ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಸಂಕಷ್ಟದ ಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಹೇಳಿದೆ.
52 ವರ್ಷವಯಸ್ಸಿನ ಭವರ್‌ಲಾಲ್ ಸುಜಾನಿ ಎಂಬ ರೋಗಿಗೆ 18 ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದವು. ಈ ಕಾರಣದಿಂದಾಗಿ ರೋಗಿಯು ಮೃತಪಟ್ಟಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ರೋಗಿಯಲ್ಲಿ ಐಎಲ್‌ಐ (ILI)ಯ ರೋಗ ಲಕ್ಷಣಗಳು ಇದ್ದುದರಿಂದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಬೆಡ್ ಅಥವಾ ವೆಂಟಿಲೇಟರ್‌ನ ಕೊರತೆಯ ಕಾರಣ ನೀಡಿ ರೋಗಿಯನ್ನು ದಾಖಲು ಮಾಡಲು ಆಸ್ಪತ್ರೆಗಳು ಒಪ್ಪಿಕೊಂಡಿರಲಿಲ್ಲ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆರೋಗ್ಯ ಇಲಾಖೆಯು ಎಲ್ಲಾ ಅಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಕೆಪಿಎಮ್‌ಇ ಕಾಯ್ದೆಯಡಿಲಲ್ಲಿ ನೋಂದಣಿಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಆರೋಗ್ಯ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ. ಖಾಸಗಿ ಆಸ್ಪತ್ರೆಗಳು ಕೊವಿಡ್-19 ಅಥವಾ ಕೋವಿಡ್-19ನ ರೋಗ ಲಕ್ಷಣಗಳನ್ನು ಒಳಗೊಂಡ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
Hospitals denying treatment to patients during this critical time of pandemic outbreak will not be spared and will be dealt stringently.@CMofKarnataka @BSYBJP @drashwathcn @sriramulubjp @mla_sudhakar @nimmasuresh @RAshokaBJP @CovidKarnataka @DIPR_COVID19 @Karnataka_DIPR pic.twitter.com/EhSVpKfeET
— PANKAJ KUMAR PANDEY, IAS (@iaspankajpandey) July 1, 2020
“ಮರಣಹೊಂದಿರುವ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ನೀವು ಕಾಯ್ದೆಯನ್ನು ಉಲಕ್ಲಂಘಿಸಿದ್ದೀರಾ. ಹೀಗಾಗಿ ನಿಮ್ಮ ವಿರುದ್ದ ಕೆಪಿಎಂಇ ಕಾಯ್ದೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಯಾಕೆ ಕ್ರಮ ಕೈಗೊಳ್ಳಬಾರದು,” ಎಂದು ನೋಟಿಸ್ ನೀಡಿದ್ದು 24 ಗಂಟೆಗಳ ಒಳಗಾಗಿ ಉತ್ತರಿಸಲು ಸೂಚಿಸಿದೆ.
