Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಐಸಿಸಿ ವಿಶ್ವಕಪ್| ಧೋನಿ ಗ್ಲೌಸ್ ಸೃಷ್ಟಿಸಿದ ವಿವಾದ, ಐಸಿಸಿ- ಬಿಸಿಸಿಐ ಜಟಾಪಟಿ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಧರಿಸಿದ್ದ ಸೇನಾ ಬಲಿದಾನ ಲಾಂಛನವಿರುವ ಗ್ಲೌಸ್ ತೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ.
ಐಸಿಸಿ ವಿಶ್ವಕಪ್
Pratidhvani Dhvani

Pratidhvani Dhvani

June 7, 2019
Share on FacebookShare on Twitter

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಧರಿಸಿದ್ದ ಸೇನಾ ಬಲಿದಾನ ಲಾಂಛನವಿರುವ ಗ್ಲೌಸ್ ತೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಗ್ಲೌಸ್ ನಿಂದ ಸೇನಾ ಲಾಂಛನ ತೆಗೆಯುವುದಕ್ಕೆ ಸೂಚನೆ ನೀಡಿ ಎಂಬ ಐಸಿಸಿ ಬಿಸಿಸಿಐಗೆ ಸೂಚನೆಯೂ ಬಂದಿದೆ.ಸೌದಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಇದರ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು.

ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ.ಧೋನಿ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ, ಟಿವಿ ರೀಪ್ಲೆ ವೇಳೆ ಧೋನಿ ಸ್ಟಂಪೌಂಟ್ ಅನ್ನು ಜೂಮ್ ಮಾಡಿ ತೋರಿಸುವಾಗ ಧೋನಿ ಗ್ಲೌಸ್ ಮೇಲಿದ್ದ ಸೈನಿಕರ ಬಲಿದಾನದ ಲೋಗೋ ಕೂಡ ಕಂಡಿತು. ಧೋನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಯಿತು.

ಇನ್ನು ತಮ್ಮ ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯಲ್ಲಿ ಕೂಡ ಪಾಲ್ಗೊಂಡಿದ್ದರು. ಐಸಿಸಿ ತಕರಾರು ಕುರಿತು ಬಿಸಿಸಿಐ ಸ್ಪಷ್ಟ ನಿಲುವು ಇನ್ನು ತಳೆದಿಲ್ಲ. ಆದರೆ ಧೋನಿಯ ಪರವಾಗಿ ನಿಲ್ಲುವು ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ.

ಕಮಿಟಿ ಆಫ್ ಆಡ್ಮಿನಿಸ್ಟ್ರೇಟರ್ಸ್ ನ ಅಧ್ಯಕ್ಷ ವಿನೋದ್ ರಾಯ್ ಧೋನಿಗೆ ಸೇನಾ ಬಲಿದಾನದ ಬ್ಯಾಡ್ಜ್ ನ್ನು ಧರಿಸಿ ಪಂದ್ಯವನ್ನಾಡಲು ಅನುಮತಿ ನೀಡಬೇಕೆಂದು ಬಿಸಿಸಿಐ ಐಸಿಸಿಗೆ ಮನವಿ ಮಾಡುವುದಾಗಿ ತಿಳಿಸಿರುವುದು ಬಿಸಿಸಿಐ ಧೋನಿ ಪರ ನಿಲುವಿಗೆ ಬಲ ನೀಡಿದೆ.

ಐಸಿಸಿ ವರ್ಲ್ಡ್‌ ಕಪ್‌ ಕೂಡ ಸೈನ್ಯ ಮತ್ತು ದೇಶಪ್ರೇಮದ ಚರ್ಚೆಯ ವೇದಿಕೆಯಾಗಿದೆ. ಇದಕ್ಕೆಲ್ಲಾ ಕಾರಣ ಭಾರತ ಕ್ರಿಕೆಟ್‌ ತಂಡದ ಆಟಗಾರ ಧೋನಿ ತೊಟ್ಟ ಗ್ಲೌಸ್‌!

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೇಶಭಕ್ತಿಯದ್ದೇ ಸದ್ದು. ಅದೀಗ ಕ್ರಿಕೆಟ್‌ನಲ್ಲೂ ಕಾಣಿಸಿಕೊಂಡಿದ್ದು, ಹೆಮ್ಮೆಯ ಕ್ರಿಕೆಟಿಗ ಎಂ ಎಸ್‌ ಧೋನಿಯವರನ್ನು ವಿವಾದದ ಕೇಂದ್ರವಾಗಿಸಿದೆ.

ಇನ್ನೊಂದೆಡೆ ಪಾಕ್‌ ಸಚಿವ ಫವಾಜ್ ಹುಸೇನ್ ಧೋನಿಯನ್ನು ಟೀಕಿಸಿ ಟ್ವೀಟ್‌ ಮಾಡಿದ್ದಾರೆ, ‘ಎಂ ಎಸ್‌ ಧೋನಿ ಇಂಗ್ಲೆಂಡ್‌ ಗೆ ತೆರಳಿರುವುದು ಕ್ರಿಕೆಟ್‌ ಆಡಲಿಕ್ಕೆ ಹೊರತು ಮಹಾಭಾರತ ಯುದ್ಧ ಮಾಡಲಿಕ್ಕಲ್ಲ. ಭಾರತೀಯ ಮಾಧ್ಯಮಗಳಲ್ಲಿ ಎಂತಹ ವಿಡಂಬನಾತ್ಮಕ ಚರ್ಚೆ, ಭಾರತೀಯ ಮಾಧ್ಯಮದ ಒಂದು ವಿಭಾಗವು ಯುದ್ಧದ ಬಗ್ಗೆ ತುಂಬಾ ಗೀಳನ್ನು ಹೊಂದಿದೆ. ಹಾಗಾಗಿ, ಅವರನ್ನು ಸಿರಿಯಾ, ಅಫ್ಘಾನಿಸ್ತಾನ ಹಾಗೂ ರವಾಂಡ್ ಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು. ಮೂರ್ಖರು.!”

ಮೂಲ ಟ್ವೀಟ್‌ ಇಲ್ಲಿದೆ:

#DhoniKeepTheGlove | This is neither political or religious. MS Dhoni is actually Lt. Col MS Dhoni. Dhoni's wearing an insignia that is part of his regiment: Major Gaurav Arya (Retd.), Consulting Editor, Strategic Affairs pic.twitter.com/GDaylxOxV7

— Republic (@republic) June 6, 2019


Dhoni is in England to play cricket not to for MahaBharta , what an idiotic debate in Indian Media,a section of Indian media is so obsessed with War they should be sent to Syria, Afghanistan Or Rawanda as mercenaries…. #Idiots https://t.co/WIcPdK5V8g

— Ch Fawad Hussain (@fawadchaudhry) June 6, 2019


ಹೆಚ್ಚು ಓದಿದ ಸ್ಟೋರಿಗಳು

ಪಾಲಿಕೆ ಆವರಣದಲ್ಲೇ ಕ್ರಿಕೆಟ್ ಆಡಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಯುವಕರು

ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಉಚಿತ ಸರ್ಕಾರಿ ಬಸ್ ಸೇವೆ: ಸಚಿವ ಎಸ್.ಟಿ.ಸೋಮಶೇಖರ್

ಕ್ರೆಡಿಟ್ ಪಾಲಿಟಿಕ್ಸ್ : ಪ್ರತಾಪ್ ಸಿಂಹ ಪಂಥಾಹ್ವಾನಕ್ಕೆ ಡೇಟ್ ಫಿಕ್ಸ್ ಮಾಡಿದ ಕಾಂಗ್ರೆಸ್

RS 500
RS 1500

SCAN HERE

don't miss it !

ಉದಯಪುರ ದರ್ಜಿ ಕೊಲೆ ಪ್ರಕರಣ; ಕನ್ಹಯ್ಯಾ ಕುಟುಂಬಸ್ಥರನ್ನು ಭೇಟಿ ಮಾಡಿದ ರಾಜಸ್ಥಾನ ಸಿಎಂ ಗೆಹ್ಲೋಟ್
ದೇಶ

ಉದಯಪುರ ದರ್ಜಿ ಕೊಲೆ ಪ್ರಕರಣ; ಕನ್ಹಯ್ಯಾ ಕುಟುಂಬಸ್ಥರನ್ನು ಭೇಟಿ ಮಾಡಿದ ರಾಜಸ್ಥಾನ ಸಿಎಂ ಗೆಹ್ಲೋಟ್

by ಪ್ರತಿಧ್ವನಿ
June 30, 2022
ಹಿರಿಯ ನಟ ರೈಮೋಹನ್‌ ಫರೀದಾ ಶವ ಪತ್ತೆ; ತನಿಖೆಗೆ ಆದೇಶ
ದೇಶ

ಹಿರಿಯ ನಟ ರೈಮೋಹನ್‌ ಫರೀದಾ ಶವ ಪತ್ತೆ; ತನಿಖೆಗೆ ಆದೇಶ

by ಪ್ರತಿಧ್ವನಿ
June 24, 2022
ದ್ವೇಷ ಭಾಷಣ ದೆಹಲಿ ಪೊಲೀಸರಿಗೆ ಚಾಟಿ ಬೀಸಿದ ಸುಪ್ರೀಂ
ದೇಶ

ಗುಜರಾತ್ ಗಲಭೆ; ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ ಸುಪ್ರೀಂ ಕೋರ್ಟ್

by ಪ್ರತಿಧ್ವನಿ
June 24, 2022
ಇಡಿ ವಿಚಾರಣೆಗೆ ಈಗ ಹಾಜರಾಗುವುದಿಲ್ಲ, ಪಕ್ಷದೊಂದಿಗೆ ನಿಲ್ಲುತ್ತೇನೆ: ಸಂಜಯ್‌ ರಾವತ್
ದೇಶ

ಇಡಿ ವಿಚಾರಣೆಗೆ ಈಗ ಹಾಜರಾಗುವುದಿಲ್ಲ, ಪಕ್ಷದೊಂದಿಗೆ ನಿಲ್ಲುತ್ತೇನೆ: ಸಂಜಯ್‌ ರಾವತ್

by ಪ್ರತಿಧ್ವನಿ
June 28, 2022
ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಕರ್ನಾಟಕ

ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

by ಪ್ರತಿಧ್ವನಿ
June 28, 2022
Next Post
ಐಸಿಸಿ ವಿಶ್ವಕಪ್‌

ಐಸಿಸಿ ವಿಶ್ವಕಪ್‌ | ಟಾಪ್ 1 ಸ್ಥಾನದಲ್ಲಿ ನ್ಯೂಜಿಲೆಂಡ್‌ ತಂಡ

ಐಸಿಸಿ ವಿಶ್ವಕಪ್

ಐಸಿಸಿ ವಿಶ್ವಕಪ್ | ಟೂರ್ನಿಯಿಂದ ಹೊರಬಿದ್ದ ಆಫ್ಘಾನಿಸ್ತಾನದ ಸ್ಟಾರ್‌ ಆಟಗಾರ

ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಳಕದಲ್ಲಿರುವ ಆಟಗಾರರು

ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಳಕದಲ್ಲಿರುವ ಆಟಗಾರರು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist