ಕೋವಿಡ್ ಚಿಕಿತ್ಸೆಗೆ ಬೆಂಗಳೂರಿನ 16 ಆಸ್ಪತ್ರೆಗಳು ಸಿದ್ದ

ಬೆಂಗಳೂರಿನಾದ್ಯಂತ ಏರಿಕೆಯಾಗುತ್ತಿರುವ ಕರೋನಾ ಸೋಂಕಿನ ಪ್ರಮಾಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೆಚ್ಚಿನ ಆಸ್ಪತ್ರೆ ಹಾಗೂ ಕೋವಿಡ್‌ ಕೇಂದ್ರಗಳನ್ನು ಗುರುತಿಸಿದೆ. ಈಗಲೇ ಎಚ್ಚೆತ್ತುಕೊಂಡಲ್ಲಿ ಮಾತ್ರ ಮುಂದಾಗಬಹುದಾದಂತಹ ಪ್ರಮಾದವನ್ನು ತಪ್ಪಿಸಲು ಸಾಧ್ಯ ಎಂಬ ಸತ್ಯ ಸರ್ಕಾರಕ್ಕೆ ಮನವರಿಕೆಯಾದಂತಿದೆ.

ರೋಗ ಲಕ್ಷಣ ಇಲ್ಲದಂತಹ ಸೋಂಕಿತರ ಚಿಕಿತ್ಸೆಗಾಗಿ ಮೂರು ಕೋವಿಡ್‌ ಕೇರ್‌ ಕೇಂದ್ರಗಳನ್ನು ಗುರುತಿಸಿದೆ. ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ಶ್ರೀ ರವಿಶಂಕರ ಆಶ್ರಮ, ಕಂಠೀರವ ಹಾಗೂ ಕೋರಮಂಗಲ ಸ್ಟೇಡಿಯಂಗಳನ್ನು ಈಗಾಗಲೇ ಗುರುತಿಸಲಾಗಿದೆ.

ಸಣ್ಣ ಪ್ರಮಾಣದ ಅಥವಾ ಮಧ್ಯಮ ಪ್ರಮಾಣದ ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತರ ಆರೈಕೆಗಾಗಿ 16 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ ಆಸ್ಪತ್ರೆಗಳಲ್ಲಿನ ಸುಮಾರು 1330 ಬೆಡ್‌ಗಳು ಕೋವಿಡ್‌ ಸೋಂಕಿತರ ಚಿಕೆತ್ಸೆಗಾಗಿ ಮೀಸಲಿರಲಿವೆ. ಇವುಗಳಲ್ಲಿ 167 ಐಸಿಯು ಬೆಡ್‌ಗಳು ಹಾಗೂ 92 ವೆಂಟಿಲೇಟರ್‌ ಬೆಡ್‌ಗಳಿರಲಿವೆ.

ಸರ್‌ ಸಿ ವಿ ರಾಮನ್‌ ಆಸ್ಪತ್ರೆ, ಕೆಸಿಜಿ, ರಾಜಾಜಿನಗರ, ಇಂದಿರಾನಗರ ಮತ್ತು ಪೀಣ್ಯ ಇಎಸ್‌ಐ ಆಸ್ಪತ್ರೆ, ED ಆಸ್ಪತ್ರೆ, ಕಮಾಂಡ್‌ ಆಸ್ಪತ್ರೆ, ಜಯನಗರ, ಕೆ ಆರ್‌ ಪುರಂ, ಯಲಹಂಕ, ಆನೆಕಲ್‌, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ದೇವನಹಳ್ಳಿಯಲ್ಲಿರುವ ಜನರಲ್‌ ಆಸ್ಪತ್ರೆ ಮತ್ತು ಕುಷ್ಟರೋಗ ಆಸ್ಪತ್ರೆಗಳನ್ನು ಕೋವಿಡ್‌ ಚಿಕೆತ್ಸಗೆ ಮೀಸಲಿರಿಸಲಾಗಿದೆ.

ಇನ್ನು ಕೆಲವೊಂದು ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳು ಕೂಡಾ ಕೋವಿಡ್‌ ಚಿಕಿತ್ಸೆ ನೀಡಲು ಸಜ್ಜಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...