ಕರ್ನಾಟಕದ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಮೇ 4 ರ ಸಂಜೆ ಐದು ಗಂಟೆಗೆ ಪ್ರಕಟಿಸಿದ ಪತ್ರಿಕಾ ಪ್ರಕಟನೆಯ ಪ್ರಕಾರ ರಾಜ್ಯದಲ್ಲಿ ಇದುವರೆಗೂ 651 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು 321 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 27 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಮೇ 03 ಸಂಜೆ 5 ರಿಂದ ಮೇ 04 ಸಂಜೆ 5ರ ವರೆಗೆ 37 ಹೊಸ ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಇವುಗಳಲ್ಲಿ ದಾವಣಗೆರೆಯಲ್ಲಿ 22 ಪ್ರಕರಣಗಳು ಪತ್ತೆಯಾಗಿದ್ದು, ಬೀದರಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ. ಮಂಡ್ಯ ಮತ್ತು ಕಲಬುರಗಿಯಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿದ್ದು, ವಿಜಯಪುರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಹಾವೇರಿಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ದಾವಣಗೆರೆಯಲ್ಲಿ ಪತ್ತೆಯಾದ 22 ಪ್ರಕರಣಗಳಲ್ಲಿ 21 ಪ್ರಕರಣಗಳ ವರದಿ ನಿನ್ನೆ ಸಂಜೆಯ ವೇಳೆಗೆ ಲಭ್ಯವಾಗಿದ್ದು, ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದವರಿಂದ ಇವರಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಆಕ್ಟಿವ್ ಆಗಿರುವ 302 ಪ್ರಕರಣಗಳಲ್ಲಿ 296 ಮಂದಿ ವಿವಿಧ ಆಸ್ಪತ್ರೆಗಳ ಪ್ರತ್ಯೇಕಿಸಿದ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ. 06 ಮಂದಿಯ ಪರಿಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಡ್-19 ಪ್ರಕರಣಗಳ ಆಧಾರದ ಮೇಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ಗಳನ್ನು ವಿವಿಧ ವಲಯಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಪಾದರಾಯನಪರ ಮತ್ತು ಹೊಂಗಸಂದ್ರ ವಾರ್ಡ್ ಕೆಂಪು ವಲಯದಲ್ಲಿದ್ದರೆ, ಕಿತ್ತಳೆ ವಲಯದಲ್ಲಿ 9, ಹಳದಿ ವಲಯದಲ್ಲಿ 14 ವಾರ್ಡ್ಗಳಿವೆ. ಇನ್ನುಳಿದ ವಾರ್ಡ್ಗಳು ಹಸಿರು ವಲಯದಲ್ಲಿವೆ.
ಕೋವಿಡ್19 ಪ್ರಕರಣಗಳ ಆಧಾರದ ಮೇಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಗಳನ್ನು ವಿವಿಧ ವಲಯಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ 2 ವಾರ್ಡ್ ಕೆಂಪು ವಲಯದಲ್ಲಿದ್ದರೆ, ಆರೆಂಜ್ ನಲ್ಲಿ 9 , ಹಳದಿಯಲ್ಲಿ 14 ವಾರ್ಡ್ ಗಳಿವೆ. ಇನ್ನುಳಿದ ವಾರ್ಡ್ ಗಳು ಹಸಿರು ವಲಯದಲ್ಲಿವೆ.#ಮನೆಯಲ್ಲೇಇರಿ#KarnatakaFightsCorona pic.twitter.com/Q5I0SWxL9M
— Karnataka Varthe (@KarnatakaVarthe) May 2, 2020