತಂತ್ರ ಪರಿಸ್ಥಿತಿ ಬಂದಾಗಲೂ ಇವರ ಒಲವು ಬಿಜೆಪಿ ಜತೆ ಹೋಗುವುದೇ ಆಗಿತ್ತು. ಆದರೆ, ನಾಯಕರ ಮಟ್ಟದಲ್ಲಿ ಆದ ತೀರ್ಮಾನಗಳನ್ನು ಗತ್ಯಂತರವಿಲ್ಲದೆ ಒಪ್ಪಿಕೊಂಡಿದ್ದರು. ನಾಯಕರು ಆಣೆ-ಪ್ರಮಾಣಗಳನ್ನು ಮರೆತು ಒಂದಾದರೂ ಕಾರ್ಯಕರ್ತರು ಮಾತ್ರ ಒಂದಾಗಲಿಲ್ಲ. ಇದಕ್ಕೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ. ಆದರೆ, ಬಿಜೆಪಿ ಕಾರ್ಯಕರ್ತರ ಜತೆ ಸೈದ್ಧಾಂತಿಕ ಸಂಘರ್ಷ ಇದೆಯೇ ಹೊರತು ನೇರಾನೇರ ಹಣಾಹಣಿ ಇಲ್ಲ. ಹೀಗಾಗಿ ಅವರಿಗೂ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿಯೇ ಪರವಾಗಿಲ್ಲ.

ಸದ್ಯ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿಸಿದ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಪಾಲಿಗೆ ವಿಲನ್ ಆಗಿರಬಹುದು. ಆದರೆ, ಪಕ್ಷ ಮತ್ತು ವೈಯಕ್ತಿಕ ಭವಿಷ್ಯದ ದೃಷ್ಟಿಯಿಂದ ಇವರಿಗೆ ಕಾಂಗ್ರೆಸ್ ಗಿಂತ ಬಿಜೆಪಿಯೇ ವಾಸಿ ಎನ್ನುವಂತಾಗಿದೆ. ಇವರ ಅಭಿಪ್ರಾಯಕ್ಕೆ ನಾಯಕರು ಮನ್ನಣೆ ನೀಡದೇ ಇದ್ದರೆ ಮುಂದೆ ಜೆಡಿಎಸ್ ಪಕ್ಷಕ್ಕೆ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಾದರೂ ಅಚ್ಚರಿಯಲ್ಲ.

RS 500
RS 1500

SCAN HERE

don't miss it !

ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ; ಸಚಿವ ಸ್ಥಾನಕ್ಕೆ ಸಾಜಿ ಚೆರಿಯನ್ ರಾಜೀನಾಮೆ
ದೇಶ

ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ; ಸಚಿವ ಸ್ಥಾನಕ್ಕೆ ಸಾಜಿ ಚೆರಿಯನ್ ರಾಜೀನಾಮೆ

by ಪ್ರತಿಧ್ವನಿ
July 6, 2022
ಅಮರಿಂದರ್‌ ಸಿಂಗ್ ಪಕ್ಷ ಬಿಜೆಪಿ ಜೊತೆ ವಿಲೀನ?
ದೇಶ

ಅಮರಿಂದರ್‌ ಸಿಂಗ್ ಪಕ್ಷ ಬಿಜೆಪಿ ಜೊತೆ ವಿಲೀನ?

by ಪ್ರತಿಧ್ವನಿ
July 1, 2022
ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ ಜೆಟ್ ವಿಮಾನ
ಇದೀಗ

ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ ಜೆಟ್ ವಿಮಾನ

by ಪ್ರತಿಧ್ವನಿ
July 5, 2022
ದೇಶದಲ್ಲಿ ನಿರುದ್ಯೋಗವೇ ಇಲ್ಲ ಎಂದ ತೇಜಸ್ವಿ ಸೂರ್ಯ ಮಾತು ಎಂಥ ಹಸೀಸುಳ್ಳು?
ದೇಶ

ಸಿಎಂ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ : ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ತೇಜಸ್ವಿ ಸೂರ್ಯ!

by ಪ್ರತಿಧ್ವನಿ
July 5, 2022
ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!
ದೇಶ

ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!

by ಪ್ರತಿಧ್ವನಿ
June 30, 2022
Next Post
ಕೊಳವೆ ಬಾವಿ ಹಂಚಿಕೊಂಡು ಜಲ ಮಹತ್ವ ಸಾರಿದ ಧನ್ವಂತರಿ ನಗರ

ಕೊಳವೆ ಬಾವಿ ಹಂಚಿಕೊಂಡು ಜಲ ಮಹತ್ವ ಸಾರಿದ ಧನ್ವಂತರಿ ನಗರ

ಕಾನೂನು ವಿಶ್ಲೇಷಕರನ್ನೇ ಗೊಂದಲಕ್ಕೆ ತಳ್ಳಿದ ಶಾಸಕರ ಅನರ್ಹತೆ ಆದೇಶ

ಕಾನೂನು ವಿಶ್ಲೇಷಕರನ್ನೇ ಗೊಂದಲಕ್ಕೆ ತಳ್ಳಿದ ಶಾಸಕರ ಅನರ್ಹತೆ ಆದೇಶ

ತಮ್ಮ ಹಗ್ಗದಿಂದ ತಾವೇ ಹೆಡೆಮುರಿ ಕಟ್ಟಿಸಿಕೊಂಡರೇ ಸ್ಪೀಕರ್

ತಮ್ಮ ಹಗ್ಗದಿಂದ ತಾವೇ ಹೆಡೆಮುರಿ ಕಟ್ಟಿಸಿಕೊಂಡರೇ ಸ್ಪೀಕರ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist