Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಹ್ಮದ್ ಪಟೇಲ್-ಗಡ್ಕರಿ ಭೇಟಿ ರಾಜಕೀಯ ಧ್ರುವೀಕರಣದ ಸೂಚನೆಯೇ?

ಅಹ್ಮದ್ ಪಟೇಲ್-ಗಡ್ಕರಿ ಭೇಟಿ ರಾಜಕೀಯ ಧ್ರುವೀಕರಣದ ಸೂಚನೆಯೇ?
ಅಹ್ಮದ್ ಪಟೇಲ್-ಗಡ್ಕರಿ ಭೇಟಿ ರಾಜಕೀಯ ಧ್ರುವೀಕರಣದ ಸೂಚನೆಯೇ?

November 7, 2019
Share on FacebookShare on Twitter

ಕಳೆದ ತಿಂಗಳು‌ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಣದಲ್ಲಿ ಇದ್ದೂ ಇಲ್ಲದಂತಿದ್ದ ಅಥವಾ ಮೋದಿ-ಶಾ ಜೋಡಿಯ ಅವಕೃಪೆಗೆ ಒಳಗಾಗಿ ಬದಿಗೆ ಸರಿಸಲ್ಪಟ್ಟಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಮಹಾರಾಷ್ಟ್ರದಲ್ಲಿ ಧುತ್ ಎಂದು ಎದ್ದು ನಿಂತಿದೆ. ಮೋದಿ-ಶಾ ಗಿಂತಲೂ ಮೊದಲೇ ಕೇಂದ್ರ ಸರ್ಕಾರ ಹಾಗೂ ಪಕ್ಷದಲ್ಲಿ ಮಹತ್ವದ ಸ್ಥಾನಗಳನ್ನು ನಿಭಾಯಿಸಿದ್ದ ಗಡ್ಕರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನಿಷ್ಠಾವಂತ. ಇದರ ಜೊತೆಗೆ ಪಕ್ಷಾತೀತವಾಗಿ ಎಲ್ಲಾ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಗಡ್ಕರಿ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಮೋದಿ-ಶಾ ಜೋಡಿಯ ನಿದ್ದೆಗೆಡಿಸುವ ಅಹ್ಮದ್ ಪಟೇಲ್ ಅವರು ನಾಗ್ಪುರದಲ್ಲಿ ಭೇಟಿ ಮಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಹಾಗೂ ಗಮನಾರ್ಹ ವಿದ್ಯಮಾನ.

ಹೆಚ್ಚು ಓದಿದ ಸ್ಟೋರಿಗಳು

ಮೂರ್ನಾಲ್ಕು ಬಾರಿ ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ : ಸದಾನಂದ ಗೌಡ

ಇಂಧನ ಸಚಿವ ಜಾರ್ಜ್​ ಹಾದಿ ತಪ್ಪಿಸಿದ್ದು ಯಾರು..? ಮತ್ತು ಯಾಕೆ..?

ರೈಲು ದುರುಂತದ ಹಾನಿಯನ್ನ ಸರಿಪಡಿಸಲು ಕೇಂದ್ರ ಸರ್ಕಾರ ಅಗತ್ಯಕ್ರಮ ಕೈಗೊಳ್ಳಲಿದೆ : ಮಾಜಿ ಪ್ರಧಾನಿ ಹೆಚ್.ಡಿಡಿ

ಮುಖ್ಯಮಂತ್ರಿ ಪದವಿಯೂ ಸೇರಿದಂತೆ ಪ್ರಮುಖ ಖಾತೆಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಒಪ್ಪಂದಕ್ಕೆ ತಕ್ಕಂತೆ ನಡೆಯುವಂತೆ ಆಗ್ರಹಿಸುತ್ತಿರುವ ಎನ್ ಡಿಎ ಮೈತ್ರಿಕೂಟದ ಶಿವಸೇನೆಗೆ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಲು ಆಗುತ್ತಿಲ್ಲ. ಶಿವಸೇನೆಗೆ ಒಪ್ಪಿತವಾಗಬಹುದಾದ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಬೇಕು ಎಂಬುದು ಆರ್ ಎಸ್ ಎಸ್ ನ ಎರಡನೇ ಕಾರ್ಯಸೂಚಿ‌ ಎನ್ನಲಾಗುತ್ತಿದೆ. ಇದರಾಚೆಗೂ ಗಡ್ಕರಿ-ಅಹ್ಮದ್ ಪಟೇಲ್ ಭೇಟಿಯು ಇಂಥ ಕ್ಲಿಷ್ಟ ಸಂದರ್ಭದಲ್ಲಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗಡ್ಕರಿಯನ್ನು ಅಣಿಯುವ ಉದ್ದೇಶದಿಂದಲೇ ಫಡ್ನವಿಸ್ ಅವರನ್ನು ಬೆಳೆಸುವ ಕೆಲಸಕ್ಕೆ ಮೋದಿ-ಶಾ ಜೋಡಿ ಕೈಹಾಕಿತ್ತು.

ಗಡ್ಕರಿ ಸಮಾನರ ಪೈಕಿ ಬಹುತೇಕರು ನಿಧನರಾಗಿದ್ದಾರೆ. ರಾಜನಾಥ್ ಸಿಂಗ್ ತಮಗೆ ಅಪಾಯಕಾರಿಯಲ್ಲ ಎಂಬುದು ಮೋದಿ-ಶಾ ಜೋಡಿಗೆ ಚೆನ್ನಾಗಿ ಗೊತ್ತಿದೆ. ಇರುವ ಪೈಕಿ ಗಡ್ಕರಿ ಮಾತ್ರ ಪ್ರಬಲ ಪೈಪೋಟಿ ನೀಡಬಹುದು ಎಂಬುದು ಮೋದಿ-ಶಾ ಜೋಡಿಯ ಗ್ರಹಿಕೆ. ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ಅಮಿತ್ ಶಾ ಅವರು ಪ್ರಧಾನ ಮಂತ್ರಿಯಾಗುವ ಮಹತ್ವಾಕಾಂಕ್ಷೆ ಉಳ್ಳ ವ್ಯಕ್ತಿ. ಇದಕ್ಕೆ ನಿಜವಾದ ತೊಡರುಗಾಲು ಗಡ್ಕರಿ ಎಂಬುದು ಗೊತ್ತಿದ್ದೇ ಅವರನ್ನು ಬದಿಗೆ ಸರಿಸಲಾಗಿದೆ ಎನ್ನಲಾಗುತ್ತಿದೆ.

ಮತ್ತೊಂದು ವಿಶ್ಲೇಷಣೆಯ ಪ್ರಕಾರ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ಫಲಿತಾಂಶ ಹೊರಬೀಳಲಿದೆ, ಅಂತಹ ಸನ್ನಿವೇಶದಲ್ಲಿ ಗಡ್ಕರಿ ಸಂಭಾವ್ಯ ಪ್ರಧಾನಿಯಾಗಬಹುದು ಎನ್ನುವ ಚರ್ಚೆಗಳು ವ್ಯಾಪಕವಾಗಿದ್ದವು. ಇದೂ ಸಹ ಮೋದಿ-ಶಾ ಜೋಡಿಗೆ ಅಪಥ್ಯವಾಗಿತ್ತು. ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮಿಬ್ಬರ ಹೊರತಾಗಿ ಯಾರೂ ಯಜಮಾನಿಕೆಗೆ ಬರಬಾರದು ಎಂಬುದನ್ನು ಕಾಪಿಟ್ಟುಕೊಳ್ಳಲು ಮೋದಿ-ಶಾ ಜೋಡಿ ನಡೆಸುತ್ತಿರುವ ತಂತ್ರ-ಕುತಂತ್ರಗಳು ಒಂದೆರಡಲ್ಲ. ಈ ಇಬ್ಬರೂ ಮಾತೃಸಂಸ್ಥೆ ಆರ್ ಎಸ್ ಎಸ್ ಮೀರಿ ಬೆಳೆದಿದ್ದಾರೆ ಎಂಬ ಚರ್ಚೆಯೂ ಸಂಘದ ವಲಯದಲ್ಲಿದೆ. ಈ ಇಬ್ಬರನ್ನೂ ಹತೋಟಿಗೆ ತರುವ ನಿಟ್ಟಿನಲ್ಲಿ ಗಡ್ಕರಿ-ಅಹ್ಮದ್‌ ಪಟೇಲ್ ಭೇಟಿ ಮಹತ್ವ ಪಡೆದಿದೆ.

ಅಹ್ಮದ್ ಪಟೇಲ್ ಮೇಲೆ ಮೋದಿ-ಶಾ ಜೋಡಿಗೆ ಅಪಾರ ದ್ವೇಷವಿದೆ. ಇದಕ್ಕಾಗಿಯೇ ಅವರನ್ನು 2017ರ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಲು ಈ ಜೋಡಿ ಶತಪ್ರಯತ್ನ ನಡೆಸಿತ್ತು. ಆದರೆ, ಅದ್ಭುತ ತಂತ್ರಗಾರಿಕೆ ರೂಪಿಸಿದ ಕಾಂಗ್ರೆಸ್, ಮೋದಿ-ಶಾ ಜೋಡಿಯನ್ನು ಅವರದೇ ನೆಲದಲ್ಲಿ ಮಣ್ಣು ಮುಕ್ಕಿಸಿತ್ತು. ಮೋದಿ-ಶಾ ಜೋಡಿ ಅಹ್ಮದ್ ಪಟೇಲ್ ಮೇಲೆ ದ್ವೇಷ ಕಾರಲು ಮಹತ್ವವಾದ ಕಾರಣವಿದೆ. ಮೋದಿ ಆಡಳಿತದಲ್ಲಿ 2002ರಲ್ಲಿ ನಡೆದಿದ್ದ ಗುಜರಾತ್ ಹತ್ಯಾಕಾಂಡದ ಕರಾಳಮುಖ ಅನಾವರಣ ಹಾಗೂ ಅಮಿತ್ ಶಾ ಜೈಲಿಗೆ ಹೋಗುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಸದೆಬಡಿಯುವುದು ಅಮಿತ್ ಶಾ ಪ್ರತಿಕಾರದ ತಂತ್ರ. ಆದರೆ, ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಚುನಾವಣೆ ಫಲಿತಾಂಶ ಉಲ್ಟಾ ಮಾಡಲು ಯತ್ನಿಸಿದ್ದ ಅಮಿತ್ ಶಾ‌ಗೆ ಎದುರಾಗಿದ್ದು ಮಾಜಿ ಸಚಿವ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್.

ನ್ಯಾಯಾಂಗ ಬಂಧನದಲ್ಲಿದ್ದ ಡಿ ಕೆ ಶಿವಕುಮಾರ್ ಅವರನ್ನು ಅಹ್ಮದ್ ಪಟೇಲ್ ಭೇಟಿ ಮಾಡಿದ್ದರು

ವಾಸ್ತವದಲ್ಲಿ ಅಹ್ಮದ್ ಪಟೇಲ್ ಅವರನ್ನು ಸೆರೆ ಹಿಡಿಯುವ ಉದ್ದೇಶದಿಂದಲೇ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿ‌ ಸೆರೆಯಲ್ಲಿ ಇಡಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಅಂಥ ಯಾವುದೇ ಆರೋಪವನ್ನು ಶಿವಕುಮಾರ್ ಅವರು ಅಹ್ಮದ್ ಪಟೇಲ್ ವಿರುದ್ಧ ಮಾಡಿಲ್ಲ. ಈ ರಾಜಕಾರಣದ ಒಳಸುಳಿಗಳನ್ನು ಅರಿತಿರುವ ಅಹ್ಮದ್ ಪಟೇಲ್ ಅವರು ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿರುವುದನ್ನು ಸುಲಭಕ್ಕೆ‌ ತಳ್ಳಿಹಾಕಲಾಗದು. ವ್ಯಕ್ತಿ ಪೂಜೆಯನ್ನು ವಿರೋಧಿಸುವ ಆರ್ ಎಸ್ ಎಸ್ ಗುಪ್ತ ಕಾರ್ಯಸೂಚಿ ಅಹ್ಮದ್ ಪಟೇಲ್-ಗಡ್ಕರಿ ಭೇಟಿಯ‌ ಹಿಂದೆ ಕೆಲಸ ಮಾಡಿರಬಹುದೇ? ಗಡ್ಕರಿ-ಅಹ್ಮದ್ ಪಟೇಲ್ ಭೇಟಿಯ ರಾಜಕೀಯ ಸಂದೇಶವನ್ನು ದೇಶದ ಕುಖ್ಯಾತ ಜೋಡಿಯಾದ ಮೋದಿ-ಅಮಿತ್ ಶಾ ಹೇಗೆ ಸ್ವೀಕರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
4568
Next
»
loading
play
H.Vishwanath; ಗ್ಯಾರಂಟಿ ಯೋಜನೆಗಳನ್ನ ಸಿಕ್ಕ ಸಿಕ್ಕವರಿಗೆ ನೀಡಲಾಗುವುದಿಲ್ಲ | Congress guarantee | CM
play
H.Vishwanath; ಡಿ.ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ MLC H. ವಿಶ್ವನಾಥ್ ಭಾಗಿ|Devarajaarasu
«
Prev
1
/
4568
Next
»
loading

don't miss it !

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ
Top Story

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ

by ಪ್ರತಿಧ್ವನಿ
May 30, 2023
ಹಾಲಿ ಪಶುಸಂಗೋಪನೆ ಸಚಿವ ವೆಂಕಟೇಶ್ ಮೆಂಟಲ್ ಆಗಿದ್ದಾರೆ : ಪ್ರಭು ಚೌವ್ಹಾಣ್
ರಾಜಕೀಯ

ಹಾಲಿ ಪಶುಸಂಗೋಪನೆ ಸಚಿವ ವೆಂಕಟೇಶ್ ಮೆಂಟಲ್ ಆಗಿದ್ದಾರೆ : ಪ್ರಭು ಚೌವ್ಹಾಣ್

by Prathidhvani
June 6, 2023
Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!
Top Story

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

by ಪ್ರತಿಧ್ವನಿ
May 30, 2023
ಮೈಸೂರಿನಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ : ಕೋಟಿ ಕೋಟಿ ಕುಳಗಳು ಬಲೆಗೆ
ಕರ್ನಾಟಕ

ಮೈಸೂರಿನಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ : ಕೋಟಿ ಕೋಟಿ ಕುಳಗಳು ಬಲೆಗೆ

by Prathidhvani
June 1, 2023
A three-eyed, two-faced lamb is born : ಮೂರು ಕಣ್ಣು, ಎರಡು ಮುಖವುಳ್ಳ ಕುರಿ ಮರಿ ಜನನ
Top Story

A three-eyed, two-faced lamb is born : ಮೂರು ಕಣ್ಣು, ಎರಡು ಮುಖವುಳ್ಳ ಕುರಿ ಮರಿ ಜನನ

by ಪ್ರತಿಧ್ವನಿ
May 31, 2023
Next Post
ತೀವ್ರಗೊಳ್ಳುತ್ತಿರುವ  ವೈದ್ಯರ ಮುಷ್ಕರ: ಕಠಿಣವಾಗಬೇಕಿದೆ  ಸರ್ಕಾರ

ತೀವ್ರಗೊಳ್ಳುತ್ತಿರುವ  ವೈದ್ಯರ ಮುಷ್ಕರ: ಕಠಿಣವಾಗಬೇಕಿದೆ  ಸರ್ಕಾರ

ಅಶೋಕ್ ಲವಾಸಾ ವಿಚಾರಣೆಯಲ್ಲಿ ಪ್ರತೀಕಾರದ ವಾಸನೆ?

ಅಶೋಕ್ ಲವಾಸಾ ವಿಚಾರಣೆಯಲ್ಲಿ ಪ್ರತೀಕಾರದ ವಾಸನೆ?

ಸದಸ್ಯರಿಲ್ಲದೇ ಭಣಗುಡುತ್ತಿರುವ ಹಸಿರು ಪೀಠ

ಸದಸ್ಯರಿಲ್ಲದೇ ಭಣಗುಡುತ್ತಿರುವ ಹಸಿರು ಪೀಠ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist