• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

“ಓವೈಸಿಗೆ ನೀಡುವ ಪ್ರತಿಯೊಂದು ಮತ ಭಾರತಕ್ಕೆ ವಿರುದ್ಧ” – ತೇಜಸ್ವಿ ಸೂರ್ಯ

by
November 24, 2020
in ದೇಶ
0
"ಓವೈಸಿಗೆ ನೀಡುವ ಪ್ರತಿಯೊಂದು ಮತ ಭಾರತಕ್ಕೆ ವಿರುದ್ಧ" - ತೇಜಸ್ವಿ ಸೂರ್ಯ
Share on WhatsAppShare on FacebookShare on Telegram

ಇತ್ತೀಚೆಗಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದೆ. ತೆಲಂಗಾಣ, ಮಹಾರಾಷ್ಟ್ರ ಬಳಿಕ ಬಿಹಾರಕ್ಕೂ ತನ್ನ ನೆಲೆ ವಿಸ್ತರಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಮುಂದಿನ ದಿನಗಳಲ್ಲಿ ಇಡೀ ದೇಶಾದ್ಯಂತ ಎಐಎಂಐಎಂ ಪಕ್ಷ ಸಂಘಟನೆ ಮಾಡುವ ಗುರಿ ಹಾಕಿಕೊಂಡಿದ್ದಾರೆ.

ADVERTISEMENT

ಹೀಗಿರುವಾಗ ಓವೈಸಿ ಬಿಜೆಪಿ ಬಿ ಟೀಮ್‌, ಕಾಂಗ್ರೆಸ್‌ ಸೋಲಿಗೆ ಇವರೇ ಕಾರಣ ಎಂದು ಹಲವರು ದೂರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೇ ಪಶ್ಚಿಮ ಬಂಗಾಳದ ನಂತರ ಹೈದರಾಬಾದ್‌ಗೆ ಭೇಟಿ ನೀಡಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅಸಾದುದ್ದೀನ್ ಓವೈಸಿ ವಿರುದ್ಧ ಕುಟುಕಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೈದರಾಬಾದ್‌ನ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಬಿಜೆಪಿ ನಡೆಸುತ್ತಿರುವ ಪ್ರಚಾರ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಇವರು, ಓವೈಸಿ ಮೊಹಮ್ಮದ್ ಅಲಿ ಜಿನ್ನಾ ಅವತಾರ. ಓವೈಸಿಗೆ ಹಾಕುವ ಒಂದೊಂದು ಮತವೂ ಭಾರತದ ವಿರುದ್ಧ ಎಂದು ಹೇಳಿದ್ದಾರೆ.

Also Read: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?

“ಭಾರತದಲ್ಲಿ ಓವೈಸಿ ಸಹೋದರರು ಕೋಮು ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಅವಕಾಶ ನೀಡದೆ ರೋಹಿಂಗ್ಯಾ ಮುಸ್ಲಿಮರು ದೇಶದೊಳಗೆ ನುಸುಳುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ” ಎಂದು ತೇಜಸ್ವಿ ಆರೋಪಿಸಿದರು.

ಎಐಎಂಐಎಂ ನೀವು ಹೈದರಬಾದಿನಲ್ಲಿ ಮತ ಹಾಕಿದರೇ ಓವೈಸಿ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಬಲಿಷ್ಠರಾಗಲೂ ಮುಂದಾಗುತ್ತಾರೆ. ಓವೈಸಿ ಜಿನ್ನಾನ ಹೊಸ ಅವತಾರ. ಯಾವುದೇ ಕಾರಣಕ್ಕೆ ಇಂತವರು ಬೆಳೆಯಲು ಬಿಡಬಾರದು. ಬಿಜೆಪಿಗೆ ನೀಡುವ ಪ್ರತಿಯೊಂದು ಮತ ಭಾರತ ಮತ್ತು ಹಿಂದುತ್ವದ ಪರ ಎಂದರು.

Also Read: ಬಿಹಾರ: ಯಾವುದೇ ಪಕ್ಷದ ‘ಬಿ’ ಟೀಂ ಆಗದೆ ಗೆಲುವು ಸಾಧಿಸಿರುವ ಓವೈಸಿಯ AIMIM

Tags: Asaduddin OwaisiMP Tejasvi suryaTejasvi Surya
Previous Post

ಗ್ರಾಮ ಪಂಚಾಯಿತಿ ಚುನಾವಣೆ; ಕಾಂಗ್ರೆಸ್, BJPಯನ್ನು ಸೋಲಿಸಲು JDS ಭರ್ಜರಿ ಪ್ಲಾನ್

Next Post

“ಕರ್ನಾಟಕದ ಮುಂದಿನ ಸಿಎಂ ಡಿಕೆಶಿ” – ಕಾಂಗ್ರೆಸ್ ಕಾರ್ಯಕರ್ತರಿಂದ ಹೀಗೊಂದು ಕ್ಯಾಂಪೇನ್

Related Posts

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !
ಅಂಕಣ

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by ಪ್ರತಿಧ್ವನಿ
February 14, 2026
0

ವಿಶೇಷ ಲೇಖನ : ಸನತ್‌ ರೈ, ಪತ್ರಕರ್ತರು.. ಬೆಂಗಳೂರು :  ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ...

Read moreDetails
Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

February 14, 2026
ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
"ಕರ್ನಾಟಕದ ಮುಂದಿನ ಸಿಎಂ ಡಿಕೆಶಿ" - ಕಾಂಗ್ರೆಸ್ ಕಾರ್ಯಕರ್ತರಿಂದ ಹೀಗೊಂದು ಕ್ಯಾಂಪೇನ್

"ಕರ್ನಾಟಕದ ಮುಂದಿನ ಸಿಎಂ ಡಿಕೆಶಿ" - ಕಾಂಗ್ರೆಸ್ ಕಾರ್ಯಕರ್ತರಿಂದ ಹೀಗೊಂದು ಕ್ಯಾಂಪೇನ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada